Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಜನತೆಯ ಸಂಗಾತಿ ಸುರೇಂದ್ರ ಕೌಲಗಿ

ಜನತೆಯ ಸಂಗಾತಿ ಸುರೇಂದ್ರ ಕೌಲಗಿ

ಸುರೇಶ್ ಕಂಜರ್ಪಣೆಸುರೇಶ್ ಕಂಜರ್ಪಣೆ12 Aug 2017 10:20 PM IST
share
ಜನತೆಯ ಸಂಗಾತಿ ಸುರೇಂದ್ರ ಕೌಲಗಿ

ದೇಶದ ಹೆಸರಾಂತ ಗಾಂಧೀವಾದಿ, ಸರ್ವೋದಯ ಕಾರ್ಯ ಕರ್ತ ಸುರೇಂದ್ರ ಕೌಲಗಿ ವಿಶ್ರಮಿಸಿದ್ದಾರೆ. ಅವರ ನಿಧನ ದೊಂದಿಗೆ ಗಾಂಧೀ ಯುಗದ ಇನ್ನೊಂದು ಕೊಂಡಿ ಕಳಚಿದೆ.

ಕೌಲಗಿಯವರು ಸ್ವಾತಂತ್ರ ಹೋರಾಟದ ಆದರ್ಶಗಳನ್ನು ಕಣಕಣ ದಲ್ಲೂ ತುಂಬಿಕೊಂಡ ಒಂದು ತಲೆಮಾರಿನ ಪ್ರತಿನಿಧಿ. ಅವರು ಗಾಂಧಿ ಯನ್ನು ಕಂಡಿರಲಿಲ್ಲ. ಆದರೆ ಗಾಂಧಿಯ ನೆರಳಂತಿದ್ದವರ ಒಡನಾಡಿ ಯಾದರು. ಒಂದು ಕನಸನ್ನು ನಿಜಗೊಳಿಸುವ ಶ್ರಮಕ್ಕೆ ಜೀವನವನ್ನೇ ಮುಡಿಪಾಗಿಟ್ಟರು.

ಸುರೇಂದ್ರ ಕೌಲಗಿಯವರ ಕಥನವೆಂದರೆ ಸಾಮಾನ್ಯನೊಬ್ಬ ಅಸ್ಖಲಿತ ಸಾಮಾಜಿಕ ಶೀಲದ ಮಾದರಿಯಾಗಿ ಬೆಳೆದ ಕಥನ.

ಸುರೇಂದ್ರರ ತಂದೆ ವೆಂಕಟೇಶ ಕೌಲಗಿ ಸಾಮಾನ್ಯ ಪೋಸ್ಟ್ ಮಾಸ್ಟರ್. ಕರುಬದೇ, ದುರಾಸೆ ಪಡದೆ, ಇದ್ದುದರಲ್ಲಿ ಮಾನವಾಗಿ ಬದುಕುವ ಋಜುಮಾರ್ಗದ ಮನುಷ್ಯ. ಅಪ್ಪ ಬ್ರಿಟಿಷ್ ಸರಕಾರದ ನೌಕರಿ ಮಾಡುತ್ತಿದ್ದರೂ, ಅಮ್ಮ ಆ ಕಾಲದ ರಾಷ್ಟ್ರೀಯ ಪ್ರಭಾವಕ್ಕೆ ಪಕ್ಕಾಗಿ ಖಾದಿ ನೂಲು ತೆಗೆಯುತ್ತಿದ್ದರಂತೆ.

