ಪೇಸ್-ಝ್ವೆರೆವ್ ಜೋಡಿಗೆ ಸೋಲು

ಸಿನ್ಸಿನಾಟಿ, ಆ.16: ಲಿಯಾಂಡರ್ ಪೇಸ್ ಹಾಗೂ ಅವರ ಜರ್ಮನಿಯ ಜೊತೆಗಾರ ಅಲೆಕ್ಸಾಂಡರ್ ಝ್ವೆರೆವ್ ಪುರುಷರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಮುಗ್ಗರಿಸುವ ಮೂಲಕ ಸಿನ್ಸಿನಾಟಿ ಮಾಸ್ಟರ್ಸ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಒಂದು ಗಂಟೆ ಹಾಗೂ 21 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಇಂಡೋ-ಜರ್ಮನಿ ಜೋಡಿ ಪೇಸ್-ಝ್ವೆರೆವ್ ಸ್ಪೇನ್‌ನ ಜೋಡಿ ಫೆಲಿಸಿಯಾನೊ ಲೊಪೆಝ್ ಹಾಗೂ ಮಾರ್ಕ್ ಲೊಪೆಝ್ ವಿರುದ್ಧ 6-2, 6(2)-7, 6-10 ಸೆಟ್‌ಗಳಿಂದ ಸೋತಿದ್ದಾರೆ. ಸ್ಪೇನ್ ಜೋಡಿ ಮುಂದಿನ ಸುತ್ತಿನಲ್ಲಿ ನಾಲ್ಕನೆ ಶ್ರೇಯಾಂಕದ ಅಮೆರಿಕದ ಅವಳಿ ಸಹೋದರರಾದ ಬಾಬ್ ಹಾಗೂ ಮೈಕ್ ಬ್ರಯಾನ್‌ರನ್ನು ಎದುರಿಸಲಿದ್ದಾರೆ. ರೋಹನ್ ಬೋಪಣ್ಣ ಹಾಗೂ ಕ್ರೊಯೆಷಿಯದ ಇವಾನ್ ಡೊಡಿಗ್ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ.
Next Story





