ಬ್ರಹ್ಮಾವರ: ಸ್ವಾತಂತ್ರ್ಯೋತ್ಸವ ಅಂಗವಾಗಿ ಬಡರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಬ್ರಹ್ಮಾವರ, ಆ. 16: ತಾಜುಲ್ ಉಲಮಾ ರಿಲೀಫ್ ಸೆಲ್ ಉಡುಪಿ ಡಿವಿಷನ್ ಇದರ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಿಲೀಫ್ ಸೆಲ್ ಅಧ್ಯಕ್ಷ ರಝಾಕ್ ಉಸ್ತಾದ್ ಅಂಬಾಗಿಲು ಮತ್ತು ಅಡ್ವಕೇಟ್ ಹಂಝತ್ ಹೆಜಮಾಡಿ ಇವರ ಸಮ್ಮಖದಲ್ಲಿ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಯಲ್ಲಿನ ಬಡರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಆಸ್ಪತ್ರೆ ವೈದ್ಯಾಧಿಕಾರಿ ಮಹೇಶ್, ರಿಲೀಫ್ ಸೆಲ್ ನ ಕಾರ್ಯದರ್ಶಿ ನಾಸೀರ್ ಭದ್ರಗಿರಿ, ಜೊತೆ ಕಾರ್ಯದರ್ಶಿ ನವಾಝ್ ಮಣಿಪುರ, ಉಪಾಧ್ಯಕ್ಷ ಶಂಶುದ್ದೀನ್ ಆರ್ ಕೆ, ಉಡುಪಿ ಡಿವಿಷನ್ ಕಾರ್ಯದರ್ಶಿ ನಝೀರ್ ಸಾಸ್ತಾನ, ಕೋಶಾಧಿಕಾರಿ ಇಬ್ರಾಹಿಂ ಆರ್ ಕೆ, ಬ್ರಹ್ಮಾವರ ಸೆಕ್ಟರ್ ಕೋಶಾಧಿಕಾರಿ ಸುಲೈಮಾನ್ ರಂಗನಕೆರೆ, ರಪೀಕ್ ಸಾಸ್ತಾನ ಉಪಸ್ಥಿತರಿದ್ದರು.
Next Story





