ಶಶಿಕಲಾ ಭೇಟಿಯಾದ ಟಿಟಿವಿ ದಿನಕರನ್

ಬೆಂಗಳೂರು, ಆ.18: ಮಾಜಿ ಸಿಎಂ ಜಯಲಲಿತಾ ಅವರ ಸಾವಿನ ರಹಸ್ಯದ ತನಿಖೆಯನ್ನು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರು ನ್ಯಾಯಾಂಗ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಎಐಡಿಎಂಕೆ ಮುಖಂಡ ಟಿ.ಟಿ.ವಿ.ದಿನಕರನ್ ಶುಕ್ರವಾರ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಜಯಲಲಿತಾ ಅವರ ಸಾವು ಸ್ವಾಭಾವಿಕವಾಗಿ ಆಗಿಲ್ಲ. ಹಲವು ಅನುಮಾನಗಳಿಂದ ಕೂಡಿದೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ ನ್ಯಾಯಂಗ ತನಿಖೆಗೆ ಆದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಅವರ ಪರಮಾಪ್ತರಾಗಿದ್ದ ಶಶಿಕಲಾ ಅವರೊಂದಿಗೆ ಮಾತುಕತೆ ನಡೆಸಲು ಅವರ ಸಂಬಂಧಿ ಟಿ.ಟಿ.ವಿ.ದಿನಕರನ್ ಶುಕ್ರವಾರ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದರು. ಜೈಲಿನಲ್ಲಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಎಐಎಡಿಎಂಕೆ ಮತ್ತು ಒಪಿಎಸ್ ಬಣಗಳು ಒಂದಾಗಲು ಮುಂದಾಗಿದ್ದು, ಒ.ಪನ್ವೀರ್ ಸೆಲ್ವಂ ಅವರು ಜಯ ಅವರ ನಿವಾಸ, ಪೋಯೆಸ್ ಗಾರ್ಡನ್‌ನನ್ನು ಮ್ಯೂಜಿಯಂನ್ನಾಗಿ ಪರಿವರ್ತಿಸಬೇಕು. ಜಯಾ ಅವರ ಸಾವಿನ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಸಾವಿನ ಪ್ರಕರಣವನ್ನು ಸರಕಾರ ತನಿಖೆಗೆ ವಹಿಸಿದೆ. ಪೋಯೆಸ್ ಗಾರ್ಡನ್‌ನನ್ನು ಸ್ಮಾರಕವಾಗಿ ಪರಿವರ್ತಿಸುವ ನಿರ್ಧಾರಕ್ಕೆ ಜಯಲಲಿತಾ ಅವರ ಸೊಸೆ ಕಾನೂನು ಹೋರಾಟ ಮಾಡಲು ನಿರ್ಧರಿಸಿದ್ದಾರೆ.