1934ರಲ್ಲಿ ಜನಿಸಿದ ಸುರೇಂದ್ರ ಬೇರೆ ಬೇರೆ ಊರುಗಳಲ್ಲಿ ವಿದ್ಯಾ ಭ್ಯಾಸ ಮುಂದುವರಿಸಿದವರು. ಮೆಟ್ರಿಕ್ ವೇಳೆಗೆ ಬಡತನದ ಕಾರಣಕ್ಕೆ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ನೀಡಬೇಕಾಯಿತು. ಆಗಲೇ ಕರ್ನಾಟಕ ಏಕೀಕರಣ ವಿಚಾರದಿಂದಲೂ ಪ್ರಭಾವಿತರಾಗಿದ್ದ ಅವರು ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿ ಬರೆದ ಪತ್ರಗಳು ಟೈಮ್ಸ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಈ ಎಲ್ಲ ಬರಹಗಳನ್ನು ಅವರು ಮೆಟ್ರಿಕ್ ಹಂತದ ವಿದ್ಯಾರ್ಥಿಯಾಗಿ ಬರೆದಿದ್ದರು ಎಂಬುದು ಗಮನಿಸಬೇಕಾದ ವಿಷಯ.

ಅನ್ನದ ದಾರಿ ಹುಡುಕಲು ಮುಂಬೈನಲ್ಲಿದ್ದ ಅಣ್ಣನ ಜೊತೆ ಸೇರಿದ ಸುರೇಂದ್ರರಿಗೆ ವಕೀಲರೊಬ್ಬರ ಕಚೇರಿಯಲ್ಲಿ ಸ್ಟೆನೋ ಕೆಲಸ. ಅದೇ ವೇಳೆಗೆ, ಸ್ವಾತಂತ್ರ ಸೇನಾನಿಗಳ ಆಪ್ತ ನ್ಯಾಚುರೋಪತಿ ವೈದ್ಯರಾಗಿದ್ದ ದಿನ್ ಷಾ ಮೆಹ್ತಾ ಅವರು ಸ್ಟೆನೊಗ್ರಾಫರ್ ಒಬ್ಬರನ್ನು ತಲಾಷ್ ಮಾಡುತ್ತಿ ದ್ದರು. ಸುರೇಂದ್ರ ಆ ಸ್ಥಾನ ತುಂಬಿದರು. ಅಲ್ಲಿ ಸುರೇಂದ್ರ ಅನೂಹ್ಯ ಗುರಿ ಯತ್ತ ಅಚಾನಕ ಎರಡನೆ ಹೆಜ್ಜೆ ಇಟ್ಟರು. ಮೆಹ್ತಾ ಅವರಲ್ಲಿಗೆ ಬರುತ್ತಿದ್ದ ಸ್ವಾತಂತ್ರ ಸೇನಾನಿಗಳನ್ನು ಅಚ್ಚರಿ ಕಂಗಳಿಂದ ನೋಡುತ್ತಿದ್ದ ಸುರೇಂದ್ರರಿಗೆ ಹೊಸ ಲೋಕವೊಂದು ಅನಾವರಣವಾಯಿತು. ಮೆಹ್ತಾ ಅವರ ಲ್ಲಿಗೆ ಬರುತ್ತಿದ್ದ ಲೋಕನಾಯಕ ಜೆಪಿ ತನಗೊಬ್ಬ ಆಪ್ತ ಕಾರ್ಯದರ್ಶಿ /ಸ್ಟೆನೋ ಬೇಕು ಎಂದು ಪ್ರಸ್ತಾಪಿಸಿದರು. ಆಗಲೇ ಜೆಪಿ ಸಕ್ರಿಯ ರಾಜಕೀಯಕ್ಕೆ ವಿದಾಯ ಹೇಳಿ ವಿನೋಭಾ ಅವರ ಸಹವರ್ತಿ ಯಾಗಿದ್ದರು. ಬಿಹಾರದ ಸುಖೋದೆವರಾದಲ್ಲಿ ಸರ್ವೋದಯ ಕೇಂದ್ರವೊಂದನ್ನು ಸ್ಥಾಪಿಸಿದ್ದರು. ‘ಸರ್ವೋದಯ ಕಾರ್ಯಕರ್ತನಾಗಿ ನಿಮ್ಮಾಂದಿಗೆ ದುಡಿಯುತ್ತೇನೆ’ ಎಂದು ಸುರೇಂದ್ರ ಜೆಪಿಯವರಲ್ಲಿ ನಿವೇದಿಸಿಕೊಂಡರು. ಅಲ್ಲಿಗೆ ಸುರೇಂದ್ರ ಅವರ ಬದುಕಿನ ಗುರಿ ನಿಚ್ಚಳವಾಯಿತು. ಜೆಪಿ ನೀಡುತ್ತಿದ್ದ ಐವತ್ತು ರೂಪಾಯಿ ಮಾಸಿಕ ವೇತನದಲ್ಲಿ ಅರ್ಧವನ್ನು ಮುಂಬೈಯಲ್ಲಿ ಏಗುತ್ತಿದ್ದ ತಮ್ಮ ಅಣ್ಣನಿಗೆ ಕಳುಹಿಸುತ್ತಿದ್ದ ಸುರೇಂದ್ರ ಜೆಪಿಯ ನೆರಳಾಗಿ ಹಿಂಬಾಲಿಸಿದರು.

