Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಕನ್ನಡದ ಮಾತನ್ನು ಅಕ್ಷರಕ್ಕಿಳಿಸುವ...

ಕನ್ನಡದ ಮಾತನ್ನು ಅಕ್ಷರಕ್ಕಿಳಿಸುವ ಮೋಡಿಗಾರ ‘ಲಿಪಿಕಾರ್’ ಕಿರು ತಂತ್ರಾಂಶ

ಡಿಜಿಟಲ್ ಕನ್ನಡ

ಸತ್ಯನಾರಾಯಣ ಕೆ.ಸತ್ಯನಾರಾಯಣ ಕೆ.12 Aug 2017 5:47 PM IST
share
ಕನ್ನಡದ ಮಾತನ್ನು ಅಕ್ಷರಕ್ಕಿಳಿಸುವ ಮೋಡಿಗಾರ ‘ಲಿಪಿಕಾರ್’ ಕಿರು ತಂತ್ರಾಂಶ

ಸ್ಮಾರ್ಟ್‌ಫೋನುಗಳಲ್ಲಿ ಕನ್ನಡಲಿಪಿಯನ್ನು ಮೂಡಿಸುವ ‘ಸಂಕಷ್ಟ’ ಮತ್ತು ‘ಆಲಸ್ಯ’ಗಳ ಕುರಿತು ಇದೇ ಅಂಕಣದಲ್ಲಿ ಓದಿದ್ದೀರಿ. ಇವೆಲ್ಲ ಸಮಸ್ಯೆಗಳಿಗೂ ಒಂದು ಪರಿಹಾರ ಎಂಬಂತೆ ‘ಲಿಪಿ ಕಾರ್ ಆ್ಯಪ್’ ಅಭಿವೃದ್ಧಿಗೊಂಡು ಬಳಕೆಗೆ ಬಂದಿದೆ. ಈಗ ಸ್ಮಾರ್ಟ್ ಫೋನುಗಳಲ್ಲಿ ಕನ್ನಡ ಲಿಪಿಯನ್ನು ಮೂಡಿಸುವುದು ಸಂಕಷ್ಟದ ಕೆಲಸವೇನಲ್ಲ.

ಈಗ ಅದೊಂದು ಆಟದಂತಹ ಕೆಲಸ.ಸ್ಮಾರ್ಟ್‌ಫೋನಿನಲ್ಲಿ ಇತ್ತಕಡೆಯಿಂದ ನೀವು ಒಂದು ವಾಕ್ಯವನ್ನು ಮಾತನಾಡಿ ಮುಗಿಸಿದರೆ ಸಾಕು. ನಿಮ್ಮ ಮಾತು ನೇರವಾಗಿ ಸರ್ವರ್‌ಗೆ ಹೋಗಿ ಅತ್ತಲಿಂದ ಕನ್ನಡ ಲಿಪಿಯಾಗಿ ಸಿದ್ಧಗೊಂಡು ನಿಮ್ಮ ಸ್ಕ್ರೀನ್‌ನ ಮೇಲೆ ಮೂಡುತ್ತದೆ. ಅದೇ ‘ಲಿಪಿಕಾರ’ನ ಅದ್ಭುತ ಚಮತ್ಕಾರ. ಹೌದು, ಈಗ ಕನ್ನಡಕ್ಕೂ ಬಂದಿದೆ ‘ಲಿಪಿಕಾರ್’ ಎಂಬ ಹೆಸರಿನ ಸ್ಪೀಚ್-ಟು- ಟೆಕ್ಸ್ಟ್ ಆ್ಯಪ್. ಇದು ನಾವು ಆಡಿದ ಮಾತನ್ನು ಪಠ್ಯಕ್ಕೆ ರೂಪಾಂತರಿಸುವ ಕಿರುತಂತ್ರಾಂಶವಾಗಿದೆ. ಆಂಡ್ರಾಯ್ಡಾ ಓ.ಎಸ್. (ಆಪರೇ ಟಿಂಗ್ ಸಿಸ್ಟಂ) ಮೇಲೆ ಕಾರ್ಯನಿರ್ವಹಿಸುವ ಈ ಆ್ಯಪ್ ಪ್ರಸ್ತುತ ಆನ್‌ಲೈನ್‌ನಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತದೆ. ಅಂದರೆ, ಈ ಆ್ಯಪ್ ಬಳಸುವಾಗ ಅಂತರ್ಜಾಲ ಸಂಪರ್ಕ ಇರಲೇಬೇಕು.

