ಟೊನಿ ರುಜಾಯ್‌ರಿಗೆ ಕರಾವಳ್ ಕೊಂಕಣ್ಸ್ ಕಲಾ ಪ್ರಶಸ್ತಿ
ಮಂಗಳೂರು, ಆ.13: ಕರಾವಳ್ ಕೊಂಕಣ್ಸ್ ಮಂಗಳೂರು ಸಂಘಟನೆ ವತಿಯಿಂದ ನೀಡಲಾಗುವ ಕಲಾ ಪ್ರಶಸ್ತಿಗೆ ಕೊಂಕಣಿಯ ಹಿರಿಯ ರಂಗಕರ್ಮಿ ಟೊನಿ ರುಜಾಯ್ ಆಯ್ಕೆಯಾಗಿದ್ದಾರೆ.
ಪ್ರಶಸ್ತಿಯು 50000 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಆ. 15ರಂದು ನಗರದ ಡಾನ್‌ಬಾಸ್ಕೋ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ ಜೆ.ಆರ್. ಲೋಬೋ ಹಾಗೂ ಕೊಂಕಣಿ ಕುಟುಮ್ ಬಹರೇನ್‌ನ ಮಂಗಳೂರು ಘಟಕದ ಸಂಚಾಲಕ ರಿಚರ್ಡ್ ಮೊರಾಸ್ ಪ್ರಶಸ್ತಿ ಪ್ರದಾನ ಮಾಡಲಿರುವರು.
ಕೊಂಕಣಿಯ ಹಿರಿಯ ನಟರಾಗಿ ಗುರುತಿಸಿಕೊಂಡಿರುವ ಟೊನಿ ರೊಜಾಯ್, 50 ವರ್ಷಗಳಿಗೂ ಅಧಿಕ ಕಾಲ ಕೊಂಕಣಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





