ಮಟ್ಕಾ ದಂಧೆ: ಆರು ಮಂದಿ ಬಂಧನ
ಉಡುಪಿ, ಆ.15: ಜಿಲ್ಲೆಯ ವಿವಿಧಡೆ ದಾಳಿ ನಡೆಸಿದ ಪೊಲೀಸರು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ಹೇರೂರಿನ ಶರತ್ ಶೆಟ್ಟಿ(23), ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೈಲೂರು ಗ್ರಾಮದ ಎರ್ಲಪ್ಪಾಡಿ ಕ್ರಾಸ್ ಬಳಿ ಕುಂಟಲ್ಪಾಡಿಯ ಸುಧಾಕರ ಮೊಗೇರ(45), ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಟಿ ಬಸ್ ನಿಲ್ದಾಣದ ಬಳಿ 4,115ರೂ. ನಗದು ಸಹಿತ ಬಾಗಲಕೋಟೆಯ ವಿಠಲ(22) ಮತ್ತು 1,510ರೂ. ನಗದು ಸಹಿತ ಚಿಟ್ಪಾಡಿಯ ಸಂಜೀವ(60), ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮುಡಾರು ಗ್ರಾಮದ ದಿಡಿಂಬಿರಿಗುಡ್ಡೆ ಗಣಪತಿಕಟ್ಟೆ ಎಂಬಲ್ಲಿ 1015ರೂ. ನಗದು ಸೇರಿದಂತೆ ಸ್ಥಳೀಯ ನಿವಾಸಿ ರಾಘು ಶೆಟ್ಟಿ(55), ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಗಿಳಿಯಾರು ಶಾಲೆಯ ಬಳಿ ತಲ್ಲೂರಿನ ರಾಮ ಶೆಟ್ಟಿ(51) ಎಂಬ ವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





