Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. 'ಗೋದ್ರಾ'ದಲ್ಲಿ‌ ನೀನಾಸಂ ಸತೀಶ್

'ಗೋದ್ರಾ'ದಲ್ಲಿ‌ ನೀನಾಸಂ ಸತೀಶ್

ಶಶಿಕರ ಪಾತೂರುಶಶಿಕರ ಪಾತೂರು14 Aug 2017 10:24 PM IST
share
ಗೋದ್ರಾದಲ್ಲಿ‌ ನೀನಾಸಂ ಸತೀಶ್

ನೀನಾಸಂ ಸತೀಶ್ ಯಾಕೆ ಗೋದ್ರಾಗೆ ಹೋದರು ಎಂದು ಯೋಚಿಸಬೇಡಿ. ಇದು ಅವರು ನಾಯಕರಾಗಿ ನಟಿಸುತ್ತಿರುವ ಹೊಸ ಚಿತ್ರದ ಹೆಸರು.

ಪೃಥ್ವಿ, ಸವಾರಿ ಮೊದಲಾದ ಚಿತ್ರಗಳಲ್ಲಿ ನಿರ್ದೇಶಕ ಜೇಕಬ್ ವರ್ಗೀಸ್ ಗೆ ಜೊತೆಯಾಗಿ ಕೆಲಸ ಮಾಡಿದ್ದ ಕೆಎಸ್ ನಂದೀಶ್ ಪ್ರಥಮ ಬಾರಿಗೆ ಗೋದ್ರಾ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಜೇಕಬ್ ಫಿಲ್ಮ್ಸ್ ಬ್ಯಾನರ್ ನಲ್ಲಿ‌ ನಿರ್ಮಾಣವಾಗುತ್ತಿರುವ ಚಿತ್ರದ ಕತೆಯಲ್ಲಿನ ವಿಭಿನ್ನತೆಯನ್ನು ಅರ್ಥಮಾಡಿಕೊಂಡ ಸತೀಶ್, ಮತ್ತೊಮ್ಮೆ ಹೊಸ ‌ನಿರ್ದೇಶಕರ ಬೆಂಬಲಕ್ಕೆ ನಿಂತಿದ್ದಾರೆ. ಮಾತ್ರವಲ್ಲ, ಚಿತ್ರದ ಪಾತ್ರಕ್ಕಾಗಿ ಸಮರ್ಪಣಾ ಮನೋಭಾವದಿಂದ ಕೆಲಸ‌ ಮಾಡುತ್ತಿರುವ ದಾಡಿ ಬಿಟ್ಟಿರುವ ಸತೀಶ್ ಇತ್ತೀಚೆಗೆ ಅದೇ ಮುಖದೊಂದಿಗೆ ಕಾಣಿಸುತ್ತಿದ್ದರು. ಇದು ಕ್ಲೈಮ್ಯಾಕ್ಸ್ ನ ಗೆಟಪ್ ಆಗಿದ್ದು, ಚಿತ್ರದ ಆರಂಭದಲ್ಲಿ ಇಪ್ಪತ್ತನಾಲ್ಕರ ಹರೆಯದ ಹುಡುಗನ ಗೆಟಪ್ ಇರುವುದರಿಂದ ಅದಕ್ಕಾಗಿ ಮೈ ತೂಕ ಇಳಿಸಿಕೊಳ್ಳಲಿರುವುದಾಗಿ ಸತೀಶ್ ಹೇಳಿದರು. 

