ಜೋಯಾಲುಕ್ಕಾಸ್ ಜ್ಯುವೆಲ್ಲರಿಯ ಬ್ರಾಂಡ್ ರಾಯಭಾರಿಯಾಗಿ ಬಾಲಿವುಡ್ ನಟಿ ಕಾಜೋಲ್
ಮಂಗಳೂರು, ಆ.12: ಜಗತ್ತಿನ ಅಚ್ಚುಮೆಚ್ಚಿನ ಜ್ಯುವೆಲ್ಲರಿ ಜೋಯಾಲುಕ್ಕಾಸ್ನ ನೂತನ ಬ್ರಾಂಡ್ ರಾಯಭಾರಿಯಾಗಿ ಖ್ಯಾತ ಬಾಲಿವುಡ್ ನಟಿ ಕಾಜೋಲ್ ದೇವಗನ್ ಅವರನ್ನು ನಿಯೋಜಿಸಲಾಗಿದೆ.
ಈ ಕುರಿತಂತೆ ಮಾತನಾಡಿರುವ ಜೋಯಾಲುಕ್ಕಾಸ್ ಸಮೂಹದ ಸಿಎಂಡಿ ಜಾಯ್ ಆಲುಕ್ಕಾಸ್, ಚಿತ್ರರಂಗದ ಅದಮ್ಯ ಸುಂದರಿ ಹಾಗೂ ಅಸಾಧಾರಣ ನಟಿಯಾಗಿರುವ ಕಾಜೋಲ್ ಅವರು ಜೋಯಾಲುಕ್ಕಾಸ್ಗೆ ಅತ್ಯಂತ ಸೂಕ್ತ ವ್ಯಕ್ತಿ. ಅವರು ಸಂಸ್ಥೆಯ ಬ್ರಾಂಡ್ ರಾಯಭಾರಿಯಾಗಿ ಕೈಜೋಡಿಸಿರುವುದು ಸಂತಸ ತಂದಿದೆ ಎಂದಿದ್ದಾರೆ.
ಅಪಾರ ಪ್ರಶಸ್ತಿಗಳಿಗೆ ಪಾತ್ರರಾಗಿರುವ, ಅನನ್ಯ ಮತ್ತು ಅತ್ಯದ್ಭುತ ನಟನೆಗೆ ಹೆಸರುವಾಸಿಯಾಗಿರುವ ಕಾಜೋಲ್ ಅವರ ಜೊತೆಗೆ ಜೋಯಾಲುಕ್ಕಾಸ್ ಸಂಸ್ಥೆಯು ಹೊಸ ಪ್ರದೇಶಗಳಲ್ಲಿ ‘ಬೃಹತ್ ಯೋಜನೆ’ಗೆ ‘ವಿಶ್ವವನ್ನೇ ಆಭರಣಗೊಳಿಸಲು’ ಮುಂದಾಗಿದೆ ಎಂದವರು ತಿಳಿಸಿದ್ದಾರೆ.
ಜೋಯಾಲುಕ್ಕಾಸ್ ಬ್ರಾಂಡ್ ಅಂಬಾಸಡರ್ ಆದ ಬಳಿಕ ಮಾತನಾಡಿರುವ ಕಾಜೋಲ್, ‘‘ನಾನು ಜೋಯಾಲುಕ್ಕಾಸ್ ಬ್ರಾಂಡ್ನ ಆರಾಧಕಿ. ಜೋಯ್ ಆಲುಕ್ಕಾಸ್ ಅವರ ಯಶೋಗಾಥೆ ನನಗೆ ಪ್ರೇರಣೆ ನೀಡಿದೆ. ನಾನು ಜಗತ್ತಿನ ಅಚ್ಚುಮೆಚ್ಚಿನ ಜ್ಯುವೆಲ್ಲರ್ ಸಂಸ್ಥೆಯ ಒಂದು ಭಾಗವಾಗಿರುವುದು ಸಂತಸ ತಂದಿದೆ’’ ಎಂದಿದ್ದಾರೆ.
