ಸಾಗರ : ಲಾರಿ ಕಳ್ಳತನ

ಸಾಗರ,ಆ.18 : ಇಲ್ಲಿನ ಜೋಗ ರಸ್ತೆಯ ಹಿಂದುಳಿದ ವರ್ಗದ ಹಾಸ್ಟೆಲ್ ಸಮೀಪದ ಭೂತಪ್ಪನ ಕಟ್ಟೆ ಹತ್ತಿರ ನಿಲ್ಲಿಸಿದ್ದ ಟಿಪ್ಪರ್ ಲಾರಿಯನ್ನು ಬುಧವಾರ ರಾತ್ರಿ ಕಳ್ಳತನ ಮಾಡಲಾಗಿದೆ.
ಲಾರಿ ಚಾಲಕ ದೀಪಕ್ ಎಂಬುವವರು ಭೂತಪ್ಪನ ಕಟ್ಟೆಯ ಹತ್ತಿರ ಲಾರಿಯನ್ನು ನಿಲ್ಲಿಸಿ (ಕೆ.ಎ.13 ಎ 2372) ಲೋಹಿಯಾ ನಗರದಲ್ಲಿರುವ ತಮ್ಮ ಮನೆಗೆ ಹೋಗಿದ್ದರು. ಗುರುವಾರ ಬೆಳಿಗ್ಗೆ ಬಂದು ನೋಡಿದಾಗ ನಿಲ್ಲಿಸಿದ್ದ ಲಾರಿ ನಾಪತ್ತೆಯಾಗಿತ್ತು.
ಆನಂದಪುರಂ ವಾಸಿ ಗುರುಪ್ರಸಾದ್ ಎಂಬುವವರಿಗೆ ಸೇರಿದ್ದ ಲಾರಿ ಇದಾಗಿದ್ದು, ಸುಮಾರು 5 ಲಕ್ಷ ರೂ. ಮೌಲ್ಯವನ್ನು ಅಂದಾಜಿಸಲಾಗಿದೆ. ಈ ಸಂಬಂಧ ಲಾರಿ ಚಾಲಕ ದೀಪಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಲಾರಿ ಕಳ್ಳತನ
Next Story





