ಭಟ್ಕಳದಲ್ಲಿ ಸ್ವಾತಂತ್ರ್ಯೋತ್ಸವ

ಭಟ್ಕಳ, ಆ.15: ಇಲ್ಲಿನ ತಾಲೂಕಾಡಳಿತ ಹಾಗೂ ಸ್ವಾತಂತ್ರ್ಯೋತ್ಸವ ಸಂಭ್ರಾಮಾಚರಣೆ ಸಮಿತಿಯಿಂದ ಆಯೋಜಿಸಲ್ಪಟ್ಟ 71ನೇ ಸ್ವಾತಂತ್ರ್ಯೋತ್ಸವ ಸಮಾರಂಭವು ತಾಲೂಕು ಕ್ರೀಡಾಂಗಣದಲ್ಲಿ ಸಂಭ್ರಮ, ಸಡಗರದೊಂಗಿದೆ ನೆರವೇರಿತು.
ದ್ವಜಾರೋಹಣಗೈದು ಮಾತನಾಡಿದ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಎಂ.ಎನ್. ಮಂಜುನಾಥ್, ರಾಜ ರಾಜರ ನಡುವಿನ ವೈಮಸ್ಸು ದ್ವೇಷ, ಹಾಗೂ ತಮ್ಮ ರಾಜ್ಯ ವಿಸ್ತಾರದ ದುರಾಸೆಯ ದುರ್ಲಾಭ ಪಡೆದ ಆಂಗ್ಲರು ನಮ್ಮನ್ನು ಒಡೆದು ಈ ದೇಶವನ್ನು ಆಳಿದರು. ನಮ್ಮಲ್ಲಿ ರಾಷ್ಟ್ರೀಯ ಐಕ್ಯತೆ ಮನೋಭಾವದ ಕೊರತೆಯಿಂದಾಗಿಯೇ ನಾವು ಬ್ರೀಟಷರ ಗುಲಾಮರಾಗಬೇಕಾಯಿತು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಮಾಂಕಾಳ್ ವೈದ್ಯ, ಶಿಕ್ಷಣ ಸಮಾಜವನ್ನು ರೂಪಿಸುತ್ತದೆ. ರಾಜ್ಯದ ಕಾಂಗ್ರೇಸ್ ಸರ್ಕಾರ ಬಡ ಅಲ್ಪಸಂಖ್ಯಾತರ, ದಲಿತರ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡಿ ಅವರನ್ನು ಸಮಾಜದಲ್ಲಿ ತಲೆಎತ್ತಿ ಬದುಕುವಂತೆ ಮಾಡಿದೆ ಎಂದರು.
ತಹಶೀಲ್ದಾರ್ ವಿ.ಎನ್.ಬಾಡ್ಕರ್ ಸ್ವಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶ್ರೀದರ್ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ಪಟಗಾರ ಧನ್ಯವಾದ ಅರ್ಪಿಸಿದರು.
ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಖ್ ಮಟ್ಟಾ, ತಾ.ಪಂ. ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ, ಜಾಲಿ ಪ.ಪಂ. ಅಧ್ಯಕ್ಷ ಅಬ್ದುಲ್ ರಹೀಮ್ ಶೇಖ್, ತಾ.ಪಂ. ಉಪಾಧ್ಯಕ್ಷೆ ರಾಧಾ ಮೋಗೆರ್, ಸ್ಥಾಯಿ ಸಮಿತಿ ಅಧ್ಯಕ್ಷ ವಿಷ್ಣು ದೇಶವಾಡಿಗ, ಜಿ.ಪಂ. ಸದಸ್ಯೆ ಸಿಂಧೂ ಭಾಸ್ಕರ್ ನಾಯ್ಕ, ಡಿ.ವೈ.ಎಸ್.ಪಿ, ಶಿವಕುಮಾರ್, ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಕಾಝಿಯಾ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಿ.ಟಿ.ನಾಯ್ಕ, ಪುರಸಭೆ ಮುಖ್ಯಾಧಿಕಾರಿ ಎಸ್.ಶಂಕ್ರಪ್ಪ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ತಾ.ಪಂ. ಗ್ರಾ.ಪಂ.ಸದಸ್ಯರು ಉಪಸ್ಥಿತಿದ್ದರು.
ದ್ವಜಾರೋಹಣದ ನಂತರ ವಿವಿಧ ಶಾಲೆಯ ವಿದ್ಯಾರ್ಥಿಗಳು, ಎನ್.ಸಿ.ಸಿ. ಸ್ಕೌಟ್ಸ್, ಸೇವಾದಳ ಹಾಗೂ ಪೊಲೀಸ್ ಇಲಾಖೆಯಿಂದ ಆಕರ್ಷಕ ಪಥಸಂಚಲನ ಕಾರ್ಯಕ್ರಮ ನಡೆಯಿತು.







