ಪಿಎಫ್‌ಐನಿಂದ ಕ್ಯಾನ್ಸರ್ ರೋಗಿಗೆ ಧನಸಹಾಯ
ಮಂಗಳೂರು, ಆ. 17: ಆಸ್ಪತ್ರೆಯಿಂದ ಡಿಸ್ಚಾರ್ಜ್ ಹೊಂದಲು ಹಣವಿಲ್ಲದೆ ಪರದಾಡುತ್ತಿದ್ದ ಬ್ಲಡ್ ಕ್ಯಾನ್ಸರ್ ರೋಗಿಯೊಬ್ಬರಿಗೆ ಪಿಎಫ್‌ಐ ಕಾರ್ಯಕರ್ತರು ಆರ್ಥಿಕ ಸಹಾಯ ಮಾಡಿದ್ದಾರೆ.
ಕೇರಳ ಕಣ್ಣೂರು ಜಿಲ್ಲೆಯ ಯು.ಬಿ.ಹಂಝ (60 ) ಎಂಬವರು ಬ್ಲಡ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಜುಲೈ 1ರಂದು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿದ್ದರು. ತನ್ನ ರೋಗವು ಅಲ್ಪಮಟ್ಟಿಗೆ ಗುಣ ಮುಖವಾಗಿ ಜುಲೈ 26ಕ್ಕೆ ಹಂಝಾರನ್ನು ವೈದ್ಯರು ಡಿಸ್ಚಾರ್ಜ್ ಮಾಡುವಂತೆ ವೈದ್ಯರು ಸೂಚಿಸಿದ್ದರು. ಆದರೆ ಆಲ್ಪತ್ರೆಯ ಬಿಲ್ ಪಾವತಿಸಲು ಹಣವಿಲ್ಲದೆ ಆಸ್ಪತ್ರೆಯಲ್ಲೇ ಉಳಿಯಬೇಕಾಯಿತು. ಅಲ್ಲದೆ, ನಿತ್ಯ ಖರ್ಚಿಗೂ ಹಣವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದರು. ಇದನ್ನು ಅರಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೆಡಿಕಲ್ ವಿಭಾಗದ ಕಾರ್ಯಕರ್ತರು ಇವರ ಆರ್ಥಿಕ ಸಹಾಯಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಾಕಲಾಗಿತ್ತು. ರೋಗಿಯ 1,60,000 ಬಿಲ್ಲು ಮೊತ್ತದಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿಯಲ್ಲಿ ರೋಗಿಯ ಆರ್ಥಿಕ ಸಂಕಷ್ಟಗಳನ್ನು ಮನದಟ್ಟು ಮಾಡಿಸಿ ಗರಿಷ್ಠ ರಿಯಾಯಿತಿಗಾಗಿ ಮಾಡಿದ ಮನವಿಗೆ ಸ್ಪಂದಿಸಿದ ಆಸ್ಪತ್ರೆ ಆಡಳಿತ ಮಂಡಳಿಯು 60 ಸಾವಿರ ರೂ. ರಿಯಾಯತಿ ನೀಡಿತು ಹಾಗೂ ಉಳಿದ ಮೊತ್ತವಾದ 1 ಲಕ್ಷ ರೂ.ವನ್ನು ಸ್ಥಳೀಯ ದಾನಿಗಳ ನೆರವಿನಿಂದ ಪಾವತಿಸಿ ರೋಗಿಯನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿಕೊಟ್ಟರು.
ಈ ಪ್ರಕ್ರಿಯೆಯಲ್ಲಿ ಸಹಕರಿಸಿದ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಮತ್ತು ಆರ್ಥಿಕವಾಗಿ ಸಹಕರಿಸಿದ ಎಲ್ಲರಿಗೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮೆಡಿಕಲ್ ಟೀಂ ಮಂಗಳೂರು ಪ್ರಕಟನೆಯಲ್ಲಿ ಕೃತಜ್ಞತೆ ಸಲ್ಲಿಸಿದೆ.