ನೂರುಲ್ ಇರ್ಷಾದ್ ಅರಬ್ಬಿ ಮದರಸದಲ್ಲಿ 71ನೇ ಸ್ವಾತಂತ್ರ್ಯತ್ಸೋವ

ಸಕಲೆಶಪುರ,ಆ.16 : ಭಾರತ ಒಂದು ಸುಂದರ ಸೌಹಾರ್ದ ಸಂಗಮ ಭೂಮಿಯಾಗಿದೆ ಎಂದು ಬದ್ರಿಯ ಜುಮಾ ಮಸೀದಿ ಗುರುಗಳಾದ ರಝಾಕ್ ಸಖಾಫಿ ಹೇಳಿದರು.
ಪಟ್ಟಣ ಅಝಾದ್ ರಸ್ತೆಯಲ್ಲಿರುವ ನೂರುಲ್ ಇರ್ಷಾದ್ ಅರಬ್ಬಿ ಮದರಸದ ಅವರಣದಲ್ಲಿ ನಡೆದ 71ನೇ ಸ್ವಾತಂತ್ರ್ಯತ್ಸೋವದ ಧ್ವಜಹಾರೋಹಣ ನಂತರ ಮಾತನಾಡಿ, ಸ್ವಾತಂತ್ರ ಸಂಗ್ರಾಮದಲ್ಲಿ ದೇಶದ ಸ್ವಾತಂತ್ರಕ್ಕಾಗಿ ಸರ್ವರೂ ಜಾತಿಬೇದ ಮರೆತು ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಆದರೆ ಇಂದು ಜಾತಿಯ ದರ್ಮದ ಹೆಸರಿನಲ್ಲಿ ಪರಸ್ಪರರನ್ನು ಕಚ್ಟಾಡಿಸುವ ಮೂಲಕ ಕೆಲವು ಫಾಷಿಸ್ಟ್ ಶಕ್ತಿಗಳು ಸೌಹಾರ್ದತೆಗೆ ದಕ್ಕೆ ತರುತ್ತಿರುವುದು ಖಂಡನೀಯ .ಈ ದೇಶದ ಸ್ವಾತಂತ್ರ ಕ್ಕಾಗಿ ಅದೆಷ್ಟೋ ಹಿಂದೂ ಮಸಲ್ಮಾನ್ ಬಾಂಧವರು ಬಲಿದಾನ ಮಾಡಿದ ಫಲವಾಗಿ ನಾವು ಈ ದೇಶದಲ್ಲಿ ಸ್ವತಂತ್ರ ವಾಗಿ ಜೀವಿಸುತ್ತಿದ್ದೇವೆ ಎಂದರು.
ಯಾವುದೇ ಒಂದು ವರ್ಗಕ್ಕೆ ಜಾತಿಗೆ ಸೀಮಿತವಾದ ದೇಶವಲ್ಲ ಭಾರತ. ಪ್ರಪಂಚದಲ್ಲಿ ಒಂದು ದೇಶ ಒಂದೋಂದು ಜಾತಿಗೆ, ಭಾಷೆಗಳಿಗೆ ಸಿಮಿತವಾಗಿದೆ ಆದರೆ, ಭಾತರ ಒಂದು ಬೃಂದವನ ಇಲ್ಲಿ ಎಲ್ಲರೂ ಐಕೈತೆಯಿಂದ ಬದುಕು ಸಾಗಿಸುತ್ತಿದ್ದಾರೆ ಎಂದು ಹೆಳಿದರು.
ಪುರಸಭ ಮಾಜಿ ಆದ್ಯಕ್ಷ ಯಾದಗಾರ್ ಇಬ್ರಾಹಿಂ ಮಾತನಾಡಿ, ಒಂದು ಕಡೆ ದೇಶದೊಳಗಿನ ಆಂತರಿಕ ಕಲಹಗಳು ದೇಶದ ಸೌಹಾರ್ದತೆಗೆ ಮಾರಕವಾಗುತ್ತಿರುವಾಗ, ಭಯೋತ್ಪಾದನೆಯ ಬೆದರಿಕೆಗಳು ದೇಶದ ಪ್ರಗತಿಗೆ ಮಾರಕವಾಗುತ್ತಿದೆ ಎಂದು ಹೇಳಿದರು. ಜಾತ್ಯಾತೀತ ದೇಶದ ಸುಂದರ ಸಂವಿಧಾನಕ್ಕೆ ಪೀಠಿಕೆ ಬರೆದಂತಹ ಡಾ.ಬಿ.ಆರ್ ಅಂಬೇಡ್ಕರ್ ರವರ ನೆನಪುಗಳು, ಅವರು ಬರೆದ ಸಂವಿಧಾನವನ್ನು ಅಳಿಸಿ ಹಾಕುವಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ, ದೇಶವನ್ನು ಪ್ರೀತಿಸುವುದು ವಿಶ್ವಾಸದ ಒಂದು ಭಾಗ ಎಂದು ಹೆಳಿದರು.
ಈ ಸಂಧರ್ಬದಲ್ಲಿ ಮಸೀದಿ ಅಧ್ಯಕ್ಷರಾದ ಇಬ್ರಾಹಿಂ, ಸದಸ್ಯರಾದ ಅದಮ್ ಹಾಜಿ, ಸೌಕತ್ ಹಾಜಿ, ಲತೀಫ್, ಹನೀಫ್ ಇನ್ನಿತರರು ಇದ್ದರು.







