ಮಕ್ಕಳ ಹಿಂಭಾಗಕ್ಕೆ ತಟ್ಟಿದ ಮಾತ್ರಕ್ಕೆ ಅದು ಲೈಂಗಿಕ ಕಿರುಕುಳವಾಗದು: ದಿಲ್ಲಿ ನ್ಯಾಯಾಲಯದ ಹೇಳಿಕೆ

ಹೊಸದಿಲ್ಲಿ, ಆ.14: ಮಕ್ಕಳ ಹಿಂಭಾಗಕ್ಕೆ ತಟ್ಟಿದ ಮಾತ್ರಕ್ಕೆ ಅದನ್ನು ಪೋಕ್ಸೊ ಕಾಯ್ದೆಯಂತೆ ಲೈಂಗಿಕ ಕಿರುಕುಳದ ಪ್ರಕರಣ ಎನ್ನಲಾಗದು. ಕ್ರಿಯೆಯೊಂದರ ಹಿಂದೆ ಲೈಂಗಿಕ ಬಯಕೆಯ ಭಾವನೆ ಇದ್ದರೆ ಮಾತ್ರ ಅದನ್ನು ಲೈಂಗಿಕ ಕಿರುಕುಳ ಎಂದು ವಿಶ್ಲೇಷಿಸಬಹುದು ಎಂದು ದಿಲ್ಲಿಯ ನ್ಯಾಯಾಲಯವೊಂದು ಹೇಳಿದೆ.
ಸಂತ್ರಸ್ತ ಮಗುವಿನ ಹಿಂಭಾಗಕ್ಕೆ ತಟ್ಟಿದ ಮಾತ್ರಕ್ಕೆ ಅದನ್ನು ‘ಪೋಕ್ಸೊ ’ ಕಾಯ್ದೆಯಡಿ ಲೈಂಗಿಕ ಕಿರುಕುಳ ಎಂದು ವಿಶ್ಲೇಷಿಸಲಾಗದು. ಲೈಂಗಿಕ ಭಾವನೆಯಿಂದ ಮಾಡುವ ಕೃತ್ಯವನ್ನು ಲೈಂಗಿಕ ಕಿರುಕುಳ ಎನ್ನಬಹುದು ಮತ್ತು ಇದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ದಿಲ್ಲಿಯ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎ.ಕೆ.ಸರ್ಪಾಲ್ ಹೇಳಿದ್ದಾರೆ.
Next Story