ಅಕ್ಷರಕೀಲಿಗಳನ್ನು ಒತ್ತುವ ಸಂಕಷ್ಟ, ಕಾಗುಣಿತ-ಒತ್ತಕ್ಷರಗಳನ್ನು ಮೂಡಿ ಸಲು ಹಲವು ಕೀಲಿಗಳನ್ನು ಒತ್ತುವ ಕಸರತ್ತಿನಿಂದಾಗಿ ಸ್ಮಾರ್ಟ್‌ಫೋನಿ ನಲ್ಲಿ ಕನ್ನಡ ಬಳಸುವುದು ಕಷ್ಟಕರ ಎಂಬ ಅಭಿಪ್ರಾಯವಿತ್ತು. ಇದಕ್ಕೆ ಉತ್ತರವಾಗಿ ಕೈಬೆರಳಲ್ಲಿ ಬರೆಯುವ ‘ಗೂಗಲ್ ಹ್ಯಾಂಡ್ ರೈಟಿಂಗ್ ಇನ್‌ಪುಟ್’ ಬಂತು. ಇದೀಗ ಬರೆಯುವ ತಾಪತ್ರಯವೂ ಇಲ್ಲದೆ ಕೇವಲ ಮಾತನಾಡಿದರೆ ಸಾಕು ಕನ್ನಡಲಿಪಿ ಮೂಡುವ ಸರಳವಾದ ಆ್ಯಪ್ ಬಿಡುಗಡೆಯಾಗಿ ಕನ್ನಡಿಗರ ಗಮನ ಸೆಳೆಯುತ್ತಿದೆ. ಇಂಟರ್‌ನೆಟ್ ಸಂಪರ್ಕ ಇಲ್ಲದಿದ್ದಾಗಲೂ ಬಳಸಲು ಅನುವಾಗುವಂತೆ ಆಫ್‌ಲೈನ್ ಆ್ಯಪ್ ಆಗಿ ಸಾಧ್ಯವಾದಷ್ಟು ಬೇಗನೆ ದೊರೆಯುವಂತಾಗಲಿ ಎಂದು ಬಹಳಷ್ಟು ಜನರು ಬಯಸುತ್ತಿದ್ದಾರೆ.

