Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಬುದ್ಧ ಚಿಂತನೆಯ ಬೇರುಗಳನ್ನು...

ಬುದ್ಧ ಚಿಂತನೆಯ ಬೇರುಗಳನ್ನು ಅರಸುತ್ತಾ...

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ18 Aug 2017 6:13 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಬುದ್ಧ ಚಿಂತನೆಯ ಬೇರುಗಳನ್ನು ಅರಸುತ್ತಾ...

‘‘ವಿಶ್ವ ಪ್ರಸಿದ್ಧ ಭಾರತದ ಬೌದ್ಧ ಸ್ಮಾರಕಗಳು’’ ದೇಶದ ಬೌದ್ಧ ಸ್ಥೂಪಗಳನ್ನು, ಸ್ಮಾರಕಗಳನ್ನು ಹಾಗೂ ಜೊತೆ ಜೊತೆಯಾಗಿ ಬೌದ್ಧ ಇತಿಹಾಸವನ್ನು ಪರಿಚಯಿಸುವ ಕೃತಿ. ಮಹದೇವಕುಮಾರ್ ಡಿ. ಮಣಗಳ್ಳಿ ಅವರು ಈ ಕೃತಿಯನ್ನು ಬರೆದಿದ್ದಾರೆ. ಪ್ರಗತಿಶೀಲ ಬೌದ್ಧರಾಗಿರುವ ಲೇಖಕರು, ಸಾರನಾಥ, ಪಾಟಲೀಪುತ್ರ, ಸಾಂಚಿ, ಅಜಂತಾ, ಎಲ್ಲೋರಾ, ಅಮರಾವತಿ, ಅಯೋಧ್ಯ, ಕೋಸಂಬಿ, ಗಾಂಧಾರ, ನಾಗಾರ್ಜುಕೊಂಡ, ಭರಹುತ್, ಮಗಧ, ಮಥುರಾ, ಮಿಥಿಲಾ, ಕುಶೀನಾರ, ವಾರಣಾಸಿ, ವಿಕ್ರಮಶಿಲಾ, ವಿಧಿಶಾ, ವೈಶಾಲಿ, ಶ್ರಾವಸ್ತಿ, ಕೇಸರಿಯ, ಲೌರಿಯಾನಂದನಗಡ್, ಲುಂಬಿಣಿ ಮೊದಲಾದ ಯಾತ್ರಾಸ್ಥಳಗಳು, ಸ್ಮಾರಕಗಳನ್ನು ಸವಿಸ್ತಾರವಾಗಿ ಹಲವಾರು ಅಧಿಕೃತ ಆಕರ ಗ್ರಂಥಗಳ ಆಧಾರದ ಮೇಲೆ ಈ ಕೃತಿಯಲ್ಲಿ ಪರಿಚಯಿಸಿದ್ದಾರೆ.

