ವೀನಸ್ ವಿಲಿಯಮ್ಸ್ ಶುಭಾರಂಭ
ಸಿನ್ಸಿನಾಟಿ ಮಾಸ್ಟರ್ಸ್

ಸಿನ್ಸಿನಾಟಿ, ಆ.16: ಒಂಬತ್ತನೆ ಶ್ರೇಯಾಂಕದ ವೀನಸ್ ವಿಲಿಯಮ್ಸ್ ಸಿನ್ಸಿನಾಟಿ ಮಾಸ್ಟರ್ಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಆಟಗಾರ್ತಿ ವೀನಸ್ ತನ್ನದೇ ದೇಶದ ಅಲಿಸನ್ ರಿಸ್ಕೆ ಅವರನ್ನು 6-2, 6-0 ನೇರ ಸೆಟ್‌ಗಳ ಅಂತರದಿಂದ ಮಣಿಸಿ ಎರಡನೆ ಸುತ್ತಿಗೆ ಪ್ರವೇಶಿಸಿದ್ದಾರೆ.
37ರ ಹರೆಯದ ವೀನಸ್ ಎರಡನೆ ಸುತ್ತಿನಲ್ಲಿ ಆಸ್ಟ್ರೇಲಿಯದ ಅಶ್ಲೆ ಬಾರ್ಟಿಯವರನ್ನು ಎದುರಿಸಲಿದ್ದಾರೆ. ಬಾರ್ಟಿ ಅಮೆರಿಕದ ಲೆಪ್‌ಚೆಂಕೊರನ್ನು 6-4, 6-4 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ. ಫ್ರೆಂಚ್ ಓಪನ್ ಚಾಂಪಿಯನ್ ಲಾಟ್ವ್ವಿಯ ಆಟಗಾರ್ತಿ ಎಲೆನಾ ಒಸ್ಟಾಪೆಂಕೊ ರಶ್ಯದ ಶ್ರೇಯಾಂಕರಹಿತ ಅಲೆಕ್ಸಾಂಡ್ರಾ ಕ್ರುನಿಕ್‌ರನ್ನು 6-4, 6-4 ನೇರ ಸೆಟ್‌ಗಳಿಂದ ಮಣಿಸಿದ್ದಾರೆ. ಪೊಲೆಂಡ್‌ನ 10ನೆ ಶ್ರೇಯಾಂಕದ ಆಟಗಾರ್ತಿ ಅಗ್ನೆಸ್ಕಾ ರಾಡ್ವಾಂಸ್ಕಾ ಜರ್ಮನಿಯ ಜುಲಿಯಾ ಜಾರ್ಜಸ್ ವಿರುದ್ಧ 6-4, 6-4 ಅಂತರದಿಂದ ಸೋತು ಕೂಟದಿಂದ ಹೊರ ನಡೆದಿದ್ದಾರೆ.
Next Story





