ವೀರಶೈವ ಲಿಂಗಾಯಿತರ ಮದ್ಯೆ ಒಡಕು ಸಲ್ಲದು: ಶ್ರೀ ಚಂದ್ರಶೇಖರ್ ಶಿವಸ್ವಾಮಿ

ಮೂಡಿಗೆರೆ, ಆ.17: ವೀರಶೈವ ಲಿಂಗಾಯಿತ ಧರ್ಮದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಆಗದಂತೆ ತಡೆಯುವ ಉದ್ದೇಶದಿಂದ ಮಾತೆ ಮಹದೇವಿ ಮೂಲಕ ಧರ್ಮವನ್ನೇ ಒಡೆಯಲು ಹೊರಟಿರುವುದು ಕಾಂಗ್ರೆಸ್ ಸರಕಾರದ ಕೀಳು ರಾಜಕೀಯ ಧೋರಣೆ ಎಂದು ಚಿಕ್ಕಮಗಳೂರಿನ ಶ್ರೀ ಚಂದ್ರಶೇಖರ್ ಶಿವಸ್ವಾಮಿಗಳು ದೂರಿದರು.
ಅವರು ಮೂಡಿಗೆರೆ ಮಂಹಂತಿ ಮಠದಲ್ಲಿ ವೀರಶೈವ ಲಿಂಗಾಯಿತ ಮುಖಂಡರ ಸಭೆಯ ನಂತರ ಮಾತೆ ಮಹದೇವಿ ಮತ್ತು ಎಂ.ಬಿ.ಪಾಟೀಲ್ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. ಜನಪರವಾದ ಕೆಲಸವನ್ನು ಮಾಡುವುದರ ಮೂಲಕ ರಾಜಕೀಯ ಮಾಡುವುದನ್ನು ಬಿಟ್ಟು, ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಯಾರೂ ಮಾಡಬಾರದು.
ಈಗಾಗಲೆ ವೀರಶೈವ ಬೇರೆ, ಲಿಂಗಾಯಿತ ಧರ್ಮ ಬೇರೆ ಎಂದು ಮಾತೆ ಮಹಾದೇವಿ ಮುಖಾಂತರ ಕಾಂಗ್ರೆಸ್ ಪಕ್ಷ ವೀರಶೈವ ಲಿಂಗಾಯಿತರ ಮದ್ಯೆ ಒಡಕು ಉಂಟು ಮಾಡಲು ಹೊರಟಿದೆ. ವೀರಶೈವ ಲಿಂಗಾಯಿತರಲ್ಲಿ ಬಹುತೇಕರು ಕೊಂಡು ತರುವ ಸಂಬಂಧಗಳು ನಡೆಯುತ್ತಿದ್ದು, ಎಲ್ಲರೂ ಒಗ್ಗಟ್ಟಾಗಿದ್ದಾರೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಯು.ಪಿ.ರಾಜಶೇಖರ್, ಕೆ.ಆರ್.ಮಲ್ಲೇಶ್, ಬಿ.ಎಸ್.ಓಂಕಾರ್, ಬಿ.ಕೆ.ಚಂದ್ರಶೇಖರ್, ಎಂ.ಡಿ.ಇಂದ್ರೇಶ್, ಆದರ್ಶ ಕನ್ನಹಳ್ಳಿ ಸೇರಿದಂತೆ ವಿವಿಧ ವೀರಶೈವ ಮುಖಂಡರು, ಮಹಿಳಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.