ಬೌದ್ಧ ಸ್ಮಾರಕಗಳನ್ನು ಪರಿಚಯಿಸಿಕೊಳ್ಳುವುದೆಂದರೆ ಈ ನೆಲದ ನಿಜವಾದ ಇತಿಹಾಸವನ್ನು ನಮ್ಮದಾಗಿಸಿಕೊಳ್ಳುವುದು ಎಂದು ಅರ್ಥ. ವೈದಿಕೀಕರಣದಿಂದ ಕಲುಷಿತಗೊಂಡಿರುವ ಇತಿಹಾಸವನ್ನು ಶುಚೀಕರಿಸಿ, ಬೌದ್ಧ ಧರ್ಮ, ಅದರ ಬೆಳವಣಿಗೆಗಳ ಜೊತೆ ಜೊತೆಯಲ್ಲಿ ಭಾರತದ ಇತಿಹಾಸವನ್ನು ನಮ್ಮದಾಗಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ. ಈ ನಿಟ್ಟಿನಲ್ಲಿ ನಾವು ಬೌದ್ಧ ಧರ್ಮದ ಬೇರುಗಳು ಹೇಗೆ ದೇಶಾದ್ಯಂತ ವಿಸ್ತರಿಸಿಕೊಂಡಿದೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗಿದೆ. ಆ ಮೂಲಕ, ವೈದಿಕ ಇತಿಹಾಸ ಪ್ರಚಾರ ಪಡಿಸುವ ರೋಚಕ ಕತೆಗಳಿಗಿಂತ ಹೇಗೆ ಈ ದೇಶದ ಚರಿತ್ರೆ ಭಿನ್ನವಾಗಿದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಲೇಖಕರು ಅತ್ಯಂತ ಕುತೂಹಲಕರವಾಗಿ ವಿವಿಧ ಸ್ಥೂಪ, ಸ್ಮಾರಕಗಳ ಹಿನ್ನೆಲೆಯನ್ನು ಓದುಗರಿಗೆ ತೆರೆದುಕೊಡುತ್ತಾರೆ. ಇದು ಕೇವಲ ಕಲ್ಲುಗಳನ್ನಷ್ಟೇ ನಮಗೆ ಪರಿಚಯಿಸುವುದಿಲ್ಲ. ಆ ಕಲ್ಲುಗಳೊಳಗೆ ಒಡಲುಗೊಂಡ ನೆಲದ ಚರಿತ್ರೆಯನ್ನೂ ಸಂಕ್ಷಿಪ್ತವಾಗಿ ತೆರೆದು ನೋಡುವ ಬಗೆಯನ್ನು ಕಲಿಸಿಕೊಡುತ್ತದೆ. ಒಂದು ಕಾಲದಲ್ಲಿ ಈ ದೇಶಾದ್ಯಂತ ಬೌದ್ಧ ಧರ್ಮ ಹೇಗೆ, ಶ್ರೀಮಂತವಾಗಿ ಹರಡಿಕೊಂಡಿತ್ತು ಎನ್ನುವುದನ್ನು ಈ ಕೃತಿ ನಮಗೆ ತಿಳಿಸುತ್ತದೆ. ಒಂದು ರೀತಿಯ ಪ್ರವಾಸ ಕಥನದ ತರದಲ್ಲಿ ಒಂದೊಂದೇ ಪ್ರದೇಶಗಳ ಬೌದ್ಧ ಇತಿಹಾಸಗಳು ನಮಗೆ ತೆರೆದುಕೊಳ್ಳುತ್ತಾ ಹೋಗುತ್ತದೆ.
 ರಾಜರ ಇತಿಹಾಸಗಳು, ಆಗಿನ ಸಾಮಾಜಿಕ ಸ್ಥಿತಿಗತಿ, ಬೌದ್ಧ ಧರ್ಮವನ್ನು ಹರಡಲು ಕಾರಣರಾದ ಬಿಕ್ಕುಗಳು, ಸ್ಮಾರಕಗಳ ಹಿಂದಿರುವ ಅರಸರು, ಪ್ರವಾಸಿಗರ ಕಣ್ಣಲ್ಲಿ ಬೌದ್ಧ ಧರ್ಮ ಹೀಗೆ....ಬೇರೆ ಬೇರೆ ನೆಲೆಯಲ್ಲಿ ನಾವು ಬುದ್ಧನ ವಿಚಾರಗಳನ್ನು ಇಲ್ಲಿ ನಮ್ಮದಾಗಿಸಿಕೊಳ್ಳಬಹುದು. ಲಿಪಿಗ್ರಾಫ್, ಮೈಸೂರು ಹೊರತಂದಿರುವ ಈ ಕೃತಿಯ ಮುಖಬೆಲೆ 180 ರೂಪಾಯಿ. ಆಸಕ್ತರು 80502 33270 ದೂರವಾಣಿಯನ್ನು ಸಂಪರ್ಕಿಸಬಹುದು.
 

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
-ಕಾರುಣ್ಯಾ
-ಕಾರುಣ್ಯಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X