ಮೊದಲ ಸ್ಥಾನದಲ್ಲಿದ್ದ ಸ್ಟೀಪಲ್ ಚೇಸ್ ಪಟು ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದು ಹೀಗೆ !
ಲಂಡನ್ ವರ್ಲ್ಡ್ ಚಾಂಪಿಯನ್ ಶಿಪ್

ಲಂಡನ್, ಆ.12: ಕೀನ್ಯಾದ ಅಥ್ಲೀಟ್ ಬೀಟ್ರಿಸ್ ಚೆಪ್ಕೊಚ್ ಲಂಡನ್ ವರ್ಲ್ಡ್ ಚಾಂಪಿಯನ್‌ಶಿಪ್‌ನ ಮಹಿಳೆಯರ ಸ್ಟೀಪಲ್‌ಚೇಸ್ ಫೈನಲ್‌ನಲ್ಲಿ ಜಲಲಂಘನ (ವಾಟರ್ ಜಂಪ್) ಮಾಡಲು ಮರೆತ ಕಾರಣದಿಂದಾಗಿ ನಾಲ್ಕನೆ ಪಡೆದರು.
ಎಲ್ಲರಿಗಿಂತಲೂ ಮುಂದಿದ್ದ ಚೆಪ್ಕೊಚ್ ದೊಡ್ಡ ಪರದೆಯಲ್ಲಿ ತಾನು ಮೊದಲ ಸ್ಥಾನದಲ್ಲಿರುವುದನ್ನು ಗಮನಿಸಿದರು. ಆದರೆ ಜಲಲಂಘನ (ನೀರಿನ ಮೇಲೆ ನೆಗೆತ) ಮಾಡುವಲ್ಲಿ ಮರೆತರು. ಮತ್ತೆ ನೆನಪಾಗಿ ಹಿಂದಕ್ಕೆ ಬಂದು ಜಲಲಂಘನ ಮಾಡಿದಾಗ ಕಾಲ ಮಿಂಚಿತ್ತು. ಅವರು ಒಂದನೇ ಸ್ಥಾನ ಕಳೆದುಕೊಂಡು ನಾಲ್ಕನೆ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
Next Story





