ಶೊಪಿಯಾನ್ ಎನ್ ಕೌಂಟರ್: ಮೂವರು ಉಗ್ರರ ಹತ್ಯೆ; ಇಬ್ಬರು ಯೋಧರು ಹುತಾತ್ಮ

ಹುತಾತ್ಮರಾದ ಯೋಧರು
ಹೊಸದಿಲ್ಲಿ, ಆ.13: ದಕ್ಷಿಣ ಕಾಶ್ಮೀರದ ಶೊಪಿಯಾನ್ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದು, ಕ್ಯಾಪ್ಟನ್ ಸೇರಿದಂತೆ ಇತರ ಮೂವರು ಗಾಯಗೊಂಡಿದ್ದಾರೆ. ಎನ್ ಕೌಂಟರ್ ನಲ್ಲಿ ಮೂವರು ಉಗ್ರರು ಹತರಾಗಿದ್ದಾರೆ.
ಜಿಲ್ಲೆಯ ಝೈನಾಪೊರಾ ವ್ಯಾಪ್ತಿಯ ಅವ್ನೀರಾ ಗ್ರಾಮದಲ್ಲಿ ಉಗ್ರರಿರುವ ಮಾಹಿತಿ ಲಭಿಸಿದ ನಂತರ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. “ಶೊಪಿಯಾನ್ ನಲ್ಲಿ ಉಗ್ರರಿರುವ ಬಗ್ಗೆ ಮಾಹಿತಿ ಲಭಿಸಿತ್ತು. ನಂತರ ನಾವು ಕಾರ್ಯಾಚರಣೆ ಕೈಗೊಂಡೆವು” ಎಂದು ಜಮ್ಮು ಕಾಶ್ಮೀರ ಡಿಜಿಪಿ ಎಸ್.ಪೊ. ವೈದ್ ಹೇಳಿದ್ದಾರೆ.
ಗುಂಡಿನ ಕಾಳಗದಲ್ಲಿ ಐವರು ಸೈನಿಕರಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಳಯರಾಜ ಪಿ. ಹಾಗೂ ಸುಮೇಧ್ ವಾಮನ್ ಹುತಾತ್ಮರಾಗಿದ್ದಾರೆ ಎಂದವರು ತಿಳಿಸಿದರು.
Next Story





