ಪಿಎಫ್‍ಐ ನಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಮಡಿಕೇರಿ ಆ.15 :ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವತಿಯಿಂದ 71ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ಜರುಗಿತು.
ಪಿ.ಎಫ್.ಐ ಜಿಲ್ಲಾಧ್ಯಕ್ಷರಾದ ಟಿ.ಎ.ಹ್ಯಾರೀಸ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶದ ಸ್ವಾತಂತ್ರಕ್ಕಾಗಿ ರಣರಂಗದಲ್ಲಿ ಹೋರಾಡಿ ಹುತಾತ್ಮರಾದ ನೈಜ ಸ್ವಾತಂತ್ರ ಹೋರಟಗಾರರು ಹುಟ್ಟಿ ಬೆಳೆದ ಪುಣ್ಯ ಭೂಮಿ ಭಾರತ ಎಂದು ಬಣ್ಣಿಸಿದರು.
ಪ್ರಜಾಪ್ರಭುತ್ವ ದೇಶದಲ್ಲಿ ಆಚಾರ ವಿಚಾರ, ಧರ್ಮ, ಜಾತಿ, ವರ್ಗಗಳು ವೈವಿಧ್ಯತೆಯಲ್ಲಿ ಏಕತೆಯನ್ನು ಕಾಯ್ದುಕೊಂಡಿವೆ. ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿದೆ. ಆದರೆ, ಕೆಲವೊಂದು ದುಷ್ಟ ಶಕ್ತಿಗಳು ಧರ್ಮ ಧರ್ಮಗಳ ನಡುವೆ ಒಡಕು ಉಂಟು ಮಾಡಿ ದೇಶದ ಶಾಂತಿಯನ್ನು ಕದಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ಭಾರತೀಯ ದೇಶದಲ್ಲಿ ಶಾಂತಿ, ಸೌಹಾರ್ಧತೆಯನ್ನು ಗಟ್ಟಿಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಾಗಿದೆ ಎಂದು ಹ್ಯಾರೀಸ್ ಹೇಳಿದರು.
ಭಧ್ರಪಡಿಸಲು
ಎಸ್‍ಡಿಪಿಐ ಜಿಲ್ಲಾದ್ಯಕ್ಷರಾದ ಅಮಿನ್ ಮೊಹಿಸಿನ್, ಉಪಾಧ್ಯಕ್ಷರಾದ ಲಿಯಾಕತ್ ಆಲಿ, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಅಡ್ಕರ್, ಪಿಎಫ್‍ಐ ಕಾರ್ಯದರ್ಶಿ ಇಬ್ರಾಹಿಂ, ನಗರಾಧ್ಯಕ್ಷ ಅಬ್ದುಲ್ ಜಲೀಲ್ ಮತ್ತಿತರ ಪ್ರಮುಖರು ಧ್ವಜಾರೋಹಣದ ಸಂದರ್ಭ ಹಾಜರಿದ್ದು, ಸಿಹಿ ಹಂಚಿ ಸಂಭ್ರಮಿಸಿದರು. ಲಿಯಾಕತ್ ಆಲಿ ದೇಶಭಕ್ತಿಗೀತೆಗಳ ಮೂಲಕ ಗಮನ ಸೆಳೆದರು. ಫೋಟೋ :: ಪಿಎಫ್‍ಐ 1, 2







