3ನೆ ಟೆಸ್ಟ್: ಲಂಕೆಗೆ ಫಾಲೋಆನ್ ನೀಡಿದ ಭಾರತ
ಕೊಹ್ಲಿ ಪಡೆಗೆ 352 ರನ್ಗಳ ಮುನ್ನಡೆ
ಪಲ್ಲೆಕೆಲೆ, ಆ.13: ಇಲ್ಲಿ ನಡೆಯುತ್ತಿರುವ ಮೂರನೆ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ನಲ್ಲಿ ಭಾರತ ಶ್ರೀಲಂಕಾ ತಂಡಕ್ಕೆ ಫಾಲೋ ಆನ್ ವಿಧಿಸಿದೆ
ಪಲ್ಲೆಕೆಲೆ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ರವಿವಾರ ಶ್ರೀಲಂಕಾ ತಂಡ ಮೊದಲ ಇನಿಂಗ್ಸ್ನಲ್ಲಿ ಭಾರತದ ಕುಲ್ ದೀಪ್ ಯಾದವ್ (40ಕ್ಕೆ4) , ಮುಹಮ್ಮದ್ ಶಮಿ(17ಕ್ಕೆ 2) , ಆರ್.ಅಶ್ವಿನ್ (22ಕ್ಕೆ 2) ಮತ್ತು ಹಾರ್ದಿಕ್ ಪಾಂಡ್ಯ(28ಕ್ಕೆ 1) ದಾಳಿಗೆ ಸಿಲುಕಿ 37.4 ಓವರ್ಗಳಲ್ಲಿ 135 ರನ್ಗಳಿಗೆ ಆಲೌಟಾಗಿದೆ.
ಇದರೊಂದಿಗೆ ಭಾರತ 352 ರನ್ಗಳ ಮೇಲುಗೈ ಸಾಧಿಸಿದೆ.
ಶ್ರೀಲಂಕಾದ ನಾಯಕ ದಿನೇಶ್ ಚಾಂಡಿಮಾಲ್ 48 ರನ್ ಗಳಿಸಿರುವುದು ತಂಡದ ಪರ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.
ಇದಕ್ಕೂ ಮೊದಲು ಭಾರತ ಮೊದಲ ಇನಿಂಗ್ಸ್ನಲ್ಲಿ 122.3 ಓವರ್ಗಳಲ್ಲಿ 487 ರನ್ಗಳಿಗೆ ಆಲೌಟಾಗಿತ್ತು.
Next Story