ಗುಡ್ಡೆಅಂಗಡಿ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ
ವಿಟ್ಲ,ಆ.15 : ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವತಿಯಿಂದ ದೇಶದ 71ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಮಸೀದಿ ಅಧ್ಯಕ್ಷ ಉಮರುಲ್ ಫಾರೂಕ್ ಧ್ವಜಾರೋಹಣ ನೆರವೇರಿಸಿದರು. ಮಸೀದಿ ಖತೀಬ್ ಉಸ್ಮಾನ್ ರಾಝಿ ಬಾಖವಿ ಅಲ್-ಹೈತಮಿ, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಮಸೀದಿ ಪದಾಧಿಕಾರಿಗಳಾದ ಯಾಕೂಬ್, ಮುಹಮ್ಮದ್ ಹನೀಫ್, ಅಬ್ದುಲ್ ಹಮೀದ್, ಮಜೀದ್ ಬೋಗೋಡಿ, ಮಜೀದ್ ಮೇಸ್ತ್ರಿ, ಮುಹಮ್ಮದ್ ಸಾದಿಕ್, ಮುಹಮ್ಮದ್ ಶರೀಫ್, ಅಬ್ಬಾಸ್ ಮುಸ್ಲಿಯಾರ್ ಮೊದಲಾದವರು ಭಾಗವಹಿಸಿದ್ದರು.
Next Story