ರಸ್ತೆ ಅಪಘಾತ; ಪೊಲೀಸ್ ಪೇದೆ ಸಾವು

ಭಟ್ಕಳ,ಆ.18: ಬೈಕ್ ಮತ್ತು ಕಾರ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಹೊನ್ನಾವರ ಠಾಣಾ ಪೊಲೀಸ್ ಪೇದೆ ಸಾವನ್ನಪ್ಪಿರುವ ಘಟನೆ ಮುರುಡೇಶ್ವರ ಬಳಿ ಗುಮ್ಮನಹಕ್ಕಲ್ ಹೆದ್ದಾರಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ಮೃತ ಪೊಲೀಸ್ ಪೇದೆಯನ್ನು ಹೊನ್ನಾವರ ಪೊಲೀಸ್ ಠಾಣೆಯಲ್ಲಿಕ ರ್ತವ್ಯ ನಿರ್ವಹಿಸುತ್ತಿರುವ ಮುರುಡೇಶ್ವರ ಮೂಡುಕೇರಿ ನಿವಾಸಿ ರಾಮಚಂದ್ರ ಕೊಪ್ಪ ನಾಯ್ಕ(30) ಎಂದು ಗುರುತಿಲಾಗಿದೆ.
ಇವರು ತಮ್ಮ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಮಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ಕಾರು ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಕಳೆದ 9ವರ್ಷಗಳಿಂದ ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಕರ್ತವ್ಯ ನಿರತರಾಗಿದ್ದು ಮೇ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟದ್ದರು.
ಕಾರ್ ಚಾಲಕ ಮಂಗಳೂರು ಮುಲ್ಕಿಯ ಮುಜಾಹಿದ್ದುನ್ನೂರ್‍ರನ್ನು ವಶಕ್ಕೆ ಪಡಿಸಿಕೊಂಡಿರುವ ಮುರುಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story





