Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಬಕಾವಲಿ ಹೂ

ಬಕಾವಲಿ ಹೂ

ನಾನು ಓದಿದ ಪುಸ್ತಕ

ಸುರೇಶ ಆನಗಳ್ಳಿಸುರೇಶ ಆನಗಳ್ಳಿ12 Aug 2017 11:22 PM IST
share
ಬಕಾವಲಿ ಹೂ

ಭಾರತ ಉಪಖಂಡದಲ್ಲಿ ಬಲು ಜನಪ್ರಿಯ ವಾಗಿರುವ ‘ಗುಲ್-ಏ-ಬಕಾವಲಿ’ ಅಥವಾ ‘ಗುಲೇಬಕಾವಲಿ’ ಎಂಬ ಕಥಾನಕವು ಇದೀಗ ‘ಬಕವಲಿ ಹೂ’ ಎಂಬುದಾಗಿ ಮಿತ್ರ ಸುಧೀರ್ ಅತ್ತಾವರ್ ಅವರ ಸಶಕ್ತ ನಾಟಕೀಕರಣದ ಮೂಲಕ ಸಮಕಾಲೀನ ಕನ್ನಡ ನಾಟಕ ಸಾಹಿತ್ಯದಲ್ಲಿ ಸೇರ್ಪಡೆಗೊಂಡಿದೆ.

ಗುಲೇಬಕಾವಲಿ ಕಥಾಸಾರವು ಮೂಲತಃ ಭರತಖಂಡದಲ್ಲಿ ಹುಟ್ಟುಪಡೆದು, ತದನಂತ ರದಲ್ಲಿ ಮಧ್ಯಪ್ರಾಚ್ಯದಲ್ಲೂ ಪ್ರಸರಣಗೊಂಡು ಬಹುಸಂಸ್ಕೃತಿಯ- ಟ್ರಾನ್ಸ್ ಕಲ್ಚರ್-ಲೇಪನ ಅಂಟಿಸಿ ಕೊಂಡಿದೆ ಎಂದೆನಿಸುತ್ತದೆ ನನಗೆ. ನನ್ನ ಈ ಊಹಾವಾದವನ್ನು ಮಂಡಿಸಲು ಹೊರಡುವುದಾದರೆ, ಮೊದಲಿಗೆ ಬಕಾವಲಿ ಹೂ ನಾಟಕದ ನಾಯಕ ಪಾತ್ರ ತಾಜುಲ್ ಮುಲ್ಕ್ ಎನ್ನುವ ನಾಮಾಂಕಿತವನ್ನೇ ಗಮನಿಸಬಹುದು. ಈ ಹೆಸರು ಪುರಾತನ ಪರ್ಷಿಯಾ ಮೂಲದ್ದಾಗಿದ್ದು ಹನ್ನೊಂದನೆ ಶತಮಾನದಲ್ಲಿ ಲಿಖಿತರೂಪಕ್ಕಿಳಿದ ‘ಅಲಿಫ್ ಲೈಲಾ ವಾಹ್ ಲೈಲಾ’ (ಹಝಾರ್ ಅಫ್ಸಾನಾ. ಸಾವಿರದೊಂದು ರಾತ್ರಿಗಳು, ಅರೇಬಿಯನ್ ನೈಟ್ಸ್ ಮುಂತಾಗಿ ಪ್ರಖ್ಯಾತ) ಕೃತಿಯ ಎರಡನೆ ಅಧ್ಯಾಯದ ನೂರಾ ಒಂಬತ್ತನೆ ರಾತ್ರಿಯ ಕಥೆಯಲ್ಲಿ ಪ್ರಸ್ತಾಪವಾಗಿದೆ, ಆದರೆ ಈ ಪರ್ಷಿಯನ್ ವ್ಯಕ್ತಿ ನಾಮಾಂಕಿತಕ್ಕೆ ತದ್ವಿರುದ್ಧವಾಗಿ ಈ ಕಥೆ ಭಾರತದ್ದೇ ಎನ್ನುವುದನ್ನು ಸಾಧಿಸಲು ಇಲ್ಲಿ ಘಟಿಸುವ ಕಥಾ ಸನ್ನಿವೇಶಗಳ ಸ್ಥಳ ನಾಮಾಂಕಿತವನ್ನು ಹೆಸರಿಸಬಹುದು. ಈ ಕಥೆ ನಡೆಯುವ ಭೌಗೋಳಿಕ ಪರಿಸರವು ಭಾರತ ದೇಶದ ರೇವಾ ಪಟ್ಟಣವಾಗಿದೆ. (ಇಂದಿನ ರೀವಾ ಪಟ್ಟಣ, ಮಧ್ಯ ಪ್ರದೇಶ). ಇನ್ನೂ ವಿಚಿತ್ರವೆನ್ನಿಸುವ ಅಂಶವೆಂದರೆ - ಈ ಮುಸಲ್ಮಾನ ಧರ್ಮೀಯರು ಪಾತ್ರಗಳಿರುವ ಕೃತಿಯ ಹಿಂದಿನ ಕಥಾ ಗ್ರಹಿಕೆಯ ಬೇರು ಹಿಂದೂ ಪುರಾಣ ಕಥನಗಳಲ್ಲಿದೆ. ಉದಾಹರಣೆಗೆ, ಶಾಪ-ಉಪಶಾಪದ ಕಲ್ಪನೆಯನ್ನೇ ಗಮನಿಸಬಹುದು. ಶಕುಂತಲೆಗೆ ದೂರ್ವಾಸ ಮುನಿಯು ಶಾಪವನ್ನೂ ಅದಕ್ಕೆ ಉಪಶಾಪವನ್ನೂ ನೀಡುವುದರಿಂದ ಕೊನೆಯಲ್ಲಿ ಕಥೆಯು ಸುಖಾಂತ್ಯಗೊಳ್ಳುತ್ತದೆ. ಅಂತೆಯೇ, ಬಕಾವಲಿ ಹೂವಿನ ಪರ್ಷಿಯನ್ ಹೆಸರಿನ ಪಾತ್ರಗಳು, ಭಾರತೀಯ ಪೌರಾಣಿಕ ಕಥಾ ನ್ಯಾಯದಂತೆ - ವಿಧಿನಿಯಮ ಹಾಗೂ ಅದಕ್ಕೊಂದು ಪರಿಹಾರೋಪಾಯದ ವಿನ್ಯಾಸಕ್ಕೊಳಪಟ್ಟು - ತನ್ಮೂಲಕ ಸುಖಾಂತ್ಯದ ಭಾಗ್ಯ ಕಾಣುತ್ತವೆ.

