ಬಿಹಾರದಲ್ಲಿ ಭಾರೀ ಪ್ರವಾಹಕ್ಕೆ 41 ಮಂದಿ ಬಲಿ

ಬಿಹಾರ, ಆ.14: ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಿಹಾರದಾದ್ಯಂತ ಪ್ರವಾಹ ಉಂಟಾಗಿದ್ದು, ಇದುವರೆಗೆ 41 ಮಂದಿ ಮೃತಪಟ್ಟಿದ್ದಾರೆ.
ಅಸ್ಸಾಂ ಹಾಗೂ ಉತ್ತರ ಬಂಗಾಳದಲ್ಲಿ ಬೃಹತ್ ಪ್ರದೇಶಗಳು ಮುಳುಗಡೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅರುಣಾಚಲ ಪ್ರದೇಶದಲ್ಲೂ ನೆರೆ ಹಾವಳಿಯಿದ್ದು, ಭೂಕುಸಿತಗಳೂ ಸಂಭವಿಸುತ್ತಿವೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪರಿಸ್ಥಿತಿಯನ್ನು ಅವಲೋಕಿಸಿದ್ದು, ನೆರೆಹಾವಳಿ ಅರಾರಿಯಾಗೆ ಅತೀ ಹೆಚ್ಚು ಭಾದಿಸಿದ್ದು, ಜಿಲ್ಲೆಯ ಮುಖ್ಯ ಪಟ್ಟಣಗಳಿಗೆ ನೀರು ನುಗ್ಗಿದೆ ಎಂದಿದ್ದಾರೆ.
Next Story