ಇಲವಾಲದಲ್ಲಿ 1959ರಲ್ಲಿ ನಡೆದ ಸರ್ವೋದಯ ಮೇಳ ಕೌಲಗಿ ಯವರ ಬದುಕಿಗೆ ಇನ್ನೊಂದು ತಿರುವು ನೀಡಿತು. ಸರ್ವೋದಯ ಕಾರ್ಯಕರ್ತರು ಒಂದೊಂದು ಹಳ್ಳಿಗಳನ್ನು ಆರಿಸಿಕೊಂಡು ಅಲ್ಲಿ ದುಡಿ ಯಬೇಕೆಂಬ ಆದರ್ಶದಂತೆ ಕೌಲಗಿ ಮೇಲುಕೋಟೆಗೆ ಬಂದರು. ಆ ಕಾಲದ ಉತ್ಸಾಹೀ ಖಾದ್ರಿ ಶಾಮಣ್ಣ ಅವರ ಒತ್ತಾಸೆ ಈ ಆಯ್ಕೆಗೆ ಕಾರಣ.

ಮೇಲುಕೋಟೆಗೆ ಬಂದ ಮೊದಲ ದಿನಗಳನ್ನು ಕೌಲಗಿ ಯವರು ಹೀಗೆ ವರ್ಣಿಸುತ್ತಾರೆ:

          ಬೀಜ ಸಂಗ್ರಹಿಸುತ್ತಿರುವುದು

‘‘1950ರ ದಶಕದಲ್ಲಿ ಮೇಲುಕೋಟೆ ಇಂದಿನ ಯಾವ ಆಧುನಿಕ ಸೌಕರ್ಯವನ್ನೂ ಪಡೆದಿರಲಿಲ್ಲ. ಬ್ಯಾಂಕಿನ ಸೌಕರ್ಯ ಇರಲಿಲ್ಲ. ಪ್ರಾಥ ಮಿಕ ಆರೋಗ್ಯ ಕೇಂದ್ರವೊಂದಿತ್ತು. ಹಳ್ಳಿಯ ಜನ ಎತ್ತಿನ ಗಾಡಿ ಕಟ್ಟಿ ಕೊಂಡು ಬರುತ್ತಿದ್ದರು. ಗರ್ಭಿಣಿ ಮಹಿಳೆಯರೂ ಎತ್ತಿನ ಗಾಡಿಯಲ್ಲೇ ಬರುತ್ತಿದ್ದರು. ಪಕ್ಕದ ಮತ್ತು ದೂರದ ಹಳ್ಳಿಗಳಿಗೆಲ್ಲಾ ನಡೆದು ಕೊಂಡೇ ಹೋಗಬೇಕಾಗಿತ್ತು. ಮೈಸೂರು- ಬೆಂಗಳೂರು ಕಡೆಗೆ ಒಂದೆರಡು ಖಾಸಗಿ ಬಸ್ಸುಗಳಿದ್ದವು. ಮೇಲುಕೋಟೆ ಯವರಿಗೆ ಜಕ್ಕನಹಳ್ಳಿಯಿಂದ ಬೆಟ್ಟ ಹತ್ತಿ 4 ಮೈಲಿ ನಡೆದು ಬರುವುದು ಮಾಮೂಲಿನ ಸಂಗತಿಯಾಗಿತ್ತು.