ಆಂಧ್ರ ಸೀಮೆಯಲ್ಲಿ ಜನಪದ ಕತೆಯಾಗಿ ಪ್ರಚಲಿತವಾಗಿದ್ದ ಈ ಕಥೆಯನ್ನು 19ನೆ ಶತಮಾನದ ಕೊನೆಯ ಭಾಗದಲ್ಲೇ ಮಧಿರಾ ಸುಬ್ಬನ್ನ ದೀಕ್ಷಿತುಲು ಎಂಬ ವಿದ್ವಾಂಸರು ಸಂಗ್ರಹಿಸಿ ‘ಕಾಸಿ ಮಜಿಲ್ಲಿ ಕಥಾಲು’ ಎಂಬ ಗ್ರಂಥದಲ್ಲಿ ಪ್ರಕಟಿಸಿರುವುದು ಕಂಡು ಬರುತ್ತದೆ. ಈ ಕಥೆಯೇ ಮುಂದೆ 1924 ರ ತರುವಾಯ ಮೂಕಿ ಸಿನೆಮಾವಾಗಿಯೂ ಮೂಡಿದ್ದು, ಈ ಕಥೆಯ ಅಖಿಲ ಭಾರತ ಜನಪ್ರಿಯತೆಗೆ ಪುರಾವೆ. ಹೀಗಾಗಿ, ಆ ಕಾಲದ ಗುಬ್ಬಿ ಕಂಪೆನಿಯ ಕನ್ನಡ ನಾಟಕವಾಗಿ ಗುಲೇಬಕಾವಲಿ ಮೆರೆದದ್ದು ಕಾಕತಾಳೀಯವೇನಲ್ಲ!

ಬಕಾವಲಿ ಹೂ ನಾಟಕವು ಅಸಾಧ್ಯವನ್ನು ಸಾಧ್ಯವಾಗಿಸಲು ಹೊರಟ; ದೈವಿಕ ಅಶೀರ್ವಾದವಿರುವ; ಸ್ಪುರದ್ರೂಪಿ ಅನಾಥ ರಾಜಕುಮಾರ ತಾಜುಲ್ ಮುಲ್ಕ್ ನ ಕರುಣೆ, ತ್ಯಾಗ, ವಿವೇಕ, ಜಾಣ್ಮೆ, ಸಾಹಸ, ನವಿರು ಶೃಂಗಾರಗಳ ಕಥೆ.