ಗೂಗಲ್ ಪ್ಲೇಸ್ಟೋರ್‌ನಿಂದ ಈ ‘ಲಿಪಿಕಾರ್’ ಆ್ಯಪ್‌ನ್ನು ಅನುಸ್ಥಾಪಿ ಸುವಾಗ ಕೆಲವು ಸೂಚನೆಗಳನ್ನು ಪಾಲಿಸುವ ಮೂಲಕ ಯಶಸ್ವಿ ಬಳಕೆಗೆ ಆ್ಯಪ್‌ನ್ನು ಮೊದಲಿಗೆ ಸಜ್ಜುಗೊಳಿಸಬೇಕು. ಕೆಲವು ಅನುಮತಿ ಗಳನ್ನು ಕೇಳಿದಾಗ "Allow" ಎಂದು ಆಯ್ಕೆ ಮಾಡಿ ಮುಂದುವರಿಯಬೇಕು. ಆಂಡ್ರಾಯ್ಡಾ ಓ.ಎಸ್.ಹಳೆಯ ಆವೃತ್ತಿಗಳು ಇರುವ ಹಳೆಯ ಮಾಡೆಲ್‌ಗಳ ಸ್ಮಾರ್ಟ್ ಫೋನ್‌ಗಳಲ್ಲಿ ‘ಲಿಪಿಕಾರ್’ ಆ್ಯಪ್‌ನಧ್ವನಿಗ್ರಹಣ ವ್ಯವಸ್ಥೆ ಅನುಸ್ಥಾಪನೆಗೊಳ್ಳುವುದಿಲ್ಲ. ಆಗ, ಕೇವಲ ಕೀಬೋರ್ಡ್ ಒತ್ತುವ ಮೂಲಕ ಕನ್ನಡ ಮೂಡಿಸುವ ಕೆಲಸ ನಿರ್ವಹಿಸ ಬಹುದಷ್ಟೇ. ಕಂದುಬಣ್ಣದಲ್ಲಿರುವ ‘ಮೈಕ್ರೋಫೋನ್’ ಚಿಹ್ನೆಯು ಮೂಡಿಬಂದಿದ್ದಲ್ಲಿ, ಧ್ವನಿಗ್ರಹಣ ವ್ಯವಸ್ಥೆ ಅನುಸ್ಥಾಪನೆಗೊಂಡಿದೆ ಎಂದು ಅರ್ಥ. ಮೈಕ್ರೋಫೋನ್ ಚಿಹ್ನೆಯನ್ನು ಒಮ್ಮೆ ಒತ್ತಿದರೆ, ‘ಕೇಳುತ್ತಿದ್ದೇನೆ....’ ಎಂಬ ಸಂದೇಶ ಪ್ರಕಟಿಸುವ ಈ ಆ್ಯಪ್ ವಾಕ್ಯ ವನ್ನು ಉಚ್ಚರಿಸಲು ನಮಗೆ 15 ಸೆಕೆಂಡುಗಳ ಕಾಲ ಅವಕಾಶ ನೀಡುತ್ತದೆ.ಕಾಲಾವಕಾಶದೊಳಗೆ ಮಾತು ಮುಗಿದರೆ ‘ಡನ್’ ಬಟನ್ ಒತ್ತಬೇಕು. ಕಾಲಾವಕಾಶ ಮುಗಿದರೆ ಕೇಳಿಸಿಕೊಳ್ಳುವುದನ್ನು ತಾನಾಗಿಯೇ ನಿಲ್ಲಿಸಿ, ಲಿಪೀಕರಿಸುವ ಕೆಲಸ ಆರಂಭಗೊಳ್ಳುತ್ತದೆ. ಪ್ರಕಟಿತ ಲಿಪಿರೂಪದಲ್ಲಿ ಏನಾದರೂ ತಪ್ಪುಗಳಿದ್ದರೆ, ಕೀಬೋರ್ಡ್ ಬಳಸಿ ಅದನ್ನು ಸರಿಪಡಿಸಿಕೊ ಳ್ಳಬಹುದು. ಲಿಪಿಮೂಡಿಕೆಯ ಖಚಿತತೆಯು ನಮ್ಮ ಉಚ್ಚಾರಣೆಯ ಗುಣಮಟ್ಟವನ್ನು ಅವಲಂಬಿಸಿದೆ. ಉಚ್ಚಾರಣೆ ಸ್ಪಷ್ಟವಾಗಿದ್ದು ಸಕಾಲಿಕವಾಗಿದ್ದರೆ ಲಿಪಿಯೂ ಸಹ ಆಡಿದ ಮಾತಿನಂತೆಯೇ ತಪ್ಪಿಲ್ಲದೆ ಶೇ.100ರಷ್ಟು ಕರಾರುವಾಕ್ಕಾಗಿ ಪ್ರಕಟಗೊಳ್ಳುತ್ತದೆ.

