Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಪ್ರಧಾನಿಯ ಮಾತು-ಕೃತಿಯಲ್ಲಿ ಅಂತರ

ಪ್ರಧಾನಿಯ ಮಾತು-ಕೃತಿಯಲ್ಲಿ ಅಂತರ

ವಾರ್ತಾಭಾರತಿವಾರ್ತಾಭಾರತಿ15 Aug 2017 11:37 PM IST
share
ಪ್ರಧಾನಿಯ ಮಾತು-ಕೃತಿಯಲ್ಲಿ ಅಂತರ

ಉತ್ತರ ಪ್ರದೇಶದಲ್ಲಿ 80ಕ್ಕೂ ಹೆಚ್ಚು ಹಸುಗೂಸುಗಳ ದುರಂತ ಸಾವಿನೊಂದಿಗೆ ಮಂಗಳವಾರ 71ನೆ ಸ್ವಾತಂತ್ರ್ಯ ದಿನವನ್ನು ಆಚರಿಸಿದೆವು. ಭಾರತದಂತಹ ದೊಡ್ಡ ದೇಶದಲ್ಲಿ ಇವೆಲ್ಲಾ ಸಾಮಾನ್ಯ ಸಂಗತಿಯೆಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಉಡಾಫೆಯಿಂದ ಮಾತನಾಡಿದ್ದಾರೆ. ಆದರೆ ಗುಲ್ಜಾರ್‌ರಂತಹ ಕವಿಗೆ ಈ ಸಾವುಗಳು ಸಹಿಸಲಾಗದಂತಹ ಆಘಾತ ಉಂಟು ಮಾಡಿವೆ. ಶವಪೆಟ್ಟಿಗೆಗಳ ಮೇಲೆ ಹೂಗಳನ್ನು ನೋಡಿದ್ದೆ. ಆದರೆ ಗೋರಖ್‌ಪುರದಲ್ಲಿ ಹೂಗಳ ಶವಪೆಟ್ಟಿಗೆ ಕಂಡೆ ಎಂದು ಅವರು ಹೇಳಿದ್ದಾರೆ. ಮಕ್ಕಳ ಸಾವಿನ ಸೂತಕದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿಯ ಕೆಂಪು ಕೋಟೆಯಲ್ಲಿ ನಿಂತು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಸಾವುಗಳ ಬಗ್ಗೆ ಅವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಈ ಕಂದಮ್ಮಗಳ ಸಾವಿಗೆ ಕಾರಣರಾದ ಅಯೋಗ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಂದ ರಾಜೀನಾಮೆ ಪಡೆದು ಗೋರಖ್‌ಪುರ ಮಠಕ್ಕೆ ಕಳುಹಿಸಿದ್ದರೆ, ಈ ಮಾತಿಗೆ ಘನತೆ ಬರುತಿತ್ತು.

ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಳ್ಳದ ಪಕ್ಷಕ್ಕೆ ಮತ್ತು ಪರಿವಾರಕ್ಕೆ ಸೇರಿದ ಪ್ರಧಾನಿ ತಮ್ಮ ಭಾಷಣದಲ್ಲಿ ಗೋರಖ್‌ಪುರದಲ್ಲಿ ಮಕ್ಕಳ ಸಾವಿನ ಬಗ್ಗೆ ಮಾತ್ರವಲ್ಲ ರಾಷ್ಟ್ರಕ್ಕೆ ಕಾಡುತ್ತಿರುವ ಹಲವಾರು ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ನೋಟು ಅಮಾನ್ಯೀಕರಣ ಸಮರ್ಥಿಸಿಕೊಂಡಿದ್ದಾರೆ. ತಾವು ಕೈಗೊಂಡ ಕ್ರಮದಿಂದ ದೇಶಕ್ಕೆ ಒಳ್ಳೆಯದಾಗಿದೆಯೆಂದು ಹೇಳಿದ್ದಾರೆ. ಸಂವಿಧಾನದ ಚೌಕಟ್ಟಿನಲ್ಲಿ ನಿಂತು ಮಾತನಾಡುವ ಅನಿವಾರ್ಯತೆಗೆ ಒಳಗಾದ ನರೇಂದ್ರ ಮೋದಿ ಜಾತೀಯತೆ ಮತ್ತು ಕೋಮುವಾದದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಪ್ರಜಾಪ್ರಭುತ್ವದ ಬಲವರ್ಧನೆ ಬಗ್ಗೆ ಮಾತನಾಡಿದ್ದಾರೆ. ಕಾಶ್ಮೀರ ಸಮಸ್ಯೆಗೆ ಬಂದೂಕು ಪರಿಹಾರವಲ್ಲ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ.


