ಉಡುಪಿ: ನಾಯಕತ್ವ-ಸಮುದಾಯ ಅಭಿವೃದ್ಧಿ ತರಬೇತಿ

ಉಡುಪಿ, ಆ.14: ನೆಹರು ಯುವ ಕೇಂದ್ರ, ಉಡುಪಿ ಇವರ ಆಶ್ರಯದಲ್ಲಿ ನಾಯಕತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ಬ್ರಹ್ಮಗಿರಿಯ ಪ್ರಗತಿಸೌಧದಲ್ಲಿ ಇತ್ತೀಚೆಗೆ ನಡೆಯಿತು.
ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ವಿಲ್ಪ್ರೆಡ್ ಡಿ‘ಸೋಜ ಪ್ರಾಸ್ತಾವಿಕ ಭಾಷಣದಲ್ಲಿ ಐದು ದಿನಗಳ ಕಾರ್ಯಕ್ರಮದಲ್ಲಿ ಯುವಕ/ಯುವತಿಯರಿಗೆ ನಾಯಕತ್ವ ಮತ್ತು ಸಮುದಾಯ ಅಭಿವೃದ್ಧಿಯ ಸಂಪೂರ್ಣ ತರಬೇತಿ ನೀಡಲಾಗುವುದು ಎಂದರು. ಉತ್ತಮ ವಿದ್ಯಾರ್ಥಿ ಹಾಗೂ ಸದೃಢ ನಾಗರಿಕರಾಗಿ ಸಮಾಜದ ಹಾಗೂ ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಕಾರ್ಯಗಾರ ಎಲ್ಲರಿಗೂ ಪ್ರೇರಣೆಯಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಗರಸಭೆ ಪೌರಾಯುಕ್ತ ಡಿ. ಮಂಜುನಾಥಯ್ಯ, ಪ್ರಾಂಶುಪಾಲ ಅಶೋಕ ಕೆ. ಮಾತನಾಡಿದರು. ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಐದು ದಿನಗಳ ವಸತಿ ಸಹಿತ ಕಾರ್ಯಗಾರದಲ್ಲಿ ವಿವಿಧ ವಿದ್ಯಾಕ್ಷೇತ್ರಗಳಿಂದ ಯುವಕ/ಯುವತಿಯರು ಪಾಲ್ಗೊಂಡಿದ್ದರು.
ನೆಹರು ಯುವ ಕೇಂದ್ರದ ಲೆಕ್ಕ ವಿಭಾಗದ ಮುಖ್ಯಸ್ಥ ವಿಷ್ಣುಮೂರ್ತಿ ಸ್ವಾಗತಿಸಿ ಶಾಂತಪ್ಪಧರ್ಮಸ್ಥಳ ವಂದಿಸಿದರು.





