ಸೂರಜ್ ಶಿಕ್ಷಣ ಸಂಸ್ಥೆಯಲ್ಲಿ ‘ಆಟಿಡೊಂಜಿ ಕೂಟ’ ಕಾರ್ಯಕ್ರಮ

ಕೊಣಾಜೆ,ಆ.12: ಮುಡಿಪುವಿನ ಸೂರಜ್ ಇಂಟರ್ ನ್ಯಾಷನಲ್ ಜ್ಞಾನದೀಪ ಪ್ರೌಢಶಾಲೆ ಮತ್ತು, ಸೂರಜ್ ಪದವಿ ಪೂರ್ವ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಸಾಂಪ್ರದಾಯಿಕ ಆಟಿಡೊಂಜಿ ಕೂಟ ಕಾರ್ಯಕ್ರಮವು ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ತುಳು ಚಲನಚಿತ್ರ ಕಲಾವಿದೆ ಅನ್ವಿತಾ ಸಾಗರ್ ರವರು ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಸಾಂಪ್ರದಾಯಿಕ ಆಚರಣೆಗಳು ಇಂತಹ ಕಾರ್ಯಕ್ರಮದ ಮೂಲಕ ಜೀವಂತವಾಗಿದೆ ಎಂದರು. ಮುಖ್ಯಅತಿಥಿಯಾಗಿ ಆಗಮಿಸಿದ ತುಳು ಚಲನಚಿತ್ರ ಕಲಾವಿದರಾದ ಯತೀಶ್ ಪೂಜಾರಿಯವರು ಆಟಿಡೊಂಜಿ ಕೂಟದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಡಾ. ಮಂಜುನಾಥ್ ರೇವಣ್ಕರ್ ರವರು ಸಾಂಪ್ರದಾಯಿಕತೆಯಿಂದ ಮಾತ್ರ ಸಂಸ್ಕøತಿ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುತ್ತದೆ ನಮ್ಮ ಸಂಸ್ಥೆಯಲ್ಲಿ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಯೋಜಕರಾದ ಲಕ್ಷ್ಮೀಶ್ ಸೋಂದ, ಪ್ರಾಚಾರ್ಯರಾದ ಪ್ರಸನ್ನಕುಮಾರ್, ಮುಖ್ಯಶಿಕ್ಷಕಿ ವಿಮಲಾಶೆಟ್ಟಿ ಉಪಸ್ಥಿತರಿದ್ದರು
ಉಪನ್ಯಾಸಕಿ ಅಮೃತಾ ಸ್ವಾಗತಿಸಿದರು, ಶಿಕ್ಷಕ ಚಂದ್ರಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು ಉಪನ್ಯಾಸಕಿ ಗಾಯತ್ರಿ ವಂದಿಸಿದರು ಶಿಕ್ಷಕಿಯರಾದ ವಿನುತಾ ಮತ್ತು ಅಕ್ಷತಾ ಕಾರ್ಯಕ್ರಮ ನಿರ್ವಹಿಸಿದರು.







