ಮಕ್ಕಳಿಗಾಗಿ ವಾರಾಂತ್ಯದ ಚಟುವಟಿಕೆಗೆ ಅರ್ಜಿ ಆಹ್ವಾನ
ಮಂಗಳೂರು, ಆ.14: ನಗರದ ಕದ್ರಿ ಬಾಲಭವನದಲ್ಲಿ ಪ್ರತಿ ಶನಿವಾರ ಅಪರಾಹ್ನ ಮತ್ತು ರವಿವಾರ 16 ವರ್ಷದೊಳಗಿನ ಮಕ್ಕಳಿಗಾಗಿ ವಾರಾಂತ್ಯದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು.
ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವ ಮಕ್ಕಳು ಆ. 24ರೊಳಗಾಗಿ ನಿಗದಿತ ನಮೂನೆಯ ಅರ್ಜಿಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಜಿಪಂ ಕಟ್ಟಡ ಉರ್ವಸ್ಟೋರ್ ಮಂಗಳೂರು ಇಲ್ಲಿಂದ ಪಡೆಯಬಹುದು. ಮಾಹಿತಿಗಾಗಿ 0824-2451254ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