ಇದು ಮೇಲುಕೋಟೆಯ ಚಿತ್ರಣವಾದರೆ, ಸುತ್ತ ಲೂ ಒಣಭೂಮಿ ಪ್ರದೇಶ. ಮಳೆಯನ್ನವಲಂಬಿಸಿದ ವ್ಯವಸಾಯ ಇದ್ದುದರಿಂದ ಗ್ರಾಮಗಳಲ್ಲಿ ಬಹಳಷ್ಟು ಬಡತನವಿತ್ತು. ನಿರಕ್ಷರತೆ ಇತ್ತು. ಗ್ರಾಮಗಳಲ್ಲಿ ಯಾವ ಉದ್ಯೋಗವೂ ಇಲ್ಲದ್ದರಿಂದ ಹಳ್ಳಿಯ ಮಹಿಳೆ, ಪುರುಷ ಮಕ್ಕಳಾದಿಯಾಗಿ ಪಕ್ಕದ ವಸಂತ ಪುರವೆಂಬ ಕಾಡಿಗೆ ಹೋಗಿ ಸೌದೆ ಸಂಗ್ರಹಿಸಿ 5-6 ಮೈಲಿ ದೂರದ ಮೇಲುಕೋಟೆಗೆ ತಲೆಯ ಮೇಲೆ ಹೊರೆ ಹೊತ್ತುಕೊಂಡು ಬಂದು, ‘‘ಸೌದೆ, ಸೌದೆ’’ ಎಂದು ಕೂಗುತ್ತಾ ಊರಿನ ಓಣಿ ಓಣಿ ಸುತ್ತುತ್ತಿದ್ದರು. ಒಂದು ಹೊರೆಯ ಬೆಲೆ ಒಂದೂವರೆಯಿಂದ ಎರಡು ರೂಪಾಯಿ. ಈ ಸಂಪಾದನೆಗಾಗಿ ಅವರು ಇಡೀ ದಿನ ಪರಿಶ್ರಮ ಪಡಬೇಕಾಗುತ್ತಿತ್ತು. ಹಾಗೇ ಮೊಸರು ವ್ಯಾಪಾರ, ಬಿದಿರಿನ ಬುಟ್ಟಿ ಮಧ್ಯೆ ಮಡಕೆ ಇಟ್ಟು ಕೊಂಡು, ‘‘ಮೊಸರು. ಮೊಸರು’’ ಎಂದು ಕೂಗುತ್ತಾ ಊರಿನ ಬೀದಿ ಬೀದಿ ಸುತ್ತುತ್ತಿದ್ದರು. ಬಿದಿರಿನ ಒಂದು ಪಾವು ಮೊಸರಿಗೆ 10-15 ಪೈಸೆ. ಪ್ರತೀ ಮಂಗಳವಾರದ ಸಂತೆಗೆ ರೈತರು ತರಕಾರಿ, ಕಾಳು-ಕಡ್ಡಿ ತರುತ್ತಿದ್ದರು, ಎಷ್ಟು ವ್ಯಾಪಾರವಾಯಿತೋಅದೇ ದೊಡ್ಡದೆಂದು ಭಾವಿಸಿ ಮನೆಗೆ ಹೋಗುತ್ತಿದ್ದರು. ಹೀಗೆ ಒಟ್ಟಾರೆ ಯಾಗಿ ಪ್ರಕೃತಿ ಸೌಂದರ್ಯದ ನಡುವೆ ಯೂ, ವಿದ್ವತ್ತು, ಸಂಸ್ಕೃತಿಗಳ ಮಧ್ಯೆಯೂ ಬಡಕಲಾದ ಊರಾಗಿ, ಸಾವಿರ ವರ್ಷಗಳ ಇತಿಹಾಸದ ಮುಸುಕು ಹೊದ್ದು ಮಲಗಿತ್ತು’’.

