ಉಳ್ಳಾಲ: ಮಾತ್ಮಗಾಂಧಿ ರಂಗಮಂಟಪಕ್ಕೆ ಚಾಲನೆ

ಉಳ್ಳಾಲ, ಆ. 18: ಉಳ್ಳಾಲ ನಗರಸಭೆ ತ್ವರಿತ ಗತಿಯಲ್ಲಿ ಆಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ. ಈಗಾಗಲೇ ಮುಖ್ಯ ರಸ್ತೆ ಆಭಿವೃದ್ಧಿ, ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಕಾರ್ಯ ಮುಂದುವರೆದಿದೆ.
ಉಳ್ಳಾಲದ ಅಭಿವೃದ್ಧಿಗೆ ರಾಜ್ಯ ಸರಕಾರ ಹೆಚ್ಚುವರಿ 25 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಸರಕಾರದ ಅನುದಾನವನ್ನು ಬಳಸಿಕೊಂಡು ಮುಂದಿನ 2020ಕ್ಕೆ ಉಳ್ಳಾಲ ನಗರಸಭೆ ರಾಜ್ಯದಲ್ಲಿ ಮಾದರಿ ನಗರಸಭೆಯಾಗಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಉಳ್ಳಾಲ ನಗರಸಭಾವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಮಹಾತ್ಮಗಾಂಧಿ ರಂಗಮಂಟಪಕ್ಕೆ ಚಾಲನೆ ನೀಡಿ ಮಾತನಾಡಿದರು. ಉಳ್ಳಾಲದ ಸರ್ವಾಂಗೀಣ ಅಭಿವೃದ್ಧಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಿಂದ ಹೆಚ್ಚುವರಿಯಾಗಿ 25 ಕೋಟಿ ಅನುದಾನವನ್ನು ಬಳಸಿಕೊಂಡು ಮೂಲಭೂತ ಸೌಕರ್ಯ ಅಭಿವೃದ್ಧಿಯನ್ನು ವಿಸ್ತರಿಸಲಗುವುದು. ಸರಕಾರ ನೀಡಿದ ಸವಲತ್ತನ್ನು ಉತ್ತಮ ರೀತಿಯಲ್ಲಿ ಬಳಸುವುದರೊಂದಿಗೆ ಉಳ್ಳಾಲವನ್ನು ಮಾದರಿ ನಗರಸಭೆಯನ್ನಾಗಿ ಮಾಡಲು ಸರ್ವರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ನಗರಸಭಾ ನಿಧಿಯ ಶೇ. 3, ಶೇ. 7.25, ಶೇ.24.10ರ ನಿಧಿಯಡಿ ಅರ್ಹ ವೈದ್ಯಕೀಯ ವೆಚ್ಚಕ್ಕೆ ಒಟ್ಟು 70.71 ಲಕ್ಷ ರೂ. ನೆರವು, ಪೋಷಣಾ ಭತ್ಯೆ, ಮನೆ ನಿರ್ಮಾಣಕ್ಕೆ ಸಹಾಯಧನದ ಚೆಕ್ ವಿತರಿಸಲಾಯಿತು. ಪವರ್ ಲಿಫ್ಟಿಂಗ್‌ನಲ್ಲಿ ವಿಶೇಷ ಸಾಧನೆ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟು ಆ್ಯಶ್ಲ್ ಎ.ಜೆ.ಡಿ.ಸೋಜ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಉಳ್ಳಾಲ ನಗರಸಭಾ ವ್ಯಾಪ್ತಿಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸ್ವಚ್ಛ ಭಾರತ್ ಅಬಿಯಾನದಡಿ ವಿವಿಧ ಸ್ಪರ್ಧೆಗಳು, ಜಾಥಾ ಮತ್ತು ಬೀದಿ ನಾಟಕ ನಡೆಯಿತು, ಕಾವೇರಿ ಲಯನ್ಸ್ ಕ್ಲಬ್‌ನ ಪ್ರಾಯೋಜಕತ್ವದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಇಮೋನು ವಹಿಸಿದ್ದರು. ಉಪಾಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್ ತೊಕ್ಕೊಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಸದಸ್ಯರಾದ ಮುಸ್ತಾಫ ಅಬ್ದುಲ್ಲಾ, ಬಾಝಿಲ್ ಡಿ.ಸೋಜ, ಇಸ್ಮಾಯಿಲ್ ಪೊಡಿಮೋನು, ಫಾರೂಕ್ ಉಳ್ಳಾಲ್, ಮಹಮ್ಮದ್ ಮುಕ್ಕಚ್ಚೇರಿ, ಸುಂದರ ಉಳಿಯ, ಯು.ಎಚ್. ಫಾರೂಕ್, ಶಶಿಕಲಾ ಶೆಟ್ಟಿ, ಸೂರ್ಯಕಲಾ ಸುರೇಶ್, ಮೀನಾಕ್ಷಿ ದಾಮೋದರ್,ಜೇನ್ ಶಾಂತಿ ಡಿ.ಸೋಜಾ, ನಾಮನಿರ್ದೇಶನ ಸದಸ್ಯರಾದ ರವಿ ಬಂಡಸಾಲೆ, ಕಿಶೋರ್, ರಿಚ್ಚಾರ್ಡ್ ಡಿ.ಸೋಜಾ, ಹಮ್ಮಬ್ಬ, ಕಾವೇರಿ ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ಡಾ ಪ್ರಯಾದರ್ಶಿನಿ, ಯೋಜನಾ ನಿದೇ ಶರ್ಕ ಪ್ರಸನ್ನ ಉಪಸ್ಥಿತರಿದ್ದರು.
ಪೌರಾಯುಕ್ತ ವಾಣಿ ವಿ.ಆಳ್ವ ಸ್ವಾಗತಿಸಿದರು. ಸದಸ್ಯ ಯು.ಎ.ಇಸ್ಮಾಯಿಲ್ ಕಾರ್ಯಕ್ರಮ ನಿರ್ವಹಿಸಿದರು. ಕಿರಿಯ ಆರೋ್ಯ ನಿರೀಕ್ಷಕ ರಾಜೇಶ್ ವಂದಿಸಿದರು.