ಆದರೆ ಪ್ರಧಾನಿಯವರ ಮಾತಿಗೂ ಮತ್ತು ಕೃತಿಗೂ ಎಷ್ಟು ವ್ಯತ್ಯಾಸವಿದೆ ಎಂಬುದಕ್ಕೆ ಕಾಶ್ಮೀರದಲ್ಲಿ ನಿತ್ಯವೂ ನಡೆಯುತ್ತಿರುವ ಘಟನೆಗಳೇ ಸಾಕ್ಷಿ. ಮೋದಿಯವರು ಅಧಿಕಾರ ವಹಿಸಿಕೊಂಡ ಬಳಿಕ ಕಾಶ್ಮೀರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮತ್ತು ಅವರ ಹೃದಯವನ್ನು ಗೆಲ್ಲುವ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ನೆಹರೂ ಕಾಲದಿಂದ ದೇಶ ಅನುಸರಿಸಿಕೊಂಡು ಬಂದ ಧೋರಣೆಗೆ ವ್ಯತಿರಿಕ್ತವಾಗಿ ನೋವು ಮತ್ತು ಅಸಮಾಧಾನಗಳಿಗೆ ಬಂದೂಕು ಮೂಲಕವೇ ಪರಿಹಾರ ಹುಡುಕಲು ಇಂದಿನ ಕೇಂದ್ರ ಸರಕಾರ ಯತ್ನಿಸುತ್ತಿದೆ. ತಾನು ಬೆಳೆದು ಬಂದ ಸಂಘ ಪರಿವಾರದಲ್ಲಿ ಮೈಗೂಡಿಸಿಕೊಂಡ ಕಾಶ್ಮೀರ ಕುರಿತ ಧೋರಣೆಯನ್ನೇ ಪ್ರಧಾನಿಯಾದ ನಂತರವೂ ಮೋದಿ ಅನುಸರಿಸುತ್ತಿದ್ದಾರೆ ಎಂಬುದಕ್ಕೆ ಕಾಶ್ಮೀರ ಘಟನೆಗಳೇ ಸಾಕ್ಷಿಯಾಗಿವೆ. ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಪ್ರಧಾನಿ ಮಾತನಾಡಿದ್ದಾರೆ. ಆದರೆ ಅವರು ಭಾಷಣ ಮಾಡಿದ ದಿನವೇ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ಸ್ವಾತಂತ್ರ್ಯ ದಿನದ ಭಾಷಣ ಪ್ರಸಾರ ಮಾಡಲು ದೂರದರ್ಶನ ನಿರಾಕರಿಸಿದೆ. ಮೋದಿ ಬಾಯಲ್ಲಿ ಪ್ರಜಾಪ್ರಭುತ್ವದ ಮಾತುಗಳನ್ನು ಹೇಳಿದರೂ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಲು ಯತ್ನಿಸುತ್ತಿದ್ದಾರೆ ಎಂಬ ಸಂದೇಹ ಸಹಜವಾಗಿ ಬರುತ್ತದೆ.


ಪ್ರತೀ ಬಾರಿ ಆಗಸ್ಟ್ 15 ಬಂದರೆ, ನಾವೆಲ್ಲ ಭಾರತೀಯರು ಒಂದು. ಜಾತಿ, ಧರ್ಮ, ಸಂಸೃತಿ ಬೇರೆ ಬೇರೆ ಆಗಿದ್ದರೂ ಸ್ವಾತಂತ್ರ್ಯ ಹೋರಾಟ ನಮ್ಮನ್ನೆಲ್ಲ ಬೆಸೆದು ಒಂದುಗೂಡಿಸಿದೆ. ಸ್ವಾತಂತ್ರಾನಂತರ ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ನಮ್ಮ ಏಕತೆಯನ್ನು ಗಟ್ಟಿಗೊಳಿಸಿದೆ. ಹಿಂದೆಲ್ಲ ಸ್ವಾತಂತ್ರ ದಿನವೆಂದರೆ, ಉಲ್ಲಾಸ-ಉತ್ಸಾಹ ಇರುತ್ತಿತ್ತು. ಇಂದು ಭಾರತೀಯರ ಮೇಲೆ ಸಂದೇಹದ ಗೋಡೆಗಳು ಎದ್ದು ನಿಂತಿವೆ. ನಾವೆಲ್ಲ ಭಾರತೀಯರು ಎಂಬುದು ಕ್ರಮೇಣ ಕರಗಿ ಹೋಗಿ, ನಾನು ಹಿಂದೂ, ನಾನು ಮುಸ್ಲಿಂ, ನಾನು ಕ್ರಿಶ್ಚಿಯನ್ ಎಂಬ ಕಂದಕ ನಿರ್ಮಾಣಗೊಂಡಿವೆ.

