ಅರುಣಾಚಲ ಪ್ರದೇಶ ಪಿಪಿಎಯೊಂದಿಗೆ ಮೈತ್ರಿ ಮುರಿದುಕೊಂಡ ಬಿಜೆಪಿ

ಇಟಾನಗರ್, ಆ. 11: ಎನ್‌ಇಡಿಎ ಮೈತ್ರಿಯಲ್ಲಿ ತನ್ನ ಪಾಲುದಾರ ಪಕ್ಷವಾಗಿರುವ ಪಿಪಿಎಯೊಂದಿಗೆ ಅರುಣಾಚಲ ಪ್ರದೇಶ ಬಿಜೆಪಿ ಸಂಬಂಧ ಕಡಿದುಕೊಂಡಿದೆ. ನಿನ್ನೆ ಇಲ್ಲಿ ನಡೆದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯ ಸಂದರ್ಭ ರಾಜ್ಯ ಬಿಜೆಪಿ ಅಧ್ಯಕ್ಷ ತಾಪಿರ್ ಗೌ ಈ ಬಗ್ಗೆ ಘೋಷಿಸಿದರು. ಪಿಪಿಎಯೊಂದಿಗೆ ಮೈತ್ರಿ ಕಡಿದುಕೊಂಡ ಬಿಜೆಪಿಯ ನಿರ್ಧಾರವನ್ನು ಎನ್‌ಇಡಿಎ ಸಂಚಾಲಕ ಹಿಮಾಂತ ಬಿಸ್ವಾ ಶರ್ಮಾ ಅಂಗೀಕರಿಸಿದ್ದಾರೆ.
ಅರುಣಾಚಲ ಪ್ರದೇಶ ವಿಧಾನ ಸಭೆಯಲ್ಲಿ ಒಟ್ಟು 59 ಸ್ಥಾನಗಳಿದ್ದು, ಅದರಲ್ಲಿ ಬಿಜೆಪಿ 47 ಶಾಸಕರನ್ನು ಹೊಂದಿದೆ. ಕಾಂಗ್ರೆಸ್ ಓರ್ವ ಹಾಗೂ ಪಿಪಿಎ 8 ಶಾಸಕರನ್ನು ಹೊಂದಿದೆ.
Next Story