ಜೋಯಾಲುಕ್ಕಾಸ್ ಜಾಗತಿಕ ಜ್ಯುವೆಲ್ಲರಿ ರೀಟೇಲ್ ಜಾಲವಾಗಿದೆ. ಭಾರತ ಸೇರಿದಂತೆ 12 ರಾಷ್ಟ್ರಗಳಾದ ಯುಎಇ, ಯುಕೆ, ಕೆನಡಾ, ಸಿಂಗಾಪುರ, ಮಲೇಶ್ಯ, ಒಮನ್, ಕತರ್, ಸೌದಿ ಅರೇಬಿಯಾ, ಬಹರೇನ್ ಹಾಗೂ ಕುವೈತ್ನಲ್ಲಿ 140 ಆಭರಣ ಮಳಿಗೆಗಳನ್ನು ಹೊಂದಿದೆ. ಕಾಜೋಲ್ ಅವರನ್ನು ಒಳಗೊಂಡ ಬೃಹತ್ ಜಾಹೀರಾತು ಆಂದೋಲನವು ಪ್ರಸ್ತುತ ತಯಾರಾಗುತ್ತಿದ್ದು, ಸಮೂಹದ ಜಾಲದೆಲ್ಲೆಡೆ ಈ ವರ್ಷದ ಅಂತ್ಯಕ್ಕೆ ಅದು ಪ್ರಚುರಗೊಳ್ಳಲಿದೆ ಎಂದು ಜೋಯಾಲುಕ್ಕಾಸ್ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಜಾನ್ ಪೌಲ್ ಆಲುಕ್ಕಾಸ್ ತಿಳಿಸಿದ್ದಾರೆ.
► ಜೋಯಾಲುಕ್ಕಾಸ್ ಸಮೂಹ
ಜೋಯಾಲುಕ್ಕಾಸ್ ಸಮೂಹವು ಬಹು ಬಿಲಿಯನ್ ಡಾಲರ್ ಜಾಗತಿಕ ವಾಣಿಜ್ಯ ಸಂಸ್ಥೆಯಾಗಿದ್ದು, ವಿವಿಧ ವ್ಯಾಪಾರೋದ್ಯಮ ಚಟುವಟಿಕೆಗಳನ್ನು ಹೊಂದಿದೆ. ಸಮೂಹದ ವಿವಿಧ ವಾಣಿಜ್ಯ ಕಾರ್ಯಚಟುವಟಿಕೆಗಳು ಭಾರತ ಸೇರಿದಂತೆ ಯುಎಸ್ಎ, ಕೆನಡಾ, ಸಿಂಗಾಪುರ, ಯುಎಇ, ಯುಕೆ, ಮಲೇಶ್ಯ, ಒಮನ್, ಕತರ್, ಸೌದಿ ಅರೇಬಿಯಾ, ಬಹರೇನ್ ಹಾಗೂ ಕುವೈತ್ ವ್ಯಾಪಿಸಿದೆ. ಸಮೂಹವು ಜ್ಯುವೆಲ್ಲರಿ, ಹಣ ವಿನಿಮಯ, ಫ್ಯಾಶನ್ ಮತ್ತು ಜವಳಿ, ವಿಲಾಸಿ ವಿಮಾನಯಾನ, ಮಾಲ್ಗಳು ಮತ್ತು ರಿಯಾಲ್ಟಿ ಉದ್ಯಮಗಳನ್ನು ಹೊಂದಿದೆ.
ಜೋಯಾಲುಕ್ಕಾಸ್ 8,000ಕ್ಕೂ ಹೆಚ್ಚು ವೃತ್ತಿಪರ ಸಿಬ್ಬಂದಿಯನ್ನು ಜಗತ್ತಿನಾದ್ಯಂತ ಹೊಂದಿದೆ. ಅಲ್ಲದೆ ಅತೀ ಹೆಚ್ಚು ಬಾರಿ ಪುರಸ್ಕೃತಗೊಂಡ ಜಗತ್ತಿನ ಜ್ಯುವೆಲ್ಲರಿ ರೀಟೇಲ್ ಜಾಲವೆಂಬ ಹೆಗ್ಗಳಿಕೆಗೆ ಜೋಯಾಲುಕ್ಕಾಸ್ ಪಾತ್ರವಾಗಿದೆ.