ಕಿನ್ಯ ಕುತುಬಿಯ್ಯಾ ಮದ್ರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಕಿನ್ಯಾ, ಆ. 15: ಜಮಾಅತ್ ಕಮಿಟಿ, ಕುತುಬಿಯ್ಯಾ ಹಳೆ ವಿದ್ಯಾರ್ಥಿ ಕಮಿಟಿ ಮತ್ತು SKSBV ಇದರ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅಚರಿಸಲಾಯಿತು.
ಸಯ್ಯಿದ್ ಅಮೀರ್ ತಂಙಳ್ ದುಆ ನಡೆಸಿದರು. ಧ್ವಜರೋಹಣವನ್ನು ಮಸೀದಿಯ ಅಧ್ಯಕ್ಷ ಹಾಜಿ ಹುಸೈನ್ ಕುಂಞಿ ನೆರವೇರಿಸಿದರು. ಮಸೀದಿಯ ಖತೀಬ್ ಅಬ್ದುಲ್ ಫತ್ತಾಹ್ ಪೈಝಿ ಸ್ವಾತಂತ್ರ್ಯ ಸಂದೇಶ ಭಾಷಣಗೈದರು. ಮುಖ್ಯ ಶಿಕ್ಷಕ ಫಾರೂಖ್ ದಾರಿಮಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಹಾಜಿ ಸಾದುಕುಂಞಿ ಮಾಸ್ಟರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಸೀದಿಯ ಕಾರ್ಯದರ್ಶಿಗಳಾದ ಅಬೂಸ್ವಾಲಿಹ್ ಹಾಜಿ, ಮೊಯ್ದಿನ್ ಕುಂಞಿ, ಇಸ್ಮಾಯಿಲ್ ಮತ್ತು ಹಳೆ ವಿದ್ಯಾರ್ಥಿ ಕಮಿಟಿಯ ಅಧ್ಯಕ್ಷ ಅಬ್ದುಲ್ ಖಾದರ್, ಕಾರ್ಯದರ್ಶಿ ಆರಿಫ್, ಕೋಶಾಧಿಕಾರಿ ಇಬ್ರಾಹೀಂ, ಮದರಸ ಮುಅಲ್ಲಿಮರಾದ ಅಲೀ ಹೈದರ್ ಫೈಝಿ, ಹನೀಫ್ ದಾರಿಮಿ, ಅಬ್ಬಾಸ್ ದಾರಿಮಿ, ಉಮರ್ ಅಝ್ಹರಿ, ಅಬ್ದುಲ್ಲತೀಫ್ ಅಮಾನಿ, ಇಕ್ಬಾಲ್ ಮುಸ್ಲಿಯಾರ್, ಅಬ್ದುಲ್ ಖಾದಿರ್ ಮುಸ್ಲಿಯಾರ್, SKSBV ಅಧ್ಯಕ್ಷ ರಂಶೀದ್, ಕಾರ್ಯದರ್ಶಿ ಶಕೀರ್ ಹಾಗೂ ಊರಿನ ಪ್ರಮುಖರು, ವಿಧ್ಶಾರ್ಥಿಗಳು ಭಾಗವಹಿಸಿದರು.