ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜಿನಲ್ಲಿ ಉಚಿತ ರಕ್ತ ಪರೀಕ್ಷಾ ಶಿಬಿರ
ಮೂಡುಬಿದಿರೆ, ಆ.18: ತೋಡಾರಿನಲ್ಲಿರುವ ಶಂಸುಲ್ ಉಲಮಾ ಅರಬಿಕ್ ಕಾಲೇಜಿನಲ್ಲಿ ಉಚಿತ ರಕ್ತ ಪರೀಕ್ಷಾ ಶಿಬಿರ ಇತ್ತೀಚಿಗೆ ನಡೆಯಿತು.
ಕಾಲೇಜಿನ ಅಧ್ಯಕ್ಷ ಉಸ್ಮಾನುಲ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ಉಪ ಪ್ರಾಂಶುಪಾಲ ರಫೀಕ್ ಹುದವಿ ಕೋಲಾರ ಅಧ್ಯಕ್ಷತೆ ವಹಿಸಿದ್ದರು.
ಮುಖ್ತಾರ್ ಅಡ್ಯಾರ್ ಕಣ್ಣೂರು ಶಿಬಿರ ನಡೆಸಿಕೊಟ್ಟರು. ಅಬ್ದುಲ್ ರವೂಫ್ ಫೈಝಿ ಹೈತಮಿ ಮಲಪ್ಪುರಂ, ಯಹ್ಯಾ ದಾರಿಮಿ, ಶಂಸುದ್ದೀನ್ ಯಮಾನಿ, ಫಾರೂಕ್ ಫೈಝಿ, ನಝೀರ್ ಫೈಝಿ, ಅಬ್ದಲ್ ರಹಿಮಾನ್ ಹುದವಿ, ಅಬೂಬಕರ್ ಅಝ್ಹರಿ, ಸಿರಾಜ್, ಅನ್ವರ್ ಉಪಸ್ಥಿತರಿದ್ದರು.
ಇರ್ಫಾನ್ ಕಿನ್ಯ ಸ್ವಾಗತಿಸಿದರು. ಸ್ವಾಬಿರ್ ಈಶ್ವರಮಂಗಳ ವಂದಿಸಿದರು.
Next Story