‘ಲಿಪಿಕಾರ್’ ಆ್ಯಪ್‌ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಆಯ್ಕೆಗಳೂ ಇವೆ. ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಪ್ರತ್ಯೇಕವಾಗಿ ಆಡಿದ ಮಾತುಗಳೂ ಸಹ ಆಯಾಯ ಲಿಪಿಗಳಲ್ಲಿ ಮೂಡಿಬರುತ್ತವೆ. ಕನ್ನಡ ವಾಕ್ಯದ ನಂತರ, ‘ಇಂಗ್ಲಿಷ್’ ಎಂಬುದನ್ನು ಆಯ್ಕೆ ಮಾಡಿಕೊಂಡು ಇಂಗ್ಲಿಷ್‌ನಲ್ಲಿ ಹೇಳಿದ ವಾಕ್ಯವು ಇಂಗ್ಲಿಷ್ ಲಿಪಿಯಲ್ಲಿ ಪ್ರಕಟಗೊಳ್ಳುತ್ತದೆ. ಮತ್ತೆ ‘ಕನ್ನಡ’ ಎಂಬುದನ್ನು ಒತ್ತಿ ಕನ್ನಡದಲ್ಲಿ ಮಾತು ಮುಂದುವರಿಸಬ ಹುದು. ಮಾತುಗಳು ಒಂದೆರಡು ವಾಕ್ಯಗಳಿಗೆ ಸೀಮಿತವಾಗಿದ್ದರೆ ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಒಮ್ಮೆಗೆ ಹೆಚ್ಚಿನ ವಾಕ್ಯಗಳನ್ನು ಹೇಳಿದರೆ, ‘‘ಅನಿರೀಕ್ಷಿತ ತೊಡಕುಂಟಾಗಿದೆ....’’ ಎಂಬ ಸಂದೇಶ ಪ್ರಕಟ ವಾಗುತ್ತದೆ. ಅಂಕಿಗಳೂ ಸಹ ಕನ್ನಡದಲ್ಲಿಯೇ ಇರುವುದು ಒಂದು ವಿಶೇಷ. ಇಂಗ್ಲಿಷ್ ಅಂಕಿಗಳು ಬೇಕಾದರೆ ಅಥವಾ ಈಗಾಗಲೇ ಅಭ್ಯಾಸವಾಗಿ ರುವ ಬೇರೊಂದು ಕೀಬೋರ್ಡ್ ಆಯ್ಕೆ ಮಾಡಿಕೊಳ್ಳ ಬೇಕಾದರೆ ತಕ್ಷಣದಲ್ಲಿ ಅದು ಸಾಧ್ಯವಾಗುವುದಿಲ್ಲ. ಬದಲಾವಣೆಗಾಗಿ ನೇರ, ಸರಳ ಆಯ್ಕೆಗಳನ್ನು ಮಾಡಿಕೊಳ್ಳಲು ಈ ಆ್ಯಪ್‌ನಲ್ಲಿ ಇನ್ನೂ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಬಳಕೆದಾರರ ಹಿಮ್ಮಾಹಿತಿ (ಫೀಡ್‌ಬ್ಯಾಕ್) ಆಧರಿಸಿ ಮುಂದಿನ ದಿನಗಳಲ್ಲಿ ಈ ಆನ್‌ಲೈನ್ ಆ್ಯಪ್ ಎಲ್ಲ ಆಯಾಮಗಳಲ್ಲಿ ಮತ್ತಷ್ಟು ಸುಧಾರಣೆಗೊಳ್ಳುತ್ತದೆ ಎಂದು ಭಾವಿಸಬಹುದು.

ನೀವು ಆಂಡ್ರಾಯ್ಡಾ ಫೋನು ಬಳಕೆದಾರರಾಗಿದ್ದಲ್ಲಿ, ಇನ್ನೇಕೆ ತಡ? ಗೂಗಲ್ ಪ್ಲೇಸ್ಟೋರ್‌ಗೆ ಹೋಗಿ ‘ಲಿಪಿಕಾರ’ನನ್ನು ಬರಮಾಡಿಕೊಳ್ಳಿ. ಇ-ಮೇಲ್, ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವಿಟ್ಟರ್ ಅಪ್‌ಡೇಟ್‌ಗಳು ಹೀಗೆ ಅಗತ್ಯವಿದ್ದೆಡೆಯೆಲ್ಲಾ ಕೇವಲ ಮಾತನ್ನಾಡುವ ಮೂಲಕ ಕನ್ನಡ ಪಠ್ಯವನ್ನು ಮೂಡಿಸಿ. ಕನ್ನಡಕ್ಕಾಗಿ ಕೀಲಿಯೊತ್ತುಗಳ ಕಿರಿಕಿರಿ ಮತ್ತು ಕೈಬೆರಳಿನಿಂದ ಬರೆಯುವ ಆಲಸ್ಯ ಇವುಗಳಿಂದ ಹೊರಬಂದು ‘ಲಿಪಿಕಾರ’ನ ಮೋಡಿಯನ್ನು ನೋಡಿ.

share
ಸತ್ಯನಾರಾಯಣ ಕೆ.
ಸತ್ಯನಾರಾಯಣ ಕೆ.
Next Story
X