90ರ ದಶಕದಲ್ಲಿ ಮಂದಿರ ನಿರ್ಮಾಣದ ಹೆಸರಿನಲ್ಲಿ ಅಡ್ವಾಣಿ ಮೂಲಕ ಆರಂಭಿಸಿದ ರಥಯಾತ್ರೆಯ ಬಳಿಕ ಸಮಾಜವನ್ನು ವಿಭಜಿಸುವ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಗೋ ರಕ್ಷಣೆ ಎಂಬ ಹೆಸರಿನಲ್ಲಿ ಗೋರಕ್ಷಕರು ಎಂಬ ಗೂಂಡಾಗಳು ಅಖ್ಲಾಕ್ ಸೇರಿದಂತೆ ಎಷ್ಟು ಮಂದಿಯನ್ನು ಬಲಿ ಹಾಕಿದ್ದಾರೆ ಎಂದು ಲೆಕ್ಕ ಹಾಕುತ್ತ ಹೋದರೆ, ಈ ದೇಶ ಎಲ್ಲಿಗೆ ತಲುಪಬಹುದೆಂಬ ಬಗ್ಗೆ ಆತಂಕವಾಗುತ್ತದೆ. ಗೋರಕ್ಷಣೆ ಹೆಸರಿನ ಗೂಂಡಾಗಿರಿ ಬಗ್ಗೆ ಮಾತನಾಡಿಲ್ಲವೆಂದಲ್ಲ. ಆದರೆ ಅವರ ಮಾತು ಕಾಟಾಚಾರದ ಮಾತು ಎಂಬುದು ಎಲ್ಲರಿಗೂ ಗೊತ್ತಿದೆ. ಅವರು ಆಡುವ ಮಾತಿನ ಬಗ್ಗೆ ಸಹಜವಾಗಿ ಸಂದೇಹ ಮೂಡುತ್ತದೆ. ಗೋರಕ್ಷಕರು ಎಂಬುದು ಬೇರಾರೂ ಅಲ್ಲ, ಅವರೆಲ್ಲ ಮೋದಿಯವರ ಸಂಘಪರಿವಾರಕ್ಕೆ ಸೇರಿದವರು. ಅಂತಲೇ ಒಂದೆಡೆ ಮೋದಿಯವರು ತೋರಿಕೆಗೆ ಗೋರಕ್ಷಕರನ್ನು ಖಂಡಿಸುತ್ತಾರೆ. ಇನ್ನೊಂದೆಡೆ ಅವರದೇ ಪರಿವಾರದ ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಗೋರಕ್ಷಕರು ಮಾಡಿದ ಹಲ್ಲೆಯನ್ನು ಸಮರ್ಥಿಸಿಕೊಳ್ಳುತ್ತಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ-ಮರ್ಯಾದೆ ಹರಾಜು ಆಗಬಾರದು ಎಂಬ ಕಾರಣಕ್ಕೆ ಮೋದಿಯವರು ಕಾಟಾಚಾರಕ್ಕೆ ಗೋರಕ್ಷಕರನ್ನು ವಿರೋಧಿಸುತ್ತಾರೆ. ಅವರು ಅಧಿಕಾರ ವಹಿಸಿಕೊಂಡ ಮೂರು ವರ್ಷಗಳ ಕಾಲಾವಧಿಯಲ್ಲಿ ಅಲ್ಪಸಂಖ್ಯಾತರು ಮಾತ್ರವಲ್ಲ ದಲಿತರು, ಹಿಂದುಳಿದವರು ಮತ್ತು ಆದಿವಾಸಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ನಡೆದ ರೋಹಿತ್ ವೇಮುಲಾ ಆತ್ಮಹತ್ಯೆ, ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ನಡೆದ ಘಟನೆಗಳು ದೇಶದ ಶೈಕ್ಷಣಿಕ ಕ್ಷೇತ್ರವನ್ನು ಕೋಮುವಾದೀಕರಣಗೊಳಿಸಲು ನಡೆಸಿದ ಯತ್ನ-ಈ ಎಲ್ಲಾ ಪ್ರಶ್ನೆಗಳಿಗೆ ಪ್ರಧಾನಿಯವರ ಭಾಷಣದಲ್ಲಿ ಉತ್ತರ ಸಿಗಲಿಲ್ಲ. ಪ್ರಧಾನಿಯವರು ಜಾಗತಿಕ ಭಯೋತ್ಪಾದನೆ ಬಗ್ಗೆ ಸಾಕಷ್ಟು ವಿವರವಾಗಿ ಮಾತನಾಡಿದರು. ಆದರೆ ಆಂತರಿಕ ಭಯೋತ್ಪಾದನೆ ಬಗ್ಗೆ ಅವರು ಪ್ರಸ್ತಾಪಿಸಲಿಲ್ಲ. ಅವರದ್ದೇ ಪಕ್ಷ, ಪರಿವಾರದಿಂದ ನಡೆಯುತ್ತಿರುವ ಹಲ್ಲೆಗಳ ಬಗ್ಗೆ, ವಿಫಲವಾಗುತ್ತಿರುವ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಏನನ್ನೂ ಹೇಳಿಲ್ಲ. ಅಂತಲೇ ಅವರ ಭಾಷಣ ಪ್ರಾಮಾಣಿಕವಾಗಿ ಇರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಕಾಂಗ್ರೆಸ್ ಮುಕ್ತ ಭಾರತದ ಹೆಸರಿನಲ್ಲಿ ಪ್ರತಿಪಕ್ಷ ಮುಕ್ತ ಪ್ರಜಾಪ್ರಭುತ್ವ ಮುಕ್ತ,ಭಾರತವನ್ನು ನಿರ್ಮಿಸಲು ತಮ್ಮದೇ ಸರಕಾರ ದಾಪುಗಾಲಿಡುತ್ತಿರುವ ಬಗ್ಗೆ ಅವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ಪ್ರತಿಪಕ್ಷ ನಾಯಕರ ಬಾಯಿ ಮುಚ್ಚಿಸಲು ನಡೆಸುತ್ತಿರುವ ಐಟಿ ದಾಳಿಗಳು, ಬಿಹಾರದಲ್ಲಿ ನಿತೀಶ್‌ಕುಮಾರ್ ಅವರನ್ನು ಬುಟ್ಟಿಗೆ ಹಾಕಿಕೊಳ್ಳಲು ಲಾಲು ಪ್ರಸಾದ್ ಯಾದವ್ ವಿರುದ್ಧ ಸಿಬಿಐಯನ್ನು ಬಳಸಿಕೊಂಡ ರೀತಿ, ಇಂಥ ಹಲವಾರು ಪ್ರಶ್ನೆಗಳಿಗೆ ಪ್ರಧಾನಿಯವರ ಭಾಷಣದಲ್ಲಿ ಉತ್ತರ ಇರಲಿಲ್ಲ.

