ಮಕ್ಕಳ ಸಾವಿಗೆ ಮೆದುಳುಜ್ವರ ಕಾರಣ ಎಂದ ಸೆಹ್ವಾಗ್ ಗೆ ಟ್ವಿಟ್ಟರ್ ಮಂಗಳಾರತಿ !
ಹೊಸದಿಲ್ಲಿ, ಆ. 12 : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತವರು ಜಿಲ್ಲೆ ಗೋರಖ್ ಪುರದ ಆಸ್ಪತ್ರೆಯೊಂದರಲ್ಲಿ 60 ಕ್ಕೂ ಹೆಚ್ಚು ಕಂದಮ್ಮಗಳು ಬಲಿಯಾಗಿರುವುದು ದೇಶಾದ್ಯಂತ ಚರ್ಚೆಗೆ , ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಈ ಬಗ್ಗೆ ಟ್ವೀಟ್ ಮಾಡಿರುವ ಕ್ರಿಕೆಟಿಗ ಸೆಹ್ವಾಗ್ ನೇರವಾಗಿ ಈ ಸಾವುಗಳಿಗೆ ಮೆದುಳು ಜ್ವರ ಕಾರಣ ಎಂದು ತೀರ್ಪು ಕೊಟ್ಟಿರುವುದು ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದ್ದಾರೆ.
ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿರುವ ಸೆಹ್ವಾಗ್ ಶನಿವಾರ ಟ್ವೀಟ್ ಮಾಡಿ, ಉತ್ತರ ಪ್ರದೇಶದಲ್ಲಿ ಹಸುಳೆಗಳ ಸಾವಿಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಈ ಸಾವುಗಳಿಗೆ ಮೆದುಳು ಜ್ವರ ಕಾರಣ. ಇದರಿಂದಾಗಿ ಈವರೆಗೆ 50000 ಮಕ್ಕಳು ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಗೋರಖ್ ಪುರದ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ನಿಲ್ಲಿಸಿದ್ದರಿಂದಲೇ ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಅಲ್ಲಿ ಜಿಲ್ಲಾಧಿಕಾರಿಯೇ ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ವರದಿಯಾಗಿದೆ. ಹೀಗಿರುವಾಗ ಸೆಹ್ವಾಗ್ ಮಕ್ಕಳ ಸಾವಿನ ಹೊಣೆಯನ್ನು ಮೆದುಳು ಜ್ವರದ ಮೇಲೆ ಹಾಕಿ ಉತ್ತರ ಪ್ರದೇಶ ಸರ್ಕಾರದ ರಕ್ಷಣೆ ನಿಂತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.
Deeply pained by the loss of innocent lives in #Gorakhpur . More than 50000 children have lost their lives here since encephalitis was 1/2
— Virender Sehwag (@virendersehwag) August 11, 2017
first reported in 1978, the year I was born. We Still haven't figured a way to save innocent lives from a known disease. Heartbreaking !
— Virender Sehwag (@virendersehwag) August 11, 2017
2/2
Do you have the spine to criticize the government for its failure ?
— A (@Ad__vaith) August 11, 2017
No you will only mock kids
Shameless
The death is not due to disease sir this is due to lack of oxygen supply sir.
— Dil Hai hindustani (@Tanveer7872) August 11, 2017
Dikhai nahi deta ya such dekhne ki aadat nahi hai, Poore desh ko pata hai bacche oxygen ki kami ki vajah se mare hain. Dalali band karo
— hariom sharma (@h_sharma22) August 11, 2017
Sir main app ka bahut bada fan hon but muja nahi malom thaa ki aap bhi bjp ka chmcha hain bachcha kyon expire hoi pura india janta hai
— Javed Akhtar (@JavedAk60880074) August 12, 2017