ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಯಶೋಧರ ನಾಯ್ಕ ಟ್ರಸ್ಟ್ ನಿಂದ ದೇಣಿಗೆ

ಹೊನ್ನಾವರ, ಆ. 15: ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಸುಮಾರು ಒಂದುವರೆ ಲಕ್ಷ ರೂಪಾಯಿ ವೆಚ್ಚದ ತುರ್ತು ನಿಘಾ ಘಟಕದ ಉಪಕರಣಗಳನ್ನು ಸಮಾಜ ಸೇವಕ, ಉದ್ಯಮಿ ಯಶೋಧರ ನಾಯ್ಕ ಟ್ರಸ್ಟ್ ನಿಂದ ದೇಣಿಗೆ ನೀಡಲಾಯಿತು.
ಈ ಸಂಧರ್ಬದಲ್ಲಿ ಮಾತನಾಡಿದ ಅವರು ಹೊನ್ನಾವರ ಜನತೆಗೆ ಅತ್ಯಂತ ಅವಶ್ಯವಾಗಿರುವ ಸರ್ಕಾರಿ ಆಸ್ಪತ್ರೆಗೆ ವೈದ್ಯಾಧಿಕಾರಿಗಳು ತುರ್ತು ನಿಘಾ ಘಟಕ ಬೇಡಿಕೆ ಬಂದ ಹಿನ್ನಲೆಯಲ್ಲಿ ಈ ಉಪಕರಣಗಳನ್ನು ನೀಡಿದ್ದೇನೆ.ನಮ್ಮ ಟ್ರಸ್ಠ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಮಹಿಳೆಯರಿಗೆ ಕಡಿಮೇ ದರದಲ್ಲಿ ಸಾಲ ಸೌಲಭ್ಯ, ವಿಧ್ಯಾರ್ಥಿಗಳಿಗೆ ಪ್ರೊತ್ಸಾಹ ಧನ ಹೊಲಿಗೆ ತರಬೆತಿ ಮುಂತಾದ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ ಎಂದುರು.
ಹೊನ್ನಾವರ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ರಾಜೇಶ್ ಕಿಣಿ ಮಾತನಾಡಿ ಅಫಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ತಿವ್ರ ನಿಘಾ ಗಟಕ ಅವಶ್ಯಕತೆ ಇದ್ದು ನಾವು ಯಶೋಧರ ನಾಯ್ಕ ಅವರ ಹತ್ತಿರ ಬೇಡಿಕೆ ಇಟ್ಟಿದ್ದು ಅವರು ನೀಡಿದ ಈ ಐಸಿಯು ಘಟಕದಿಂದ ಉತ್ತಮವಾದ ಪ್ರಯೋಜನವಾಗಿದೆ ಎಂದರು.
ಸತ್ಯ ಜಾವಗಲ್ ಮಾತನಾಡಿ ಯಶೋಧರ ನಾಯ್ಕರವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಯಾವುದೇ ಪ್ರಚಾರ ಬಯಸುತ್ತಿಲ್ಲ ಎಂದರು ಸುಮಾರು ಒಂದುವರೆ ಲಕ್ಷ ವೆಚ್ಚ ಮೊತ್ತದ ತಿವ್ರಾ ನಿಘಾ ಘಟಕದ ಉಪಕರಣವನ್ನು ವೈದ್ಯಾಧಿಕಾರಿಗಳಗೆ ಸಮರ್ಪಿಸಲಾಯಿತು.
ಈ ಸಂರ್ದಭದಲ್ಲಿ ಯಶೋಧರ ನಾಯ್ಕ ಟ್ರಸ್ಟ ವತಿಯಿಂದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ|| ರಾಜೇಶ್ ಕಿಣಿಯವರನ್ನು ಸನ್ಮಾನಿಸಲಾಯಿತು
ಈ ಸಂಧರ್ಬದಲ್ಲಿ ಆಸ್ಪತ್ರಯ ಸಿಬ್ಬಂದಿ ವರ್ಗದವರು ಹಾಗೂ ಯಶೋಧರ ನಾಯ್ಕ ಟ್ರಸ್ಟ ಸದಸ್ಯರುಗಳು, ಸತ್ಯ ಜಾವಗಲ, ಜಿ.ಜಿ. ಶಂಕರ ಮತ್ತು ಅಭಿಮಾನಿಗಳು ಇತರರು ಇದ್ದರು







