ಡಿಡಿಪಿಐ ವರ್ಗಾವಣೆ ಹಿನ್ನೆಲೆ: ತಪ್ಪು ಒಪ್ಪಿಕೊಂಡ ರೋಷನ್ ಬೇಗ್

ಚಿಕ್ಕಮಗಳೂರು, ಆ.14: ಭ್ರಷ್ಟಾಚಾರದ ಆರೋಪಕ್ಕೆಗುರಿಯಾಗಿರುವ ಡಿಡಿಪಿಐ ವಿರುದ್ದ ಕಾನೂನು ಕ್ರಮ ಕೈಗೊಳ್ಳದೆ ಬೇರೆ ಕಡೆಗೆ ವರ್ಗಾವಣೆ ಮಾಡಿರುವುದು ಸರ್ಕಾರದಲ್ಲಿ ಆಗಿರುವ ತಪ್ಪಾಗಿದೆ ಎಂದು ಉಸ್ತುವಾರಿ ಸಚಿವ ರೋಷನ್ ಬೇಗ್ ಪ್ರಕರಣದಲ್ಲಿ ತಪ್ಪಾಗಿದೆ ಎಂದು ಸೋಮವಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಈ ಹಿಂದೆ ಇಲ್ಲಿನ ಡಿಡಿಪಿಐ ಆಗಿದ್ದ ನಾಗೇಶ್ ವಿರುದ್ಧ ಶಿಕ್ಷಕರ ವರ್ಗಾವಣೆಯ ಅವ್ಯವಹಾರದ ಹಿನ್ನಲೆಯಲ್ಲಿ ರಜೆಯಲ್ಲಿ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದು, ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಜಿಪಂ ಸಿಇಓ ಸರ್ಕಾರಕ್ಕೆ ವರದಿ ನೀಡಿದ್ದರೂ ಯಾವುದೇ ಕ್ರಮ ಜರುಗಿಸಿರಲಿಲ್ಲ. ಈ ಬಗ್ಗೆ ಉಸ್ತುವಾರಿ ಸಚಿವರು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ನಂತರ ಪ್ರಥಮ ಭೇಟಿಯ ಸಂದರ್ಭದಲ್ಲಿ ಸುದ್ದಿಗಾರರು ಗಮನ ಸೆಳೆದಾಗ ಡಿಡಿಪಿಐ ಅವರನ್ನು ಅಮಾನತ್ತುಗೊಳಿಸಿ ಕ್ರಿಮಿನಲ್ಮೊಖದ್ದಮೆ ದಾಖಲು ಮಾಡುವಂತೆ ಸೂಚನೆ ನೀಡಿದ್ದರು.
ಆದರೆ ಸಚಿವರ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತು ದೊರೆತಿರಲಿಲ್ಲ. ಆರೋಪಕ್ಕೊಳಗಾಗಿದ್ದ ಅಧಿಕಾರಿಗೆ ಶಿಕ್ಷೆಗೆ ಬದಲಾಗಿ ಹಾಸನ ಜಿಲ್ಲೆಯ ಡಯಟ್‌ಗೆ ವರ್ಗಾವಣೆ ಮಾಡಲಾಗಿತ್ತು. ಈ ಸಂಬಂಧ ಇಂದು ನಗರಕ್ಕೆ ಬಂದಿದ್ದ ರೋಷನ್ ಬೇಗ್ ಅವರ ಗಮನಕ್ಕೆ
ತಂದಾಗ ಅವ್ಯವಹಾರದ ಆರೋಪಕ್ಕೆ ಗುರಿಯಾಗಿರುವ ಡಿಡಿಪಿಐ ಅವರನ್ನುಅಮಾನತ್ತುಗೊಳಿಸಿ ಕ್ರಿಮಿನಲ್ ಮೊಖದ್ದಮೆ ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕಾಗಿತ್ತು. ಆದರೆ ಅದರ ಬದಲು ಯಾವುದೇ ಕ್ರಮ ಕೈಗೊಳ್ಳದೇ
ವರ್ಗಾವಣೆ ಮಾಡಿರುವುದು ತಪ್ಪು ಎಂದು ನುಡಿದರು.