ಶಪಿತನಾಗಿ ಜನ ಸಾಮಾನ್ಯನಂತೆ ಬೆಳೆದ ಅನಾಥ ನತದೃಷ್ಟ ರಾಜಕುಮಾರನೊಬ್ಬ, ದೈವೀಕೃಪಾಶೀರ್ವಾದದ ಗೂಢ ಬೆಂಬಲದಿಂದಲೂ, ತನ್ನ ಸ್ವಯಂ ಯೋಗ್ಯತೆಯಿಂದಲೂ ಅದೃಷ್ಟವನ್ನು ಜಯಿಸಿಕೊಂಡ ಕಥಾನಕ ಇದು. ಕಥಾರಂಭದಲ್ಲೇ ಸಂಭಾವ್ಯ ದುರದೃಷ್ಟವನ್ನು ಮುಂಗಾಣಿಸುತ್ತ, ಆ ದುರದೃಷ್ಟವೇ ಅದೃಷ್ಟವಾಗಿ ಪರಿವರ್ತಿತವಾಗುವ; ಸತ್ಯಕ್ಕೇ ಜಯ ದೊರಕಿ ಸುಖಾಂತ್ಯಗೊಳ್ಳುವ ಕಾವ್ಯನ್ಯಾಯ ಕಥಾವಿನ್ಯಾಸ ಇಲ್ಲಿದೆ. ಮನುಷ್ಯತ್ವದ ಉದಾತ್ತತೆಯನ್ನು ಎತ್ತಿ ಮೆರೆಸುವ ‘ಅಸಾಮಾನ್ಯ ಸಾಮಾನ್ಯ’ನೊಬ್ಬನ ರೋಚಕ ಕಥೆ ಇದು. ಹೆಜ್ಜೆ ಹೆಜ್ಜೆಗೂ ತಿರುವು - ಕುತೂಹಲ; ಸವಾಲು-ಸಾಹಸ; ಕಣ್ಕಟ್ಟು - ಮಾಂತ್ರಿಕತೆ ಮುಂತಾದ ವಿಸ್ಮಯಕಾರೀ ಘಟನೆಗಳ ಸರಮಾಲೆಯೊಂದಿಗೆ ಭರಪೂರ ಮನರಂಜನೆಯನ್ನೀಯುತ್ತ ಸಾಗುವ ಈ ರೋಮಾಂಚಕಾರೀ ಕಥಾನಕವು ಫ್ಯಾಂಟಸಿ ಚಮತ್ಕಾರಗಳನ್ನು ಸುಲಭವಾಗಿ ಸೃಷ್ಟಿಸಲು ಸಾಧ್ಯವಾಗುವ ಸಿನೆಮಾ, ಸುಳ್ಳಿನ ಮೂಲಕ ಸತ್ಯವನ್ನು ಕಾಣಿಸುವ ರಂಗಭೂಮಿ- ಈ ಮಾಧ್ಯಮಗಳೆರಡಕ್ಕೂ ಆಪ್ತವೆನಿಸಿದ್ದು ಸಹಜವೇ ಆಗಿದೆ.