ಪು.ತಿ.ನ. ಕಂಡ ಮೊಸರು ಮಾರುವ ನಂದಗೋಕುಲಕ್ಕಿಂತ ಭಿನ್ನವಾದ ಬಡತನದ ಆಯಾಮ ಕೌಲಗಿಯವರಿಗೆ ಕಂಡಿತ್ತು. ಮೇಲುಕೋಟೆ ಯಲ್ಲಿ ಸರ್ವೋದಯ ಆದರ್ಶದ ಕೆಲಸ ಮಾಡುತ್ತಿದ್ದಾಗಲೇ ಪರಿಚಯವಾದ ಗಿರಿಜಾ ಅವರನ್ನು ಸುರೇಂದ್ರ ವಿವಾಹವಾದರು. ಇಬ್ಬರೂ ಅಲ್ಲಿಂದಾಚೆಗೆ ದಣಿವರಿಯದ ಸೇವೆಯಲ್ಲಿ ನಿರತರಾಗಿದ್ದು ನಮ್ಮ ಕಾಲದ ಅಪೂರ್ವ ಘಟನೆಗಳಲ್ಲೊಂದು.

ತಮ್ಮ ಕಾರ್ಯಚಟುವಟಿಕೆಗಳಿಗೆ ಸಾಂಸ್ಥಿಕ ರೂಪ ನೀಡಲು 1960, ಆಗಸ್ಟ್ 12ರಂದು ಜನಪದ ಸೇವಾ ಟ್ರಸ್ಟ್ ಸ್ಥಾಪಿಸಿದರು. ಸ್ವಲ್ಪ ಸಮಯ ಕೌಲಗಿ ದಂಪತಿ ನಂಜನಗೂಡಿನ ಕೆಂಪಿ ಸಿದ್ದನ ಹುಂಡಿಗೆ ಬಂದರು. ಕೆಂಪಿ ಸಿದ್ದನ ಹುಂಡಿಯಲ್ಲಿ ಸರ್ವೋದಯ ಕಾರ್ಯಕರ್ತರಾಗಿ ದುಡಿದ ಕೌಲಗಿ ದಂಪತಿ ಮತ್ತೆ ಮೇಲುಕೋಟೆಗೆ ಮರಳಿದರು ಅಲ್ಲಿಂದಾಚೆಗೆ ಅರ್ಧ ಶತಮಾನಕ್ಕೂ ಮಿಕ್ಕಿ ಏಕಾಗ್ರವಾಗಿ ಈ ದಂಪತಿ ಸೇವೆಯ ಮಾದರಿಯೊಂದನ್ನು ರೂಪಿಸಿದರು. ಅಂಗವಿಕಲ ಮಕ್ಕಳ ಕ್ಷೇಮಾರ್ಥ ಸ್ಥಾಪಿಸಿದ ಕರುಣಾಗೃಹ ರಾಜ್ಯದಲ್ಲೇ ಮಾದರಿಯಾಯಿತು. ಮೇಲುಕೋಟೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೃಷಿ ವಿಕಾಸದ ಕೆಲಸವನ್ನೂ ಕೌಲಗಿ ಮಾಡಿದರು. ಔಪಚಾರಿಕ ಶಿಕ್ಷಣ ಪಡೆಯದವರಿಗೆ ಕಂಡೆನ್ಸ್‌ಡ್ ಕೋರ್ಸ್ ಆರಂಭಿಸಿದರು. ಮುದ್ರಣಾಲಯ, ಟೈಪಿಂಗ್ ತರಗತಿ, ಶಾಲೆ -ಹೀಗೆ ಕೌಲಗಿ ದಂಪತಿ ಸಮಗ್ರವಾಗಿ ಚಟುವಟಿಕೆ ಗಳನ್ನು ಹೆಣೆಯುತ್ತಾ ಬಂದರು.

