ಸರಕಾರಿ ಆಸ್ಪತ್ರೆ ಅನ್ಯಾಯವನ್ನು ಖಂಡಿಸಿ ಎಎಪಿಯಿಂದ ಪ್ರತಿಭಟನೆ

ಹಾಸನ, ಆ. 15: ನಗರದ ಜಿಲ್ಲಾ ಆಸ್ಪತ್ರೆಯ ಅನ್ಯಾಯವನ್ನು ಖಂಡಿಸಿ ಆಮ್ ಆದ್ಮಿ ಪಾರ್ಟಿಯಿಂದ ಡಿಸಿ ಕಛೇರಿ ಮುಂದೆ ಇರುವ ಅಂಬೇಡ್ಕರ್ ಪ್ರತಿಮೆ ಎದುರು ಪಾರ್ಟಿ ಮುಖಂಡ ಅಕ್ಮಲ್ ಜಾವಿದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಶ್ರಿ ಚಾಮರಾಜೆಂದ್ರ ಸರಕಾರಿ ಆಸ್ಪತ್ರೆಯಲ್ಲಿ ದಿನನಿತ್ಯ ಸಾವಿರಾರು ಜನ ಬಡ ರೋಗಿಗಳು ತಮ್ಮ ಅನಾರೋಗ್ಯದ ಹಿನ್ನಲೆಯಲ್ಲಿ ಸೂಕ್ತ ಚಿಕಿತ್ಸೆಗಾಗಿ ಭೇಟಿ ನೀಡುತ್ತಾರೆ. ಆದರೇ ಆಸ್ಪತ್ರೆಯ ಸಿಬ್ಬಂದಿಗಳಲ್ಲಿ ಬೇಜವಬ್ಧಾರಿತನದಿಂದ ರೋಗಿಗಳ ಜೊತೆ ಸೌಜನ್ಯದಿಂದ ನಡೆದುಕೊಳ್ಳದೆ ಉಡಾಫೆಯಿಂದ ವರ್ತಿಸುತ್ತಾರೆ. ರಕ್ತದ ಪರೀಕ್ಷೆಗಾಗಿ ಪಡೆದ ರಕ್ತ ಹಾಗೂ ಮೂತ್ರದ ಎರಡು ಮಾಧರಿಗಳನ್ನು ಕಳೆದು ಹಾಕುತ್ತಾರೆ. ರಿಪೋರ್ಟ್ ಕೇಳಲು ಹೋದರೇ ನಿಮ್ಮ ಮಾಧರಿ ಬಂದಿರುವುದಿಲ್ಲ ಎಂದು ಮತ್ತೆ ರಕ್ತ ಪಡೆಯುತ್ತಾರೆ. ಸರಿಯಾಗಿ ರಕ್ತ ಪರೀಕ್ಷೆಗೆ ಒಳಪಡಿಸುವುದಿಲ್ಲ ಎಂದು ದೂರಿದರು. ಸರಕಾರವು ಲಕ್ಷಾಂತರ ರೂಗಳನ್ನು ಖರ್ಚು ಮಾಡಿ ರಕ್ತ ಪರೀಕ್ಷೆಯ ಯಂತ್ರಗಳನ್ನು ನೀಡಿದೆ. ಅದು ಜನರ ಉಪಯೋಗಕ್ಕೆ ಬಾರದೆ ಸುಮ್ಮನೆ ಇದ್ದು, ಅನ್‍ಲೈಸರ್ ಇದ್ದರೂ ಸಹಾ ರೋಗಿಗಳನ್ನು ಕಾಯುಸುತ್ತಿದ್ದಾರೆ ಎಂದು ಕಿಡಿಕಾರಿದರು. ಸರಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆಗಳ ತಾಣವಾಗಿದೆ. ಕೂಡಲೇ ಪರಿಶೀಲಿಸಿ ಕ್ರಮ ಕೈಗೊಂಡು ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸುವಂತೆ ತಮ್ಮ ಪ್ರತಿಭಟನೆಯಲ್ಲಿ ಘೋಷಣೆ ಕೂಗಿದರು.
ಮುಂದಾದರೂ ಯಾರಾದರೂ ರೋಗಿಗಳು ಬಂದರೇ ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಅಲ್ಲಿಯ ಸಿಬ್ಬಂದಿಗಳು ಸೂಚಿಸಬೇಕು. ಇವರ ಬೇಜವಬ್ಧಾರಿತನದಿಂದ ಮತ್ತು ದುರ್ವರ್ತನೆಯ ವಿರುದ್ಧ ಉಗ್ರವಾಗಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.





