ಗೋರಖ್ ಪುರ ಆಸ್ಪತ್ರೆಯಲ್ಲಿ ಇನ್ನೊಂದು ಮಗು ಸಾವು; ಮೃತಪಟ್ಟ ಮಕ್ಕಳ ಸಂಖ್ಯೆ 70ಕ್ಕೆ ಏರಿಕೆ

ಗೋರಖಪುರ, ಆ.13: ಉತ್ತರ ಪ್ರದೇಶದ ಗೋರಖ್ಪುರ ಬಿಆರ್ ಡಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ರವಿವಾರ ಬೆಳಗ್ಗೆ ನಾಲ್ಕರ ಹರೆಯದ ಮಗುವೊಂದು ಮೃತಪಟ್ಟಿದ್ದು, ಇದರೊಂದಿಗೆ ಕಳೆದ 6 ದಿನಗಳಲ್ಲಿ ಆಸ್ಪತ್ರೆಯಲ್ಲಿ ಸಾವಿಗೀಡಾದ ಮಕ್ಕಳ ಸಂಖ್ಯೆ 70ಕ್ಕೆ ಏರಿದೆ.
ಆಸ್ಪತ್ರೆಗೆ ದಾಖಲಾಗಿದ್ದ ಮಿದುಳು ನಂಜಿನಿಂದ (ಎನ್ಸೆಫಲಿಟಿಸಿ) ಬಳಲುತ್ತಿದ್ದ ನಾಲ್ಕರ ಹರೆಯದ ಗಂಡು ಮಗು ಮೃತಪಟ್ಟಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಆಮ್ಲಜನಕದ ಕೊರೆತೆಯಿಂದ ಎರಡು ದಿನಗಳ ಹಿಂದೆ 30 ಮಕ್ಕಳು ಸಾವಿಗೀಡಾದ ಬೆನ್ನಲ್ಲೇ ಆಸ್ಪತ್ರೆಯ ಕರ್ಮಕಾಂಡ ಹೊರಜಗತ್ತಿಗೆ ಗೊತ್ತಾಗಿತ್ತು.
ಮುಖ್ಯ ಮಂತ್ರಿ ಆದಿತ್ಯನಾಥ್ ಪ್ರತಿನಿಧಿಸುವ ಕ್ಷೇತ್ರದಲ್ಲಿರುವ ಬಿಆರ್ ಡಿ ಆಸ್ಪತ್ರೆಯಲ್ಲಿ ಕಳೆದ ಆರು ವರ್ಷಗಳ ಅವಧಿಯಲ್ಲಿ 3,000ಕ್ಕೂ ಅಧಿಕ ಮಕ್ಕಳು ಮೃತಪಟ್ಟಿರುವ ಆಘಾತಕಾರಿ ಅಂಕಿ ಅಂಶಗಳು ದೊರೆತಿವೆ.
Next Story





