ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ 71 ನೆ ಸ್ವಾತಂತ್ರ್ಯ ದಿನಾಚರಣೆ

ಹೊನ್ನಾವರ,ಆ.17 ; ತಾಲೂಕಿನ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ 71 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಹಿರಿಯ ಮುತ್ಸದ್ದಿ , ಖ್ಯಾತ ಕೊಳಲು ವಾದಕ ಕೃಷ್ಣ ಅವಧಾನಿ ಹಾಗೂ ಶಾಲಾ ಪೂರ್ವ ವಿದ್ಯಾರ್ಥಿ, ಪ್ರಸ್ತುತ ಸೈನಿಕನಾಗಿ ಜಮ್ಮು ಕಾಶ್ಮೀರ ದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹೇಶ ಹರಿಕಾಂತ ಅವರನ್ನು ಸನ್ಮಾನಿಸಲಾಯಿತು. ಕುಮಾರಿ ಅಕ್ಷತಾ ಸಂಗಡಿಗರು ದೇಶಭಕ್ತಿ ನೃತ್ಯ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಎಲ್. ಎಮ್. ಹೆಗಡೆ ಸ್ವಾಗತಿಸಿದರು. ಎಸ್. ಎನ್. ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸುಬ್ರಹ್ಮಣ್ಯ ಭಟ್ಟ ವಂದಿಸಿದರು.
Next Story