                                ಕುಟುಂಬ ಸದಸ್ಯರು

ಸಾವಯವ ಕೃಷಿ ಬಗ್ಗೆ ಮೊದಲ ಪ್ರಯೋಗಗಳನ್ನು ಶುರುಮಾಡಿದ್ದೂ ಜನಪದ ಸೇವಾ ಟ್ರಸ್ಟ್. ಕೌಲಗಿಯವರ ಹಿರಿಯ ಮಗ ಸಂತೋಷ ಇಂಜಿ ನಿಯರಿಂಗ್ ಶಿಕ್ಷಣ ಬಿಟ್ಟು ಟ್ರಸ್ಟ್‌ನ ಕಾರ್ಯಕರ್ತನಾದ. ನೇಕಾರಿಕೆ, ಸಹಜ ಕೃಷಿಯ ಆಳ ಜ್ಞಾನ ಬೆಳೆಸಿಕೊಂಡ ಸಂತೋಷ ಜಪಾನಿನ ಸಹಜ ಕೃಷಿ ವಿಜ್ಞಾನಿ ಮಸನಬು ಪುಕುವೊಕಾರ ‘ಒಂದು ಹುಲ್ಲಿನ ಕ್ರಾಂತಿ’ಯ ಅನುವಾದದ ಮೂಲಕ ಕೌಲಗಿಯವರ ರಚನಾತ್ಮಕ ಕೆಲಸಗಳಿಗೆ ಹೊಸ ಆಯಾಮ ನೀಡಿದ. ಎಂಬತ್ತರ ದಶಕದಲ್ಲಿ ಹೊಸ ರಾಜಕೀಯ ಆಶಯಗಳಿಗೆ ತೆರೆದುಕೊಂಡ ಕೌಲಗಿಯವರು ಮತದಾರರ ವೇದಿಕೆ ಸ್ಥಾಪಿಸಿ ಪ್ರಜಾಸತ್ತೆಯ ಆಶಯಗಳನ್ನು ಆಳಗೊಳಿಸುವ ಕೆಲಸ ಮಾಡಿದರು. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶದಿಂದ ಹಿಡಿದು ಅಸಮಾನತೆಯನ್ನು ಪೊರೆಯುವ ಎಲ್ಲಾ ಪ್ರಭುತ್ವದ ಸಂಚಿನ ವಿರುದ್ಧ ದನಿಯೆತ್ತಿದರು. ಕಾರ್ಪೊರೇಟ್ ನಿಯಂತ್ರಣಕ್ಕೆ ದೇಶ ಬರುತ್ತಿರುವುದರ ವಿರುದ್ಧ ಸದಾ ಸೆಟೆದು ನಿಲ್ಲುತ್ತಿದ್ದ ಕೌಲಗಿಯವರು ಗ್ರಾಮ ಸ್ವರಾಜ್ಯ ಮತ್ತು ವಿಕೇಂದ್ರೀಕೃತ ಉತ್ಪಾದನೆಯ ಪ್ರಾಮುಖ್ಯತೆ ಬಗ್ಗೆ ಸತತವಾಗಿ ಮಾತಾಡಿದರು.

    ವಿದ್ಯಾರ್ಥಿಗಳಿಂದ ನೈಸರ್ಗಿಕ ಅಧ್ಯಯನ

ಯಾವ್ಯಾವುದೋ ಪ್ರಶಸ್ತಿಗಳು ಅರಸಿ ಬಂದಾಗಲೂ ನಿರಾಕರಿಸುತ್ತಾ ಋಜು ಮಾರ್ಗ ತೋರಿದರು. ದೇಸೀ ಪ್ರಶಸ್ತಿ ಮತ್ತು ಜಮುನಾಲಾಲ್ ಬಜಾಜ್ ಪ್ರಶಸ್ತಿಗಳನ್ನು ಮಾತ್ರ ಅವರು ಸ್ವೀಕರಿಸಿದ್ದು. ಅವರು ಬಹು ಗೌರವಿಸುತ್ತಿದ್ದ ಗಾಂಧಿಯ ಆದರ್ಶಗಳ ಪ್ರಣಾಳಿಕೆ ಈ ಪ್ರಶಸ್ತಿಗಳ ಹಿಂದೆ ಇತ್ತು.

