ತಾಯಿ, ಇಬ್ಬರು ಮಕ್ಕಳು ನಾಪತ್ತೆ
ಕಾರ್ಕಳ, ಆ.16: ತಾಯಿ, ಮಕ್ಕಳು ಮನೆಯಿಂದ ನಾಪತ್ತೆಯಾಗಿರುವ ಘಟನೆ ಆ.11ರಂದು ಕೌಡೂರು ಗ್ರಾಮದ ನಾಯರ್‌ಬೆಟ್ಟು ಎಂಬಲ್ಲಿ ನಡೆದಿದೆ.
ನಾಯರ್‌ಬೆಟ್ಟುವಿನ ಗೋಪಾಲ ಎಂಬವರ ಮಗಳು ಅಕ್ಷತಾ(21) ಮತ್ತು ಆಕೆಯ ಮಕ್ಕಳಾದ ರಶ್ಮಿತಾ(5), ರಿಶಿತಾ(5ತಿಂಗಳು) ನಾಪತ್ತೆಯಾದ ತಾಯಿ ಮಕ್ಕಳು.
ಇವರು ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯಿಂದ ಹೋದ ವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





