ಬಳ್ಳಾರಿ ಜಿಪಂ ಅಧ್ಯಕ್ಷೆ ಭಾರತಿ ರೆಡ್ಡಿಗೆ ಬಿಗ್ ರಿಲೀಫ್
ಬಳ್ಳಾರಿ, ಆ.18: ನಿಯಮ ಉಲ್ಲಂಘಿಸಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಕೆ ಆರೋಪದಿಂದ ಹಲವು ತಿಂಗಳಿಂದ ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಅಧಿಕಾರದಿಂದ ದೂರ ಉಳಿದಿದ್ದರು. ಆದರೆ, ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದ್ದರಿಂದ ಅವರಿಗೆ ಸದ್ಯ ರಿಲೀಫ್ ಸಿಕ್ಕಿದೆ. ಈ ಅವಧಿಯಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಬಹುದು. ಆದರೆ, ಹೈಕೋರ್ಟ್ ಪ್ರಕಟಿಸುವ ತೀರ್ಪಿಗೆ ಬದ್ಧರಾಗಿರಬೇಕು ಎಂದು ಸುಪ್ರಿಂಕೋರ್ಟ್ ಅರ್ಜಿದಾರರಿಗೆ ಸೂಚನೆ ನೀಡಿದೆ. ಜಿಪಂಗೆ ಭಾರತಿ ಭೇಟಿ: ಸುಪ್ರೀಂಕೋರ್ಟ್ ಸೂಚನೆಯ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಭಾರತಿ ಜಿಪಂ ಕಚೇರಿಗೆ ತೆರಳಿ ಅಧಿಕಾರ ಸ್ವೀಕರಿಸಲು ಮುಂದಾಗಿದ್ದರು. ಆದರೆ, ಸುಪ್ರೀಂ ತೀರ್ಪಿನ ಅಧಿಕೃತ ದಾಖಲೆಗಳು ಕೈಸೇರದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಿ ವಾಪಸಾಗಿದ್ದಾರೆ.
Next Story