ಈ ಅವಿಶ್ರಾಂತ ಕೆಲಸದ ಕಾರಣಕ್ಕೇ ಕೆಲವು ವರ್ಷಗಳ ಹಿಂದೆ ಅನಾರೋಗ್ಯಕ್ಕೀಡಾದ ಕೌಲಗಿಯವರು ಮತ್ತೆ ವಾಕರ್ ಬಳಸುತ್ತಾ ರಾಜ್ಯಾದ್ಯಂತ ಓಡಾಡುತ್ತಿದ್ದರು!. ಕಳೆದ ವರ್ಷ ಅವರ ಸಂಗಾತಿ ನಮ್ಮೆಲ್ಲರ ಪ್ರೀತಿಯ ಅಮ್ಮ ಗಿರಿಜಾ ಕೌಲಗಿ ಸ್ವರ್ಗೀಯರಾದ ಮೇಲೆ ಕೂಡಾ ಸುರೇಂದ್ರ ಕೌಲಗಿಯವರು ತಮ್ಮ ಫೋಕಸ್ ಕಳೆದುಕೊಳ್ಳಲಿಲ್ಲ. ಬರವಣಿಗೆ, ಓದು, ಉಪನ್ಯಾಸ ಚರ್ಚೆಗಳಲ್ಲಿ ಸತತವಾಗಿ ತೊಡಗಿಸಿ ಕೊಂಡರು. ಮೊನ್ನೆಯೂ ಅಷ್ಟೇ. ಆಸ್ಪತ್ರೆಗೆ ದಾಖಲಾಗುವ ಮುನ್ನಾ ದಿನ ಮೈಸೂರಿನ ಕಾಲೇಜೊಂದರಲ್ಲಿ ಉಪನ್ಯಾಸ ನೀಡಿದ್ದರು. ಜಿಎಸ್‌ಟಿ ಮೇಲೆ ಲೇಖನ ಬರೆದಿದ್ದರು. ಅವರು ಆಸ್ಪತ್ರೆಯಲ್ಲಿ ಜೀವನ್ಮ ರಣದ ಹೋರಾಟದಲ್ಲಿದ್ದಾಗ ಪ್ರಜಾವಾಣಿಯಲ್ಲಿ ಆ ಲೇಖನ ಪ್ರಕಟ ವಾಯಿತು!!. ಜನಪದ ವಿಚಾರ ಎಂಬ ಗಾಂಧೀಯ ಸರ್ವೋದಯ ವಿಚಾರಗಳ ಮಾಸಿಕವೊಂದನ್ನು ಎಷ್ಟೇ ಕಷ್ಟವಾದರೂ ಪ್ರಕಟಿಸುತ್ತಾ ಬಂದರು. ಮೊನ್ನೆ ನಿಧನರಾದಾಗ ಒಂದು ತಲೆಮಾರು ಮಾಡಬೇಕಾದ ಕೆಲಸದ ನೀಲನಕ್ಷೆ ಮುಂದಿಟ್ಟೇ ನೀಗಿಕೊಂಡರು.

                            ಖಾದಿ ನೆಯ್ಯುತ್ತಿರುವುದು

ಕರ್ನಾಟಕದ ಸಾಹಿತ್ಯ-ಸಾಂಸ್ಕೃತಿಕ ಹೋರಾಟಗಳ ಜಗತ್ತು ಆಪ್ತವಾಗಿದ್ದ ಏಕೈಕ ಕೇಂದ್ರ ‘ಜನಪದ ಸೇವಾ ಟ್ರಸ್ಟ್’ ಎಂದರೆ ತಪ್ಪಾಗ ಲಾರದು. ವಿಭಿನ್ನ ಸೈದ್ಧಾಂತಿಕ ನಿಲುವಿನವರೂ ಕೌಲಗಿಯವರ ಜೊತೆ ಸಂವಾದಿಸುತ್ತಿದ್ದರು. ಗೌರವಿಸುತ್ತಿದ್ದರು.