ಚಿತ್ರದಲ್ಲಿ‌ ಸತೀಶ್ ಕರಾವಳಿಯ ಹುಡುಗನಾಗಿ ಕಾಣಿಸಿಕೊಳ್ಳುತ್ತಾರಾದರೂ ಬೆಂಗಳೂರು ಕನ್ನಡವನ್ನೇ ಮಾತನಾಡುತ್ತಾರಂತೆ. ಕುಕ್ಕೆ  ಸುಬ್ರಹ್ಮಣ್ಯದಿಂದ ಆರಂಭಗೊಳ್ಳುವ ಕಥಾ ಪ್ರಯಾಣ ಹೈದರಾಬಾದ್ ನಿಂದ ಛತ್ತೀಸ್ ಗಡದ ವರೆಗೂ ಮುಂದುವರಿಯುವುದಂತೆ. ಅಂದಹಾಗೆ ಗೋದ್ರಾ ಹೆಸರು ನೆನಪಿಸುವ ಗುಜರಾತ್ ಹತ್ಯಾಕಾಂಡಕ್ಕೂ ಇದಕ್ಕೂ ಯಾವುದೇ ಸಂಬಂಧಗಳಿಲ್ಲ. ಇಲ್ಲಿ ಯಾವುದೇ ರಕ್ತಪಾತಗಳಿಲ್ಲ. ಆದರೆ ಪೊಲಿಟಿಕಲ್ ಡ್ರಾಮ ಇದೆ. ಒಟ್ಟು ಕತೆ ಗೋದ್ರಾ ಘಟನೆಯ ಫೀಲ್ ನೀಡಿದರೆ ಅಚ್ಚರಿಯಿಲ್ಲ ಎಂದರು ಸತೀಶ್.

ಚಿತ್ರಕ್ಕೆ ಕತೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಕೆಎಸ್ ನಂದೀಶ್ ಮಾತನಾಡಿ, "ನಾನು ಜೇಕಬ್ ಅವರ ಜೊತೆಗೆ ಹತ್ತು ವರ್ಷ ಜೊತೆಗೂಡಿ ಕೆಲಸ ಮಾಡಿದ್ದೇನೆ. ಗೋದ್ರಾ ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಇಬ್ಬರೂ ಪತ್ರಿಕೋದ್ಯಮದ ವಿದ್ಯಾರ್ಥಿಗಳು. ಇದೊಂದು‌ ಕಮರ್ಷಿಯಲ್ ಎಕ್ಸೆಪೆರಿಮೆಂಟಲ್ ಕತೆ. ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ನಟಿಸುತ್ತಿದ್ದು, ಛಾಯಾಗ್ರಾಹಕರಾಗಿ ಜೆಬೆಜ್ ಗಣೇಶ್ ಇದ್ದಾರೆ. ಉಳಿದ ತಂತ್ರಜ್ಞರು ಮತ್ತು ಕಲಾವಿದರನ್ನು  ಇನ್ನು ಫೈನಲ್ ಮಾಡಿಲ್ಲ. ನೀನಾಸಂನಿಂದ ಹೊಸಬರನ್ನು ಬಳಸಿಕೊಳ್ಳುತ್ತಿದ್ದೇವೆ" ಎಂದರು.

ಛಾಯಾಗ್ರಾಹಕ ಗಣೇಶ್, ಇದು ನನ್ನ ಎರಡನೇ ಚಿತ್ರ. ಮೂರು ಕಾಲಘಟ್ಟದಲ್ಲಿ ಕತೆಯ  ಪ್ರಯಣವಾಗುತ್ತದೆ. ಆ ಮೂರು ಸನ್ನಿವೇಶಗಳನ್ನು ಮೂರು ಟೋನ್ ನಲ್ಲಿ ತೋರಿಸಲಾಗುವುದು ಎಂದರು. ಚಿತ್ರದ ಪೋಸ್ಟರ್ ನಲ್ಲಿ ಬಳಸಿಕೊಂಡ ಚಿತ್ರದಿಂದ ಹಿಡಿದು ಕತೆಯ ಎಳೆಯವರೆಗೆ ಬಹಳಷ್ಟು ಕುತೂಹಲ ಮೂಡಿಸಿದ್ದು ನಿರೀಕ್ಷೆ ಸೃಷ್ಟಿಸಿದೆ.

ಉತ್ತರಹಳ್ಳಿ‌ ಕೆಂಗೇರಿ ರಸ್ತೆ ನಡುವೆ ಕಾಣಿಸಿಕೊಳ್ಳುವ ಓಂಕಾರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಡಾ. ಶಿವರಾಜ್ ಕುಮಾರ್ ಪಾಲ್ಗೊಂಡು ಶುಭಕೋರಿದರು. ಇದೇ ತಿಂಗಳ 25ರಿಂದ ಚಿತ್ರೀಕರಣ ಆರಂಭಗೊಳ್ಳಲಿದೆ.

share
ಶಶಿಕರ ಪಾತೂರು
ಶಶಿಕರ ಪಾತೂರು
Next Story
X