ಕಾಪು: ವೆಲ್ಲೂರು ಮಾದರಿಯ ತ್ಯಾಜ್ಯ ಸಂಗ್ರಹಣೆಗೆ ಚಾಲನೆ

ಕಾಪು, ಆ. 11: ಕೇಂದ್ರ ಸರ್ಕಾರಿ ಸಾಮ್ಯದ ಇಂಡಿಯನ್ ಗ್ರೀನ್ ಸರ್ವಿಸ್ ಸಂಸ್ಥೆಯ ವಿ. ಶ್ರೀನಿವಾಸನ್ ವೆಲ್ಲೂರು ಅವರು ಗೊಬ್ಬರ ತಯಾರಿಕೆ ಬಗ್ಗೆ ಪುರಸಭೆ ಅಧಿಕಾರಿಗಳು, ಪುರಸಭಾ ಸದಸ್ಯರು ಮತ್ತು ಸ್ವ ಸಹಾಯ ಗುಂಪುಗಳಿಗೆ ನೀಡಿರುವ ತರಬೇತಿ ಅನ್ವಯ ಕೋಳಿ ತ್ಯಾಜ್ಯ ಗೊಬ್ಬರ ಸಂಗ್ರಹಣೆಗೆ ಕಾಪು ಪುರಸಭೆ ಶುಕ್ರವಾರ ಚಾಲನೆ ನೀಡಲಾಯಿತು.
ಪ್ರಾಯೋಗಿಕ ಚಾಲನೆ ನೀಡಿದ ಪುರಸಭೆ ಮುಖ್ಯಾಧಿಕಾರಿ ರಾಯಪ್ಪ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿಯೇ ಪ್ರಥಮ ಎಂಬಂತೆ ಕೋಳಿ ಹಾಗೂ ಮಾಂಸದ ಅಂಗಡಿಗಳಿಂದ ಹೊರಕ್ಕೆಸೆಯಲ್ಪಡುವ ತ್ಯಾಜ್ಯದಿಂದ ಕಲ್ಚರ್ (ದ್ರವ ಗೊಬ್ಬರ) ತಯಾರಿಸಿ ದುರ್ವಾಸನೆಗೆ ಮುಕ್ತಿ ನೀಡುವ, ಕೃಷಿ ಬದುಕಿಗೆ ಆಧಾರವಾಗುವ ಮತ್ತು ಪುರಸಭೆಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ತರುವ ಉದ್ದೇಶವನ್ನು ಇಟ್ಟುಕೊಂಡು ವೆಲ್ಲೂರು ಮಾದರಿಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಪುರಸಭೆ ಯೋಜನೆ ರೂಪಿಸಿದೆ ಎಂದರು.
ಪುರಸಭಾಧ್ಯಕ್ಷೆ ಸೌಮ್ಯ ಎಸ್., ಸ್ಥಾಯೀ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್, ವಿಪಕ್ಷ ನಾಯಕ ಅರುಣ್ ಶೆಟ್ಟಿ ಪಾದೂರು, ಸದಸ್ಯರಾದ ಅನಿಲ್ ಕುಮಾರ್, ಕಿರಣ್ ಆಳ್ವ, ಸುರೇಶ್ ದೇವಾಡಿಗ, ಶಾಂಭವಿ ಕುಲಾಲ್, ಅಶ್ವಿನಿ, ಮಾಲಿನಿ, ಶಾಂತಲತಾ ಶೆಟ್ಟಿ, ಸಂಜೀವಿ ಪೆಂಗಾಲ್, ರಮಾ ಶೆಟ್ಟಿ, ಮಮತಾ ಸಾಲ್ಯಾನ್, ಆರೋಗ್ಯಾಧಿಕಾರಿ ದಿನೇಶ್ ಕುಮಾರ್, ಪುರಸಭೆಯ ಅಧಿಕಾರಿ ವರ್ಗ, ಸಿಬಂದಿಗಳು ಮತ್ತು ಪೌರ ಕಾರ್ಮಿಕರು ಉಸ್ಥಿತರಿದ್ದರು.





