ಆ.13: ಸಂತ ಕ್ರಿಸ್ಟೋಫರ್ ಅಸೋಸಿಯೇಶನ್‌ನ ವಾರ್ಷಿಕೋತ್ಸವ
ಬಂಟ್ವಾಳ, ಆ.11: ಸಂತ ಕ್ರಿಸ್ಟೋಫರ್ ಅಸೋಸಿಯೇಶನ್ ಬಂಟ್ವಾಳ ವಲಯ ಮತ್ತು ಬಂಟ್ವಾಳ ಚರ್ಚ್ ಘಟಕದ 35ನೇ ವಾರ್ಷಿಕೋತ್ಸವ ಸಮಾರಂಭವನ್ನು ಆ.13ರಂದು ಬಂಟ್ವಾಳ ಇಲ್ಲಿನ ಮೊಡಂಕಾಪು ಇನ್ಫೇಟ್ ಜೀಜಸ್ ಚರ್ಚ್‌ನಲ್ಲಿ ಸಂಭ್ರಮಿಕ ಬಲಿಪೂಜೆ ನೇರವೇರಿಸಲಾಗುವುದು ಎಂದು ಅಸೋಸಿಯೇಶನ್ ಅಧ್ಯಕ್ಷ ಶಾಂತಿ ಪ್ರಕಾಶ್ ಡಿ'ಸೋಜಾ ತಿಳಿಸಿದ್ದಾರೆ.
ಪೂಜೆ ನಂತರ ನೆರೆದ ಎಲ್ಲಾ ವಾಹನಗಳ ಆಶೀರ್ವಚನ ಹಾಗೂ ವಾರ್ಷಿಕೋತ್ಸವದ ಅಂಗವಾಗಿ ಚರ್ಚ್ ಸಭಾಗೃಹದಲ್ಲಿ ಇನ್ಫೇಟ್ ಜೀಜಸ್ ಚರ್ಚ್‌ನ ಮುಖ್ಯ ಧರ್ಮಗುರು ರೆ.ಫಾ. ಮೆಕ್ಸಿಮ್ಎಲ್.ನೊರೊನ್ಹಾ ಅಧ್ಯಕ್ಷತೆಯಲ್ಲಿ ಸಮಾರಂಭ ಆಯೋಜಿಸಲಾಗಿದ್ದು, ಮುಖ್ಯ ಅತಿಥಿಗಳಾಗಿ ಉದ್ಯಮಿ ಫ್ರೆಡ್ರಿಕ್ ಡಿ'ಸೋಜಾ, ಚರ್ಚ್‌ನ ಸಹಾಯಕ ಗುರು ಫಾ. ಆಶ್ವಿನ್ ಕಾರ್ಡೊಜಾ ಮತ್ತಿತರರು ಉಪಸ್ಥಿತರಿರುವರು ಎಂದು ಕೋಶಾಧಿಕಾರಿ ಸಂದೀಪ್ ಮಿನೇಜಸ್, ಕಾರ್ಯದರ್ಶಿ ಲಿಯೋ ಬಾಸಿಲ್ ಫೆರ್ನಾಂಡಿಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದರೆ.
Next Story





