ಸರಣಿ ಅಪಘಾತ: ಆರು ಮಂದಿಗೆ ಗಾಯ
ಉಡುಪಿ, ಆ.18: ನಿಟ್ಟೂರು ಶ್ರೀಸೋಮನಾಥೇಶ್ವರ ದೇವಸ್ಥಾನಕ್ಕೆ ಹೋಗುವ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆ.17ರಂದು ಮಧ್ಯಾಹ್ನ ವೇಳೆ ಸಂಭವಿಸಿದ ಸರಣಿ ಅಪಘಾತದಲ್ಲಿ ಆರು ಗಾಯಗೊಂಡ ಬಗ್ಗೆ ವರದಿ ಯಾಗಿದೆ.
ಅಂಬಾಗಿಲು ಜಂಕ್ಷನ್ ಕಡೆಯಿಂದ ಉಡುಪಿ ಕರಾವಳಿ ಜಂಕ್ಷನ್ ಕಡೆಗೆ ಹೋಗುತ್ತಿದ್ದ ಸುರೇಂದ್ರ ಶೆಟ್ಟಿ ಎಂಬವರ ಕಾರು ರಸ್ತೆ ಬದಿ ನಿಲ್ಲಿಸಿದ ಬೈಕ್ ಮೇಲೆ ಕುಳಿತು ಮೊಬೈಲ್‌ನಲ್ಲಿ ಮಾತನಾಡುತಿದ್ದ ಮಿಥುನ್‌ಗೆ ಢಿಕ್ಕಿ ಹೊಡೆ ಯಿತು. ಇದರಿಂದ ಮಿಥುನ್ ಗಾಯಗೊಂಡಿದ್ದು, ಬಳಿಕ ಕಾರು ನಿಯಂತ್ರಣ ತಪ್ಪಿ ಅದೇ ಮಾರ್ಗದಲ್ಲಿ ಬರುತ್ತಿದ್ದ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆಯಿತು.
ಆ ಕಾರಿನಲ್ಲಿದ್ದ ಶಾಲಿನಿ ಶೆಟ್ಟಿ, ಸಂದೀಪ್ ಶೆಟ್ಟಿ, ಗಣೇಶ್ ಶೆಟ್ಟಿ, ಪ್ರಭಾಕರ ಶೆಟ್ಟಿ ಎಂಬವರು ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಈ ಕಾರು ರಸ್ತೆಯ ವಿಭಾಜಕ ದಾಟಿ ಇನ್ನೊಂದು ಬದಿಯ ರಸ್ತೆಯಲ್ಲಿ ನಿಂತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





