ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರಿಗೂ ಸಿಗುವಂತಾಗಬೇಕು : ಯು.ಟಿ.ಖಾದರ್
ಪಾವೂರು : ಶುದ್ಧ ನೀರಿನ ಘಟಕ ಉದ್ಘಾಟನೆ

ಕೊಣಾಜೆ,ಆ.12: ರಾಜ್ಯದ ಪ್ರತಿಯೊಬ್ಬ ಬಡವನೂ ಶುದ್ಧ ನೀರು ಕುಡಿಯಬೇಕು ಎನ್ನುವ ನೆಲೆಯಲ್ಲಿ ಸರ್ಕಾರ ಪ್ರತೀ ಗ್ರಾಮದಲ್ಲೂ ಶುದ್ದ ನೀರಿನ ಘಟಕ ಸ್ಥಾಪಿಸುವ ಯೋಜನೆ ಹಮ್ಮಿಕೊಂಡಿದೆ. ಮಂಗಳೂರು ಕ್ಷೇತ್ರದಲ್ಲಿ ಪ್ರಥಮ ಘಟಕ ಆರಂಭಗೊಂಡಿದೆ. ಬಡವರು, ಶ್ರೀಮಂತರು ಪ್ರತ್ಯೇಕರಲ್ಲ ಎನ್ನುವುದು ಸರ್ಕಾರದ ಯೋಚನೆಯಾಗಿದೆ ಎಂದು ಸಚಿವ ಯು.ಟಿ.ಖಾದರ್ ಅವರು ಹೇಳಿದರು.
ಅವರು ಪಾವೂರು ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಶ್ರೀಮಂತರು ಮಾತ್ರ ಶುದ್ಧ ನೀರು ಕುಡಿದರೆ ಸಾಲದು, ಬಡವರಿಗೂ ಆ ವ್ಯವಸ್ಥೆ ಸಿಗಬೇಕು. ಬಾಟಲ್‍ಗಳಲ್ಲಿ ಸಿಗುವ ನೀರಿಗೆ ಲೀಟರ್ ಗೆ 20 ರೂಪಾಯಿ ವ್ಯಯಿಸಬೇಕಿದೆ. ಈ ಹಿನ್ನೆಲೆಯಲ್ಲಿ ಬಡವರಿಗಾಗಿ ಸರ್ಕಾರವೇ ಘಟಕದ ಮೂಲಕ ನೀರಿನ ವ್ಯವಸ್ಥೆ ಮಾಡಿದ್ದು, ಎರಡು ರೂಪಾಯಿಗೆ 20 ಲೀಟರ್ ಸಿಗಲಿದೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ಸದಸ್ಯ ಅಬ್ದುಲ್ ಜಬ್ಬಾರ್ ಬೋಳಿಯಾರ್, ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಫಿರೋಜ್, ಉಪಾಧ್ಯಕ್ಷೆ ಲೀಲಾವತಿ, ಸದಸ್ಯರಾದ ವಿವೇಕ್ ರೈ, ರೀಮಾ, ಎಂ.ಪಿ.ಹಸನ್, ಚೆನ್ನಮ್ಮ, ಮಹಾದೇವಮ್ಮ, ಐ.ಬಿ.ಸಾದಿಕ್, ಚಕ್ಕರ್ ಮಹಮ್ಮದ್ ಇನೋಳಿ, ರವಿಕಲಾ, ಶಾಹಿದಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೆಲ್ವಿನ್ ಡಿಸೋಜ, ಮಾಜಿ ಅಧ್ಯಕ್ಷೆ ಬೀಫಾತಿಮ, ಕೆಎಸ್‍ಆರ್‍ಟಿಸಿ ನಿರ್ದೇಶಕ ರಮೇಶ್ ಶೆಟ್ಟಿ ಬೋಳಿಯಾರ್, ಪಶು ಭಾಗ್ಯ ಯೋಜನೆಯ ಅಧ್ಯಕ್ಷ ಉಗ್ಗಪ್ಪ ಪೂಜಾರಿ, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಶಂಕರಾನಂದ ಎನ್.ಇನವಳ್ಳಿ ಮೊದಲಾದವರು ಉಪಸ್ಥಿತರಿದ್ದರು.







