ಮೂಡುಶೆಡ್ಡೆಯಲ್ಲಿ ಉಚಿತ ನೇತ್ರ ಚಿಕಿತ್ಸೆ ಶಿಬಿರ

ಮಂಗಳೂರು, ಆ.13: ಶ್ರೀರಾಮ ಸೇನೆ, ಮಾರುತಿ ಘಟಕ, ದುರ್ಗಾಸೇನೆ ಇವುಗಳ ವತಿಯಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರವು ಮೂಡುಶೆಡ್ಡೆಯ ಶಿವಶಕ್ತಿ ಭಜನಾ ಮಂದಿರದಲ್ಲಿ ರವಿವಾರ ನಡೆಯಿತು.
ಶ್ರೀರಾಮ ಸೇನೆಯ ವಿಭಾಗ ಅಧ್ಯಕ್ಷರಾದ ಆನಂದ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಜೀವನ್ ನೀರುಮಾರ್ಗ, ದುರ್ಗಾಸೇನೆಯ ಅಧ್ಯಕ್ಷ ವಿಜಯಶ್ರೀ, ಡೆಲ್ಟಾ ಹೆಲ್ತ್ ಆರ್.ಎಂ.ಓ.ವೀರೇಶ್, ಯುವರಾಜ್ ಮೂಡುಶೆಡ್ಡೆ, ಶಿವ ಶಕ್ತಿ ಭಜನಾ ಮಂದಿರದ ಅಧ್ಯಕ್ಷ ರಮೇಶ್ ಮೂಡುಶೆಡ್ಡೆ, ಶ್ರೀರಾಮ ಸೇನೆ ಮೂಡುಶೆಡ್ಡೆ ಘಟಕದ ಅಧ್ಯಕ್ಷ ಗಣೇಶ್ ಮೂಡುಶೆಡ್ಡೆ, ಧರ್ಮಸ್ಥಳ ಸಂಘದ ಪದಾಧಿಕಾರಿ ಶಿವಾನಿ ಮೂಡುಶೆಡ್ಡೆ ಉಪಸ್ಥಿತರಿದ್ದರು.
Next Story





