ಸ್ಕೇಟಿಂಗ್‌ನಲ್ಲಿ ಫರಾಝ್‌ಗೆ ಬೆಳ್ಳಿ ಮತ್ತು ಕಂಚಿನ ಪದಕಗಳು

ಮಂಗಳೂರು, ಆ.12: ಮಹಾರಾಷ್ಟ್ರದ ನಾಸಿಕ್‌ನ ಹಾಟ್ ವೀಲ್ ಸ್ಕೇಟಿಂಗ್ ಕ್ಲಬ್ ಆಯೋಜಿಸಿದ ಪ್ರಥಮ ಮುಕ್ತ ರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಯಲ್ಲಿ ನೀರುಮಾರ್ಗದ ಪ್ರೆಸಿಡೆನ್ಸಿ ಸ್ಕೂಲ್‌ನ 2ನೆ ತರಗತಿ ವಿದ್ಯಾರ್ಥಿ ಮುಹಮ್ಮದ್ ಫರಾಜ್ ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದಿದ್ದಾರೆ.
7 ವರ್ಷದೊಳಗಿನ ವಿಭಾಗದಲ್ಲಿ ಕ್ವಾಡ್ಸ್ ಸ್ಕೇಟಿಂಗ್‌ನಲ್ಲಿ 1000 ಮೀಟರ್‌ನಲ್ಲಿ ದ್ವಿತೀಯ ಹಾಗೂ 500 ಮೀಟರ್‌ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಚಿತ್ರದಲ್ಲಿ ಮುಹಮ್ಮದ್ ಫರಾಜ್ ಜತೆ ಪ್ರೆಸಿಡೆನ್ಸಿ ಶಾಲೆಯ ಪ್ರಾಂಶುಪಾಲರಾದ ಇಸ್ಮತ್ ವಿ. ಅಹ್ಮದ್ ಹಾಗೂ ಸಂಯೋಜಕರಾದ ನಸೀಮ ಬಾನು ಅವರನ್ನು ಕಾಣಬಹುದು.
Next Story