ವೈಯಕ್ತಿಕವಾಗಿ ನನಗೆ ಅವರು ದೃಷ್ಟಿ ನಿಚ್ಚಲಗೊಳಿಸಿದ ಗುರು ಮಾರ್ಗದರ್ಶಿ. 1989ರಲ್ಲಿ ಅವರ ಮತ್ತು ಸಂತೋಷನ ಪರಿಚಯ ವಾಗಿದ್ದೇ ನಾನು ನನ್ನ ಕೆಲಸ ತೊರೆದು ಅವರೊಂದಿಗೆ ಸೇರಿದೆ. ಅಲ್ಲಿಂದೀಚೆ ಯ ಮೂರು ದಶಕದ ನನ್ನ ಹಾಡುಪಾಡು ಸಾಹಸಗಳ ಹಿಂದೆ ಇದ್ದ ಸ್ಥೈರ್ಯದ ಮೂಲ ಅವರೇ. ಅವರ ಒಡನಾಟವಿದ್ದ ಎಲ್ಲರಿಗೂ ಅವರು ದಾದಾ. ಆದರ್ಶಗಳ ಅನುಷ್ಠಾನ ಪರ್ಯಾಯಗಳ ಹುಡುಕಾಟ, ಹೋರಾಟದ ಕಾವು ಇರುವ ಎಲ್ಲರಿಗೂ ದಾದಾ ಸ್ಫೂರ್ತಿಯ ಸೆಲೆ-ನೆಲೆ ಎರಡೂ ಆಗಿದ್ದರು. ನಮ್ಮ ಕಾಲದ ಎಲ್ಲಾ ಅಪಸವ್ಯಗಳ ಸುಳಿ-ಬಿರುಗಾಳಿಗಳ ಮಧ್ಯೆಯು ಅವರು ನೈತಿಕ ದಿಕ್ಸೂಚಿ ಆಗಿದ್ದರು. ಈಗ ಈ ಹೊಣೆ ನಮ್ಮ ಮೇಲಿದೆ.

                ಖಾದಿಗೆ ಬಣ್ಣಕೊಡುತ್ತಿರುವ ಕಾರ್ಮಿಕರು

ಕೌಲಗಿಯವರು ಸ್ವಾತಂತ್ರ ಹೋರಾಟದ ಆದರ್ಶಗಳನ್ನು ಕಣಕಣದಲ್ಲೂ ತುಂಬಿಕೊಂಡ ಒಂದು ತಲೆಮಾರಿನ ಪ್ರತಿನಿಧಿ. ಅವರು ಗಾಂಧಿ ಯನ್ನು ಕಂಡಿರಲಿಲ್ಲ. ಆದರೆ ಗಾಂಧಿಯ ನೆರಳಂತಿದ್ದವರ ಒಡನಾಡಿಯಾದರು. ಒಂದು ಕನಸನ್ನು ನಿಜಗೊಳಿಸುವ ಶ್ರಮಕ್ಕೆ ಜೀವನವನ್ನೇ ಮುಡಿಪಾಗಿಟ್ಟರು. ಸುರೇಂದ್ರ ಕೌಲಗಿಯವರ ಕಥನವೆಂದರೆ ಸಾಮಾನ್ಯನೊಬ್ಬ ಅಸ್ಖಲಿತ ಸಾಮಾಜಿಕ ಶೀಲದ ಮಾದರಿಯಾಗಿ ಬೆಳೆದ ಕಥನ.

share
ಸುರೇಶ್ ಕಂಜರ್ಪಣೆ
ಸುರೇಶ್ ಕಂಜರ್ಪಣೆ
Next Story
X