ಬಲೂನ್ ನುಂಗಿ 6 ತಿಂಗಳ ಮಗು ಮೃತ್ಯು

ನಾಸಿಕ್, ಆ. 11: ರಬ್ಬರ್ ಬಲೂನ್ ನುಂಗಿದ ಆರು ತಿಂಗಳ ಮಗುವೊಂದು ಉಸಿರಾಟದ ಸಮಸ್ಯೆ ಎದುರಿಸಿ ಮೃತಪಟ್ಟಿದೆ ಎಂದು ಪೊಲೀಸರು ಅಧಿಕಾರಿ ತಿಳಿಸಿದ್ದಾರೆ.
ಸಿಡ್ಕೋ ನಗರದ ಹನುಮಾನ್ ನಗರದಲ್ಲಿರುವ ಮನೆಯೊಂದರಲ್ಲಿ ನಿನ್ನೆ ಆಟವಾಡುತ್ತಿದ್ದ ಮಗು ನೆಲದಲ್ಲಿ ಬಿದ್ದಿದ್ದ ಬಲೂನ್ ನುಂಗಿ ಅಸ್ವಸ್ತಗೊಂಡಿತು ಎಂದು ಅಂಬಾದ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಮಗುವನ್ನು ಹೆತ್ತವರು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಗಂಭೀರಗೊಂಡಿದ್ದ ಮಗುವನ್ನು ನಾಗರಿಕ ಆಸ್ಪತ್ರೆಗೆ ದಾಖಲಿಸುವಂತೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಹೆತ್ತವರು ಮಗವನ್ನು ನಾಗರಿಕ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಮಗು ಮೃತಪಟ್ಟಿದೆ ಎಂದು ನಾಸಿಕ್ ನಾಗರಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಆನಂದ್ ಪವಾರ್ ಹೇಳಿದ್ದಾರೆ.
ಅಂಬಾದ್ ಪೊಲೀಸರು ಠಾಣೆಯಲ್ಲಿ ಆಕಸ್ಮಿಕ ಸಾವಿನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Next Story





