ಹನೂರು : ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದ್ಯಸರ ಸಭೆ

ಹನೂರು,ಆ.18: ಕ್ಷೇತ್ರ ವ್ಯಾಪ್ತಿಯ ಕೂಡ್ಳರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ (ನಿ) ಸರ್ವ ಸದ್ಯಸರ ಸಭೆಯನ್ನು ಜಿಲ್ಲಾ ಚಾಮುಲ್ ಒಕ್ಕೂಟದ ಅದ್ಯಕ್ಷರಾದ ಗುರುಮಲ್ಲಪ್ಪನವರು ಉದ್ಘಾಟಿಸಿದರು ,ನಂತರ ಮಾತನಾಡಿದ ಅವರು ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭ ಬರಬೇಕಂದರೆ ಪ್ರತಿಯೊಂದು ಗ್ರಾಮದ ಹಾಲು ಉತ್ಪಾದಕರಿಂದ ಉತ್ತಮವಾದ ಗುಣಮಟ್ಟದ ಹಾಲನ್ನು ಒದಗಿಸಿದುವುದರ ಮುಖಾಂತರ ನಿಮ್ಮ ಸಂಘ ಮತ್ತು ನೂತನವಾಗಿ ಪ್ರಾರಂಭವಾಗಿರುವ ಚಾಮುಲ್ ಒಕ್ಕೂಟವನ್ನು ಲಾಭದಾಯಕವಾಗಿ ಕೂಂಡು ಹೋಗಲು ಸಾದ್ಯವಾಗುತ್ತದೆ ಎಂದು ತಿಳಿಸಿದರು .
2016-17 ಸಾಲಿನಲ್ಲಿ ಪ್ರತಿ ದಿನಕ್ಕೆ 650 ಲೀಟರ್ ಕೇಂದ್ರಕ್ಕೆ ರೈತರರಂದ ಒದಗಿಸಲಾಗುತ್ತಿದ್ದು ಇದರಿಂದ ಒಕ್ಕೂಟಕ್ಕೆ ವರ್ಷಕ್ಕೆ ನಿವ್ವಳ ಲಾಭ 125424 ರೂ.ಗಳು ಬಂದಿದ್ದು ಮುಂದಿನ 2017-18 ರ ಸಾಲಿನ ಅಂದಾಜು ಅಯವ್ಯಯಗಳನ್ನು ಸಹ ಮಂಡಿಸಿದರು. ಸಭೆಯಲ್ಲಿ ಕಳೆ ವರ್ಷದ ಹಲವಾರು ನೂನ್ಯತೆಗಳಿಗೆ ಪರಿಹಾರ ಕಂಡುಕೂಳ್ಳುವ ಹಲವಾರು ಮಾರ್ಗ ಸೂಚಿಗಳನ್ನು ತಿಳಿಸಿದರು .
ಪ್ರತಿಯೊಬ್ಬರೂ ಸಹ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಬ್ಯಾಂಕ್‍ನಲ್ಲಿ ಎನ್ ಪಿ ಸಿ ಯ ಜೊತೆ ಜೋಡನೆ ಮಾಡುವುದು ಕಡ್ಡಾಯವಾಗಿರುತ್ತದೆ ,ಅದಲ್ಲದೆ ರಾಸುಗಳಿಗೆ ನೀಡುವ ಆಹಾರವನ್ನು ಸಮತೋಲನವಾಗಿ ನೀಡಿದಾಗ ಮಾತ್ರ ಹಾಲಿನ ಉತ್ಪತ್ತಿ ಹೆಚ್ಚಿಸಿ ಸರ್ಕಾರದಿಂದ ಬರುವಂತಹ ಹಲವಾರು ಲಾಭದಾಯಕ ಯೋಜನೆಗಳನ್ನು ಸದುಪಯೋಗ ಪಡೆಸಿಕೂಳ್ಳಿ ಎಂದು ಸಹಾಯಕ ವ್ಯವಸ್ಥಾಪಕರಾದ ನಾಗರಾಜುರವರು ತಿಳಿಸಿದರು .
ಇದೇ ಸಂದರ್ಭದಲ್ಲಿ ಚಾಮುಲ್‍ನ ನರ್ದೇಶಕರಾದ ನಂಜುಂಡಸ್ವಾಮಿ ವಿಸ್ತರಣಾದುಕಾರಿಯಾದ ವೆಂಕಟೇಶ್ ನೆಲ್ಲೂರು ಹಾಲು ಉತ್ತಾದಕರ ಸಂಘದ ಅದ್ಯಕ್ಷರಾದ ಮಾದಪ್ಪ ಶೆಟ್ಟಿ ಕಾರ್ಯದರ್ಶಿ ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.