ನಾಟಕಕಾರರಾಗಿ ಸುಧೀರ್ ಅತ್ತಾವರ್ ಅವರ ಕಸಬುಗಾರಿಕೆಯ ಕುರಿತು ನನ್ನ ವಿಶೇಷ ಮೆಚ್ಚುಗೆ ಇದೆ. ಕಥೆಯೊಂದನ್ನು ನಾಟಕರೂಪಕ್ಕಿಳಿಸುವಾಗ ನಾಟಕಕಾರನು ಎದುರಿಸುವ ಮೊದಲ ಸವಾಲೆಂದರೆ ಆ ಕಥೆಯ ಕಾಲ-ದೇಶಗಳ ಮರು ಹೊಂದಾಣಿಕೆ ಹಾಗೂ ಜೋಡಣೆ. ಅಂದರೆ, ಪ್ರೇಕ್ಷಕನ ಮನಸ್ಸಿನಲ್ಲಿ ಮುಂದೇನು ಎಂಬ ಕಥಾಕುತೂಹಲ ಮೂಡಿಸುತ್ತ ಕಥನವು ಅನುಕ್ರಮವಾಗಿ ಹಿಗ್ಗುತ್ತ ಏರುಗತಿಯಲ್ಲಿ ಸಾಗುವಂತೆಯೂ, ಹಾಗೂ ಅದೇ ಕಾಲಕ್ಕೆ, ಪ್ರೇಕ್ಷಕನ ಕಣ್ಣಿದುರು ಪ್ರತ್ಯಕ್ಷ ಕಾಣುವ ಕಥಾ ಪ್ರದೇಶಗಳನ್ನು ಒಂದರ ಪಕ್ಕ ಇನ್ನೊಂದನ್ನಿಟ್ಟು ವೈವಿಧ್ಯಮಯ ದೃಶ್ಯಾವಳಿಗಳನ್ನಾಗಿಯೂ, ತಾಂತ್ರಿಕ ತಡೆಯೊಡ್ಡದೆ ಅವು ಸರಾಗ ಓಡುವಂತೆಯೂ ಹೆಣೆಯಬೇಕು. ಅರ್ಥಾತ್, ಪ್ರೇಕ್ಷಕನ ಮನಸ್ಸಿನಲ್ಲಿ ಬೆಳೆಯುವ ಅಮೂರ್ತ ವಿನ್ಯಾಸವನ್ನೂ ಅಂತೆಯೇ ಕಣ್ಣಿಗೆ ಕಾಣುವ ಮೂರ್ತ ದೃಶ್ಯ ವಿನ್ಯಾಸವನ್ನೂ - ಪರಸ್ಪರ ಹೊಂದಿಸಿ ಕಡೆದು ನಿಲ್ಲಿಸಬೇಕು. ಮಾತ್ರವಲ್ಲ, ನಾಟಕಕಾರನು ಕಥನ ಕಾಲ -ನರೇಟಿವ್ ಟೈಮ್‌ನ್ನು ಹಿಗ್ಗಿಸುತ್ತಲೂ ಕುಗ್ಗಿಸುತ್ತಲೂ; ದೃಶ್ಯ ಸ್ಥಳವನ್ನು ವಿಸ್ತರಿಸುತ್ತಲೂ - ನಿಯಂತ್ರಿಸುತ್ತಲೂ ಇರಬೇಕು. ಈ ರೀತಿಯ ಕಾಲ-ಸ್ಥಳಗಳ ಸರಾಗ ಹರಿಯುವಿಕೆಯನ್ನು ಅಪೇಕ್ಷಿಸುವ, ನಾಟಕೀಯ ಕಥನದ ಕಸಬುಗಾರಿಕೆಯಲ್ಲಿ ಸುಧೀರ್ ಅವರು ತಮ್ಮ ಚೊಚ್ಚಲ ನಾಟಕ ಕೃತಿಯಲ್ಲೇ ಪರಿಣಿತಿಯ ಕುರುಹು ತೋರಿಸಿದ್ದಾರೆ.

ಆದ್ದರಿಂದಲೇ ನಾಟಕ ಪಠ್ಯವನ್ನು ನಿರ್ದೇಶಕನ ಕಣ್ಣಿನಲ್ಲಿ ಅಳೆದು ನೋಡುವ ಅಭ್ಯಾಸವಾಗಿರುವ ನನಗೆ, ಬಕಾವಲಿಯ ಹೂ ನಾಟಕದಲ್ಲಿಯ ನಾಟಕೀಯತೆ, ಕಣ್ಣಿಗೆ ಅಚ್ಚೊತ್ತುವಂತಿರುವ ದೃಶ್ಯಾವಳಿಗಳು, ದೃಶ್ಯಗಳ ಸರಾಗ ಹರಿವು, ಚುರುಕು ಸಂಭಾಷಣೆ, ಕಾವ್ಯ ಪ್ರತಿಮೆ, ಗೇಯ ಗೀತಗಳು ಪ್ರದರ್ಶನವನ್ನು ಉತ್ಕಟಗೊಳಿಸುವ ಹಾಗೂ ಅನುಭವದ ಗಹನತೆಗೆ ಅನುವಾಗುವ ಅಂಶಗಳು ಎಂದೆನಿಸಿವೆ. ನಟರ ಭಾವಭಂಗಿ ರಸಾವೇಶಕ್ಕೆ ವಿಪುಲ ಅವಕಾಶವನ್ನು ನಾಟಕಕಾರರು ಒದಗಿಸಿದ್ದಾರೆ ಇಲ್ಲಿ.

ಸುಧೀರ್ ಅತ್ತಾವರ್ ಅವರ ಬಕಾವಲಿ ಹೂ ಸಮಕಾಲೀನ ರಂಗಭೂಮಿಯಲ್ಲಿ ಬಹುವಿಧ ಪ್ರಯೋಗಗಳಾಗಿ ಅರಳಲಿ ಎಂದು ಆಶಿಸುತ್ತೇನೆ.

share
ಸುರೇಶ ಆನಗಳ್ಳಿ
ಸುರೇಶ ಆನಗಳ್ಳಿ
Next Story
X