ಅಡ್ಡೂರು: ಸನ್‌ಶೈನ್ ಫ್ರೆಂಡ್ಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಅಡ್ಡೂರು, ಆ.15: ಅಡ್ಡೂರು ಸನ್‌ಶೈನ್ ಫ್ರೆಂಡ್ಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ 'ವಾರ್ತಾಭಾರತಿ' ಸುದ್ದಿ ಸಂಪಾದಕ ಬಿ.ಎಂ. ಬಶೀರ್ ಧ್ವಜಾರೋಹಣಗೈದು ಮಾತನಾಡಿ, ಭಾರತದ ಹಳ್ಳಿಗಳಲ್ಲಿನ ಶಾಂತಿ, ಸೌಹಾರ್ದದಿಂದ ನಾವು ಅರ್ಥಪೂರ್ಣ ಸ್ವಾತಂತ್ರ್ಯವನ್ನು ನಿರೀಕ್ಷಿಸಬಹುದು. ನಮ್ಮ ಹಿರಿಯರು ಇದೇ ತತ್ವದಿಂದ ಸಮಾಜದಲ್ಲಿ ಐಕ್ಯತೆಯನ್ನು ನಿರ್ಮಿಸಿರುವುದಾಗಿ ತಿಳಿಸಿದರು.
ಈ ಸಂದರ್ಭ ಜಿ.ಪಂ. ಸದಸ್ಯ ಯು.ಪಿ. ಇಬ್ರಾಹೀಂ, ತಾ.ಪಂ. ಸದಸ್ಯ ಸಚಿನ್, ಗ್ರಾ.ಪಂ. ಅಧ್ಯಕ್ಷ ರುಶಿಯ, ಎಂ.ಎಸ್. ಹಿದಾಯತುಲ್ಲ, ಮಸೀದಿ ಅಧ್ಯಕ್ಷ ಟಿ. ಸೈಯದ್, ಸನ್‌ಶೈನ್ ಅಧ್ಯಕ್ಷ ಎ.ಎಂ. ಇಬ್ರಾಹೀಂ, ಸನ್‌ಶೈನ್ ಸದಸ್ಯರು ಹಾಗು ಈ ಸಂದರ್ಭ ಉಪಸ್ಥಿತರಿದ್ದರು.
Next Story