ಅಭಿವೃದ್ಧಿ ಹೆಸರಿನಲ್ಲಿ ಶತಮಾನಗಳಿಂದ ಅರಣ್ಯಪ್ರದೇಶದಲ್ಲಿ ನೆಲೆಸಿರುವ ಆದಿವಾಸಿಗಳನ್ನು ಎತ್ತಂಗಡಿ ಮಾಡುವುದು. ಕಾರ್ಪೊರೇಟ್ ಬಂಡವಾಳಶಾಹಿ ಒತ್ತಡಕ್ಕೆ ಮಣಿದು ಕಾರ್ಮಿಕ ಕಾನೂನನ್ನು ತಿದ್ದುಪಡಿ ಮಾಡುವುದು. ಒಂದೆಡೆ ಮಧ್ಯಮವರ್ಗದ ಜನರ ಎಲ್‌ಪಿಜಿ ಸಬ್ಸಿಡಿ ದರ ರದ್ದು ಮಾಡುವುದು. ಮತ್ತೊಂದೆಡೆ ಕಾರ್ಪೊರೇಟ್ ಕಂಪೆನಿಗಳ 81 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಇಂತಹ ಹಲವಾರು ಪ್ರಶ್ನೆಗಳ ಬಗ್ಗೆ ಪ್ರಧಾನಿಯವರ ಭಾಷಣದಲ್ಲಿ ಉತ್ತರವಿರಲಿಲ್ಲ. ಅವರ ಮಾತಿಗೂ, ಕೃತಿಗೂ ಸಂಬಂಧವಿಲ್ಲ ಎಂಬುದು ಮತ್ತೆ ಸ್ಪಷ್ಟವಾಗಿದೆ. ಗೋರಕ್ಷಕರ ಗೂಂಡಾಗಿರಿಯನ್ನು ತಡೆಯಬೇಕೆಂದರೆ, ಅವರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕು. ಕಾಶ್ಮೀರದ ಸಮಸ್ಯೆಗೆ ಬಂದೂಕು ಪರಿಹಾರವಲ್ಲ ಎಂದು ಹೇಳಿದರಷ್ಟೇ ಸಾಲದು, ಕಾಶ್ಮೀರದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಹೃದಯವನ್ನು ಗೆಲ್ಲುವ ಕ್ರಮ ಕೈಗೊಳ್ಳಬೇಕು. ಪ್ರಧಾನಿಯವರು ಏನೇ ಹೇಳಲಿ, ದೇಶದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ವ್ಯವಸ್ಥೆಗೆ ಅಪಾಯ ಆಗಿರುವುದಂತೂ ನಿಜ.ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಜನರು ಸಂಕಲ್ಪ ಮಾಡಬೇಕಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X